‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು

Sooryavanshi | Rohit Shetty: ಪತ್ರಕರ್ತೆ ಕೇಳಿದ ಪ್ರಶ್ನೆಯಿಂದಾಗಿ ರೋಹಿತ್​ ಶೆಟ್ಟಿಗೆ ಕೋಪ ಬಂದಂತೆ ಕಂಡಿತು. ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳು ಹಿಂದು ಧರ್ಮಕ್ಕೆ ಸೇರಿದ್ದವಾಗಿದ್ದವು. ಆಗ ಯಾಕೆ ಅದೊಂದು ಸಮಸ್ಯೆ ಎನಿಸಲಿಲ್ಲ ಎಂದು ಅವರು ಮರುಪ್ರಶ್ನೆ ಎಸೆದರು.

‘ಮುಸ್ಲಿಮರನ್ನು ಯಾಕೆ ಕೆಟ್ಟದಾಗಿ ತೋರಿಸಿದ್ದೀರಿ?’: ಪತ್ರಕರ್ತೆ ಪ್ರಶ್ನೆಗೆ ‘ಸೂರ್ಯವಂಶಿ’ ನಿರ್ದೇಶಕನ ಖಡಕ್​ ತಿರುಗೇಟು
ರೋಹಿತ್ ಶೆಟ್ಟಿ
Follow us
| Updated By: ಮದನ್​ ಕುಮಾರ್​

Updated on: Nov 15, 2021 | 1:21 PM

ಅಕ್ಷಯ್​ ಕುಮಾರ್​ (Akshay Kumar) ಮತ್ತು ಕತ್ರಿನಾ ಕೈಫ್​ (Katrina Kaif) ಜೋಡಿಯ ‘ಸೂರ್ಯವಂಶಿ’ (Sooryavanshi) ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. 9ನೇ ದಿನಕ್ಕೆ ಈ ಚಿತ್ರ ವಿಶ್ವಾದ್ಯಂತ 209 ಕೋಟಿ ರೂ. ಗಳಿಕೆ ಮಾಡಿದೆ. ಸಿನಿಮಾದ ಯಶಸ್ಸಿನ ನಂತರ ಹಲವು ಮಾಧ್ಯಮಗಳಿಗೆ ರೋಹಿತ್​ ಶೆಟ್ಟಿ (Rohit Shetty) ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಪತ್ರಕರ್ತೆಯೊಬ್ಬರು ರೋಹಿತ್​ ಶೆಟ್ಟಿಗೆ ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ರೋಹಿತ್​ ಶೆಟ್ಟಿ ಕಡೆಯಿಂದ ಖಡಕ್​ ಉತ್ತರ ಬಂದಿದೆ. ‘ನಿಮ್ಮ ಸಿನಿಮಾದಲ್ಲಿ ಮುಸ್ಲಿಂ (Muslims) ಪಾತ್ರಗಳನ್ನು ಕೆಟ್ಟದಾಗಿ ಯಾಕೆ ತೋರಿಸಲಾಗಿದೆ’ ಎಂಬ ಪ್ರಶ್ನೆಗೆ ರೋಹಿತ್​ ನೀಡಿದ ಉತ್ತರವೇನು? ಮುಂದೆ ಓದಿ.. 

ಅಂಥ ಪ್ರಶ್ನೆಯಿಂದಾಗಿ ರೋಹಿತ್​ ಶೆಟ್ಟಿಗೆ ಸ್ವಲ್ಪ ಕೋಪ ಬಂದಂತೆ ಕಂಡಿತು. ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳು ಹಿಂದು ಧರ್ಮಕ್ಕೆ ಸೇರಿದ್ದವಾಗಿದ್ದವು. ಆಗ ಯಾಕೆ ಅದೊಂದು ಸಮಸ್ಯೆ ಎನಿಸಲಿಲ್ಲ ಎಂದು ಅವರು ಮರುಪ್ರಶ್ನೆ ಎಸೆದರು. ‘ನಿಮಗೊಂದು ಪ್ರಶ್ನೆ ಕೇಳುತ್ತೇನೆ. ‘ಸಿಂಘಂ’ ಸಿನಿಮಾದಲ್ಲಿ ವಿಲನ್​ ಜೈಕಾಂತ್​ ಶಿಕ್ರೆ ಪಾತ್ರ ಹಿಂದೂ ಮರಾಠಿ ಆಗಿತ್ತು. ಇನ್ನೊಂದು ಸಿನಿಮಾದಲ್ಲಿ ಹಿಂದೂ ಧಾರ್ಮಿಕ ವ್ಯಕ್ತಿ ವಿಲನ್​ ಆಗಿದ್ದ. ‘ಸಿಂಬಾ’ ಸಿನಿಮಾದಲ್ಲಿ ವಿಲನ್​ ಆಗಿದ್ದ ಧ್ರುವ ರಾನಡೆ ಎಂಬ ಪಾತ್ರ ಹಿಂದೂ ಆಗಿತ್ತು. ಆಗ ಯಾಕೆ ಈ ಸಮಸ್ಯೆ ಉದ್ಭವ ಆಗಲಿಲ್ಲ?’ ಎಂದು ರೋಹಿತ್​ ಶೆಟ್ಟಿ ಕೇಳಿದರು.

ರೋಹಿತ್​ ಶೆಟ್ಟಿ ಹೇಳಿದ ಮಾತನ್ನು ಒಪ್ಪಿಕೊಳ್ಳದ ಆ ಪತ್ರಕರ್ತೆಯು ತಮ್ಮ ಪ್ರಶ್ನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೂ ರೋಹಿತ್​ ಕಡೆಯಿಂದ ಖಡಕ್​ ಪ್ರತಿಕ್ರಿಯೆ ಬಂತು. ‘ಸಿನಿಮಾದ ಕಥೆಯಲ್ಲಿ ಪಾಕಿಸ್ತಾನದ ಒಬ್ಬ ಭಯೋತ್ಪಾದಕ ಇದ್ದರೆ ಅವನ ಜಾತಿ ಯಾವುದಾಗಿರುತ್ತದೆ? ಇಂಥ ವಿವಾದಗಳಿಂದ ಕೆಲವು ಪತ್ರಕರ್ತರ ಬಗ್ಗೆ ನನಗೆ ಇದ್ದ ಭಾವನೆಯೇ ಬದಲಾಗಿದೆ’ ಎಂದು ರೋಹಿತ್​ ಶೆಟ್ಟಿ ಹೇಳಿದ್ದಾರೆ.

ಸದ್ಯ ಈ ಸಂದರ್ಶನದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ರೋಹಿತ್​ ಶೆಟ್ಟಿ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ರೋಹಿತ್​ ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದೇನೇ ಇರಲಿ, ‘ಸೂರ್ಯವಂಶಿ’ ಚಿತ್ರದ ಗೆಲುವಿನಿಂದ ಅಕ್ಷಯ್​ ಕುಮಾರ್​ ಫ್ಯಾನ್ಸ್​ ಖುಸಿ ಆಗಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ಬಿಡುಗಡೆಯಾದ ಈ ಚಿತ್ರ ಇಂದಿಗೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ.

ಇದನ್ನೂ ಓದಿ:

ಯಾವ ಖಾನ್​ಗೂ ಕಮ್ಮಿ ಇಲ್ಲ ಅಕ್ಷಯ್​ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ