ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ

Salman Khan: ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಖಾನ್​ ಅವರನ್ನು ಆಯುಶ್​ ಶರ್ಮಾ ಮದುವೆ ಆಗಿದ್ದಾರೆ. ಸಲ್ಲು ಯಾಕೆ ಇನ್ನೂ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಆಯುಶ್​ ಶರ್ಮಾ ಉತ್ತರ ನೀಡಿದ್ದಾರೆ.

ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ
ಅರ್ಪಿತಾ ಖಾನ್​, ಆಯುಶ್​ ಶರ್ಮಾ, ಸಲ್ಮಾನ್​ ಖಾನ್​

ನಟ ಸಲ್ಮಾನ್​ ಖಾನ್​ (Salman Khan) ಅವರ ಮದುವೆ ಯಾವಾಗ? ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಅವರ ಜೊತೆ ಡೇಟಿಂಗ್ ಮಾಡಿದ್ದ ಯಾವ ನಟಿಮಣಿಯೂ ಮದುವೆ ಆಗುವವರೆಗೆ ತಮ್ಮ ಸಂಬಂಧವನ್ನು ಮುಂದುವರಿಸಲಿಲ್ಲ. ಕತ್ರಿನಾ ಕೈಫ್​ ಜೊತೆಗೂ ಸಲ್ಲುಗೆ ಪ್ರೀತಿ ಚಿಗುರಿತ್ತು ಎಂಬ ಮಾತಿದೆ. ಆದರೆ ಅವರಿಬ್ಬರ ಪ್ರೇಮ್​ ಕಹಾನಿ ಕೂಡ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕತ್ರಿನಾ ಅವರು ವಿಕ್ಕಿ ಕೌಶಲ್​ ಜೊತೆಗೆ ಮದುವೆ ಆಗಲಿದ್ದಾರೆ. ಆದರೂ ಕೂಡ ಸಲ್ಮಾನ್​ ಖಾನ್​ ಅವರಿಗೆ ಇನ್ನೂ ಕಂಕಣ ಭಾಗ್ಯ ಕೂಡಿಬಂದಿಲ್ಲ. ಅಷ್ಟಕ್ಕೂ ಯಾಕೆ ಸಲ್ಲು ಮದುವೆ ಆಗುತ್ತಿಲ್ಲ? ಈ ಪ್ರಶ್ನೆಗೆ ಅವರ ಬಾಮೈದ ಆಯುಶ್​ ಶರ್ಮಾ (Aayush Sharma) ಉತ್ತರ ನೀಡಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ‘ಅಂತಿಮ್​: ದಿ ಫೈನಲ್​ ಟ್ರುತ್​’ (Antim The Final Truth) ಚಿತ್ರದಲ್ಲಿ ಆಯುಶ್​ ಶರ್ಮಾ ಮತ್ತು ಸಲ್ಮಾನ್​ ಖಾನ್​ ಜೊತೆಯಾಗಿ ನಟಿಸಿದ್ದಾರೆ.

ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಖಾನ್​ ಅವರನ್ನು ಆಯುಶ್​ ಶರ್ಮಾ ಮದುವೆ ಆಗಿದ್ದಾರೆ. ಸಲ್ಲು ಯಾಕೆ ಇನ್ನೂ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಆಯುಶ್​ ಶರ್ಮಾ ಉತ್ತರ ನೀಡಿದ್ದಾರೆ. ‘ಸಲ್ಮಾನ್​ ಮದುವೆಯ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಹೇಗೆ ಕೆಲಸ ಮಾಡುತ್ತಾರೆ, ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ನನಗೆ ಅನಿಸಿದಂತೆ ಅವರಿಗೆ ಮದುವೆ ಆಗಲು ಸಮಯ ಇಲ್ಲ. ಈಗ ಹೇಗಿದ್ದಾರೋ ಹಾಗೆಯೇ ಅವರು ಖುಷಿ ಆಗಿದ್ದಾರೆ. ಬದುಕಿನ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ’ ಎಂದು ಆಯುಶ್​ ಶರ್ಮಾ ಹೇಳಿದ್ದಾರೆ. ಅಂದರೆ, ತಮ್ಮ ಭಾವನಿಗೆ ಮದುವೆ ಆಗುವಷ್ಟು ಸಮಯ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಅಭಿಮಾನಿಗಳ ವರ್ತನೆಗೆ ಸಲ್ಲು ಶಾಕ್​:

‘ಅಂತಿಮ್​: ದಿ ಫೈನಲ್​ ಟ್ರುತ್​’ ಚಿತ್ರ ನ.26ರಂದು ಬಿಡುಗಡೆಯಾಗಿದೆ. ಈ ಸಿನಿಮಾ ನೋಡಲು ಬಂದ ಕೆಲವು ಹುಚ್ಚು ಅಭಿಮಾನಿಗಳು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ! ಅದನ್ನು ಕಂಡು ಸ್ವತಂ ಸಲ್ಮಾನ್​ ಖಾನ್​ಗೆ ಶಾಕ್​ ಆಗಿದೆ. ಅಭಿಮಾನಿಗಳ ಇಂಥ ವರ್ತನೆಯನ್ನು ಅವರು ಖಂಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಲ್ಲು ಪೋಸ್ಟ್​ ಮಾಡಿದ್ದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಚಿತ್ರಮಂದಿರದ ಒಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಅದರಿಂದ ದೊಡ್ಡ ಅವಘಡ ಸಂಭವಿಸಬಹುದು. ಅನೇಕರ ಪ್ರಾಣ ಹಾನಿ ಆಗಬಹುದು. ಥಿಯೇಟರ್​ ಒಳಗೆ ಪಟಾಕಿ ತರುವುದಕ್ಕೆ ಚಿತ್ರಮಂದಿರದ ಮಾಲಿಕರು ಅವಕಾಶ ನೀಡಬಾರದು. ಪಟಾಕಿ ತರುವವರನ್ನು ಬಾಗಿಲಿನಲ್ಲಿಯೇ ತಡೆಯಬೇಕು. ಸಿನಿಮಾವನ್ನು ಎಂಜಾಯ್​ ಮಾಡಿ. ಆದರೆ ಇಂಥ ಕೆಲಸವನ್ನು ಮಾಡಬೇಡಿ. ಇದು ನನ್ನೆಲ್ಲ ಅಭಿಮಾನಿಗಳಲ್ಲಿ ಮನವಿ’ ಎಂದು ಸಲ್ಮಾನ್​ ಖಾನ್​ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಜತೆಗೆ ಅಭಿಮಾನಿಗಳು ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ಕೂಡ ಸಲ್ಲು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

Antim Box Office Collection: ಕೇವಲ 4.5 ಕೋಟಿ ಗಳಿಸಿದ ‘ಅಂತಿಮ್​’ ಚಿತ್ರ; ಸಲ್ಮಾನ್​ ಖಾನ್​ ಸಿನಿಮಾದ ಹಣೆಬರಹ ಏನಾಗಬಹುದು?

Click on your DTH Provider to Add TV9 Kannada