ದೇವರ ಮಧ್ಯೆ ಪುನೀತ್ ಫೋಟೋ ಇಟ್ಟು ಪೂಜೆ, ಸದ್ಯದಲ್ಲೇ ದೇವಸ್ಥಾನ ನವೀಕರಿಸಿ ನಿತ್ಯಪೂಜೆ; ಇದು ಅಪ್ಪು ಅಭಿಮಾನಿ ಅಭಿಲಾಷೆ
ದೇವರಾಜು ಮನೆಯ ಪಕ್ಕದಲ್ಲಿರುವ ದೇವಸ್ಥಾನ ಶಿಥಿಲಗೊಂಡಿದ್ದು, ಅದನ್ನು ಕೆಡವಲಾಗಿದೆ. ಹಾಗಾಗಿ ದೇವರಾಜು ಅವರ ಮನೆಯ ಕೋಣೆಯೊಂದರಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಈ ದೇವಸ್ಥಾನದ ಶನೇಶ್ವರ-ಮುನೇಶ್ವರ ದೇವರ ಪಕ್ಕದಲ್ಲೇ ಅಪ್ಪು ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಜೊತೆಗೆ ದೇವರಿಗೆ ಯಾವ ರೀತಿ ಸಕಲ ಪೂಜೆಗಳು ಮಾಡುತ್ತಾರೋ ಅದೇ ರೀತಿ ಅಪ್ಪು ಫೋಟೋಗೂ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅರ್ಚಕ ನಂದೀಶ್ ಹೇಳಿದ್ದಾರೆ.
ತುಮಕೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ನಟ ಪುನೀತ್ ರಾಜ್ ಕುಮಾರ್ (Puneeth rajkumar) ಅವರ ಭಾವಚಿತ್ರ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿ ಅಭಿಮಾನ ಮೆರೆದ ಅಭಿಮಾನಿಯೋರ್ವರು ಈಗ ಅಪ್ಪುಗೆ ದೇವರ ಸ್ಥಾನಕೊಟ್ಟಿದ್ದಾರೆ. ಶನೈಶ್ವರ-ಮುನೇಶ್ವರ ಸನ್ನಿಧಿಯಲ್ಲಿ ಅಪ್ಪು ಫೋಟೋ ಇಟ್ಟು ನಿತ್ಯ ಪೂಜೆ ಮಾಡುತಿದ್ದಾರೆ. ಇಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಅವರಿಗಾಗಿ ದೇವಾಲಯ ಕಟ್ಟಿಸುವ ಮಹದಾಸೆಯನ್ನೂ ಹೊಂದಿದ್ದಾರೆ. ತುಮಕೂರು ತಾಲೂಕಿನ ಅಮಲಾಪುರ ಗ್ರಾಮದ ಯುವಕ ದೇವರಾಜು ಶಬರಿಮಲೆ ಯಾತ್ರೆ ವೇಳೆ ಅಪ್ಪು ಪೊಟೋ ಸಹಿತ ಪಾದಯಾತ್ರೆ ಮಾಡಿ ಸುದ್ದಿಯಾಗಿದ್ದರು. ಅಪ್ಪು ಪೊಟೋಗೆ ಅಯ್ಯಪ್ಪ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದರು. ಆದರೆ ಅದೇ ಅಭಿಮಾನಿ ದೇವರಾಜು ಅಪ್ಪುಗೆ ದೇವರ ಸ್ಥಾನ ಕೊಟ್ಟಿದ್ದಾರೆ. ಶಬರಿಮಲೆಯಿಂದ ಹಿಂದಿರುಗಿದ ದೇವರಾಜ್, ಅಪ್ಪು ಭಾವಚಿತ್ರಕ್ಕೆ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಇನ್ನೊಂದು ಪೋಟೊವನ್ನು ಶನೇಶ್ವರ-ಮುನೇಶ್ವರ ದೇವರ ಸನ್ನಿಧಾನದಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದಾರೆ.
ದೇವರಾಜು ಮನೆಯ ಪಕ್ಕದಲ್ಲಿರುವ ದೇವಸ್ಥಾನ ಶಿಥಿಲಗೊಂಡಿದ್ದು, ಅದನ್ನು ಕೆಡವಲಾಗಿದೆ. ಹಾಗಾಗಿ ದೇವರಾಜು ಅವರ ಮನೆಯ ಕೋಣೆಯೊಂದರಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಈ ದೇವಸ್ಥಾನದ ಶನೇಶ್ವರ-ಮುನೇಶ್ವರ ದೇವರ ಪಕ್ಕದಲ್ಲೇ ಅಪ್ಪು ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಜೊತೆಗೆ ದೇವರಿಗೆ ಯಾವ ರೀತಿ ಸಕಲ ಪೂಜೆಗಳು ಮಾಡುತ್ತಾರೋ ಅದೇ ರೀತಿ ಅಪ್ಪು ಫೋಟೋಗೂ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅರ್ಚಕ ನಂದೀಶ್ ಹೇಳಿದ್ದಾರೆ.
ದೇವರಾಜು ಅವರ ಇಡೀ ಕುಟುಂಬ ವರನಟ ರಾಜ್ಕುಮಾರ್ ಕುಟುಂಬದವರ ಅಭಿಮಾನಿಗಳು. ರಾಜ್ಕುಮಾರ್ ಕುಟುಂಬದ ಎಲ್ಲಾ ನಟರ ಚಿತ್ರವನ್ನು ಇವರು ವೀಕ್ಷಿಸುತ್ತಾರೆ. ಅದರಲ್ಲಿ ಅಪ್ಪು ಅಭಿನಯದ ಸಿನಿಮಾ ಅಂದರೆ ಈ ಮನೆಯವರಿಗೆ ಪಂಚಪ್ರಾಣ. ಪುನೀತ್ ರಾಜ್ಕುಮಾರ್ ನಮ್ಮನಗಲಿದಾಗ ಅಪ್ಪು ಪೋಟೋ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿದ್ದಾರೆ. ಕೆಡವಿದ ಶನೇಶ್ವರ-ಮುನೇಶ್ವರ ದೇವಾಲಯ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ದೇವಸ್ಥಾನ ಲೋಕಾರ್ಪಣೆ ಬಳಿಕ ದೇವಸ್ಥಾನದ ಗರ್ಭಗುಡಿಯಲ್ಲಿ ಶನೇಶ್ವರ-ಮುನೇಶ್ವರ ವಿಗ್ರಹದೊಂದಿಗೆ ಅಪ್ಪು ವಿಗ್ರಹವನ್ನೂ ನಿರ್ಮಿಸಿ ಪೂಜೆ ಮಾಡಲು ಚಿಂತನೆ ನಡೆಸಿದ್ದಾರೆ.
ಸದ್ದಿಲ್ಲದೇ ಸಾವಿರಾರು ಜನರ ಬಾಳಿಗೆ ಬೆಳಕಾದ ಅಪ್ಪು ಸಾಕ್ಷಾತ್ ದೇವರೇ. ದೇವರಿಂದ ಮಾತ್ರ ಆ ಒಂದು ಸತ್ಕಾರ್ಯ ಸಾಧ್ಯ ಎನ್ನುವುದು ಅಭಿಮಾನಿ ದೇವರಾಜ್ ಕುಟುಂಬದ ನಂಬಿಕೆ. ಹಾಗಾಗಿಯೇ ಅಪ್ಪುವಿನಲ್ಲಿ ದೇವರನ್ನು ಕಂಡು ನಿತ್ಯ ಪೂಜೆ ಮಾಡಿ ಅಭಿಮಾನ ಮೆರೆದಿದ್ದಾರೆ.
ವರದಿ: ಮಹೇಶ್
ಇದನ್ನೂ ಓದಿ: ವಿಜಯನಗರ: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ; 75 ಜನರಿಂದ ನೇತ್ರದಾನ, ರಕ್ತದಾನ, ಅನ್ನ ಸಂತರ್ಪಣೆ
‘ರೈಡ್ ಫಾರ್ ಅಪ್ಪು’: ಪುನೀತ್ ಸ್ಮರಣಾರ್ಥ ಬೈಕ್ ಮೆರವಣಿಗೆಗೆ ಸಿ.ಎನ್. ಅಶ್ವತ್ಥ ನಾರಾಯಣ ಚಾಲನೆ
Published On - 8:15 am, Mon, 29 November 21