ಮಾಸ್ಕ್ ಧರಿಸದೆ ಓಡಾಡುವವರ ಮೇಲೆ ಖಾಕಿ ಕಣ್ಗಾವಲು, ಮಾಸ್ಕ್ ಹಾಕಿಲ್ಲ ಅಂದ್ರೆ ಫೈನ್ ಪಕ್ಕ
ಬೆಂಗಳೂರಲ್ಲಿ ಮಾಸ್ಕ್ ಇಲ್ಲದೇ ಓಡಾಡೋರಿಗೆ ಇಂದಿನಿಂದ್ಲೇ ದಂಡ ಪ್ರಯೋಗ ಶುರುವಾಗಿದೆ. ನಗರದಲ್ಲಿ ಮಾರ್ಷಲ್ಗಳು ಮತ್ತೆ ಅಲರ್ಟ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಮತ್ತೆ ಮಾಸ್ಕ್ ಫೈನ್ ಹಾಕಲು ಶುರು ಮಾಡಿದ್ದಾರೆ.
ಕೊವಿಡ್ ರೂಪಾಂತರಿ ‘ಒಮಿಕ್ರಾನ್’ ವೈರಸ್ ಆತಂಕ ಹಿನ್ನೆಲೆ ರಾಜ್ಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮತ್ತೆ ಕಡ್ಡಾಯಗೊಳಿಸಲಾಗಿದೆ. ಮದುವೆ, ಸಮಾರಂಭ, ಕಾಲೇಜು, ಮಾಲ್, ಥಿಯೇಟರ್ ಹೀಗೆ ಹೆಚ್ಚು ಜನ ಸೇರುವ ಕಡೆ ಮಾಸ್ಕ್ ಧರಿಸಲೇಬೇಕು. ಬೆಂಗಳೂರಲ್ಲಿ ಮಾಸ್ಕ್ ಇಲ್ಲದೇ ಓಡಾಡೋರಿಗೆ ಇಂದಿನಿಂದ್ಲೇ ದಂಡ ಪ್ರಯೋಗ ಶುರುವಾಗಿದೆ. ನಗರದಲ್ಲಿ ಮಾರ್ಷಲ್ಗಳು ಮತ್ತೆ ಅಲರ್ಟ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಮತ್ತೆ ಮಾಸ್ಕ್ ಫೈನ್ ಹಾಕಲು ಶುರು ಮಾಡಿದ್ದಾರೆ. ಮೊದಲು ಜನರಿಗೆ ಮಾಸ್ಕ್ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದ್ದು ಕೇಳದೆ ಹೊದ್ರೆ ದಂಡ ಹಾಕಲಿದ್ದಾರೆ. ಈಗಾಗಲೇ, ಮೆಜೆಸ್ಟಿಕ್, ಚಿಕ್ಕಪೇಟೆ, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಡ ಹಾಕಲು ಪೊಲೀಸರು ಆರಂಭಿಸಿದ್ದಾರೆ.
Published on: Nov 29, 2021 08:34 AM
Latest Videos