Antim Box Office Collection: ಕೇವಲ 4.5 ಕೋಟಿ ಗಳಿಸಿದ ‘ಅಂತಿಮ್​’ ಚಿತ್ರ; ಸಲ್ಮಾನ್​ ಖಾನ್​ ಸಿನಿಮಾದ ಹಣೆಬರಹ ಏನಾಗಬಹುದು?

Antim The Final Truth box office day 1 collection: ‘ಸತ್ಯಮೇವ ಜಯತೆ 2’ ನ.25ರಂದು ತೆರೆಕಂಡಿತು. ಅದರ ಮರುದಿನ ‘ಅಂತಿಮ್​: ದಿ ಫೈನಲ್​ ಟ್ರುತ್​’ ಬಿಡುಗಡೆ ಆಯಿತು. ಎರಡೂ ಚಿತ್ರಗಳ ನಡುವೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಏರ್ಪಟ್ಟಿದೆ.

Antim Box Office Collection: ಕೇವಲ 4.5 ಕೋಟಿ ಗಳಿಸಿದ ‘ಅಂತಿಮ್​’ ಚಿತ್ರ; ಸಲ್ಮಾನ್​ ಖಾನ್​ ಸಿನಿಮಾದ ಹಣೆಬರಹ ಏನಾಗಬಹುದು?
ಸಲ್ಮಾನ್ ಖಾನ್, ಆಯುಶ್ ಶರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on: Nov 27, 2021 | 12:25 PM

ಸಲ್ಮಾನ್​ ಖಾನ್​ (Salman Khan) ಸಿನಿಮಾ ಎಂದರೆ ಮೊದಲ ದಿನವೇ ಹತ್ತಾರು ಕೋಟಿ ರೂ. ಬ್ಯುಸಿನೆಸ್​ ಮಾಡುತ್ತವೆ. ಆ ನಿರೀಕ್ಷೆಯ ಮೇಲೆಯೇ ನಿರ್ಮಾಪಕರು ಅವರ ಚಿತ್ರಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡುತ್ತಾರೆ. ಆದರೆ ಸಲ್ಲು ನಟನೆಯ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೊರಗುತ್ತವೆ. ಈಗ ‘ಅಂತಿಮ್​: ದಿ ಫೈನಲ್​ ಟ್ರುತ್​’ (Antim: The Final Truth) ಚಿತ್ರಕ್ಕೂ ಹಾಗೆಯೇ ಆಗಿದೆ. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ (Box Office Collection) ಮಾಡಿಲ್ಲ. ಈ ಚಿತ್ರದಲ್ಲಿ ಸಲ್ಲು ಭಾಮೈದ ಆಯುಶ್​ ಶರ್ಮಾ (Aayush Sharma) ನಟಿಸಿದ್ದಾರೆ. ಇಬ್ಬರ ಜುಗಲ್​ಬಂದಿ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಟ್ರೇಲರ್​​ ಮೂಲಕ ಸಖತ್​ ಹೈಪ್​ ಸೃಷ್ಟಿ ಮಾಡಿದ್ದ ‘ಅಂತಿಮ್​’ ಚಿತ್ರ ಮೊದಲ ದಿನ ಕೇವಲ 4.5 ಕೋಟಿ ರೂ. ಗಳಿಸಿದೆ. ಜಾನ್​ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೆ 2’ (Satyameva Jayate 2) ಚಿತ್ರ ಸಖತ್​ ಪೈಪೋಟಿ ನೀಡುತ್ತಿದೆ.

‘ಸತ್ಯಮೇವ ಜಯತೆ 2’ ನ.25ರಂದು ತೆರೆಕಂಡಿತು. ಅದರ ಮರುದಿನ ‘ಅಂತಿಮ್​: ದಿ ಫೈನಲ್​ ಟ್ರುತ್​’ ಬಿಡುಗಡೆ ಆಯಿತು. ಎರಡೂ ಚಿತ್ರಗಳ ನಡುವೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಏರ್ಪಟ್ಟಿದೆ. ದೇಶಾದ್ಯಂತ 3,500 ಪರದೆಗಳಲ್ಲಿ ‘ಅಂತಿಮ್​’ ಪ್ರದರ್ಶನ ಕಾಣುತ್ತಿದೆ. ಸಲ್ಮಾನ್​ ಖಾನ್​ ಅವರು ಈ ಸಿನಿಮಾದಲ್ಲಿ ಸಿಖ್​ ಪಾತ್ರ ಮಾಡಿದ್ದಾರೆ. ಹಾಗಿದ್ದರೂ ಕೂಡ ಪಂಜಾಬ್​ನಲ್ಲಿ ಈ ಚಿತ್ರಕ್ಕೆ ಅಷ್ಟೇನೂ ಆದಾಯ ಬಂದಿಲ್ಲ.

ಶನಿವಾರ (ನ.27) ಮತ್ತು ಭಾನುವಾರ (ನ.29) ವಾರಾಂತ್ಯದ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರುವ ನಿರೀಕ್ಷೆ ಇದೆ. ಆಗಲಾದರೂ ‘ಅಂತಿಮ್​’ ಗಳಿಕೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ಒಂದು ವೇಳೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ ಈ ಸಿನಿಮಾ ಹೀನಾಯ ಸೋಲು ಕಾಣಲಿದೆ. ಈ ಸಿನಿಮಾ ಹಿಟ್​ ಎನಿಸಿಕೊಳ್ಳಲು ಕನಿಷ್ಠ 50 ಕೋಟಿ ರೂಪಾಯಿ ಆದ್ರೂ ಗಳಿಸಬೇಕು ಎಂದು ಗಲ್ಲಾಪೆಟ್ಟಿಗೆ ವ್ಯವಹಾರ ಬಲ್ಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್​ ಖಾನ್​ ಈ ಸಿನಿಮಾದ ಜಾಸ್ತಿ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅವರಿಗಿಂತಲೂ ಹೆಚ್ಚಾಗಿ ಆಯುಶ್ ಶರ್ಮಾ ಮಿಂಚಿದ್ದಾರೆ. ‘ಅಂತಿಮ್​’ ಸಿನಿಮಾ ಬಗ್ಗೆ ಜನರಿಗೆ ನಿರಾಸಕ್ತಿ ಮೂಡಲು ಇದು ಕೂಡ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ