ಪಾರ್ವತಮ್ಮ ರಾಜ್​ಕುಮಾರ್​ ಹುಟ್ಟುಹಬ್ಬ: ವಿಶೇಷ ದಿನವೇ ಅಪ್ಪು ಕನಸಿನ ಪ್ರಾಜೆಕ್ಟ್​ ಶೀರ್ಷಿಕೆ ಟೀಸರ್​ ಬಿಡುಗಡೆ

Puneeth Rajkumar: ಪಾರ್ವತಮ್ಮ ರಾಜ್​ಕುಮಾರ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಡಿ.6) ಪುನೀತ್​ ರಾಜ್​ಕುಮಾರ್​ ಕನಸಿನ ಟೈಟಲ್​ ಅನಾವರಣ ಆಗುತ್ತಿದೆ. ಈ ಕ್ಷಣಕ್ಕಾಗಿ ಅಪ್ಪು ಅಭಿಮಾನಿಗಳು ಕಾದಿದ್ದಾರೆ.

TV9kannada Web Team

| Edited By: Madan Kumar

Dec 06, 2021 | 9:37 AM

ಪುನೀತ್​ ರಾಜ್​ಕುಮಾರ್​ ಅವರು ಕರುನಾಡಿನ ಪ್ರಕೃತಿ ಸೌಂದರ್ಯದ ಬಗ್ಗೆ ಒಂದು ವಿಶೇಷ ಡಾಕ್ಯುಮೆಂಟರಿ (Puneeth Rajkumar Documentary) ಮಾಡಿದ್ದಾರೆ. ಅದರ ಬಗ್ಗೆ ಅವರು ಸಖತ್​ ಕಾಳಜಿ ಮತ್ತು ಭರವಸೆ ಇಟ್ಟುಕೊಂಡಿದ್ದರು. ನ.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅದರ ಟೈಟಲ್​ ಟೀಸರ್​ ಲಾಂಚ್​ ಮಾಡಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಅದಕ್ಕೂ ಮುನ್ನವೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಇಂದು (ಡಿ.6) ಆ ಸಾಕ್ಷ್ಯಚಿತ್ರದ ಶೀರ್ಷಿಕೆ ಟೀಸರ್​ ಅನಾವರಣಕ್ಕೆ ಸಮಯ ನಿಗದಿ ಆಗಿದೆ. ವಿಶೇಷ ಏನೆಂದರೆ ಇಂದು ಪಾರ್ವತಮ್ಮ ರಾಜ್​ಕುಮಾರ್​ (Parvathamma Rajkumar) ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಟೈಟಲ್​ ಟೀಸರ್​ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ವೇಳೆ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಮ್ಮೊಂದಿಗೆ ಇಲ್ಲ ಎಂಬ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ‘ಪಿಆರ್​ಕೆ ಆಡಿಯೋ’ ಮೂಲಕ ಬೆಳಗ್ಗೆ 10 ಗಂಟೆಗೆ ಟೀಸರ್​ ಲಾಂಚ್​ ಆಗುತ್ತಿದೆ.

ಇದನ್ನೂ ಓದಿ:

ಮೈಸೂರು ಅರಮನೆಯಿಂದ ಅಪ್ಪು ಸಮಾಧಿವರೆಗೆ ಸೈಕ್ಲಿಂಗ್​; ಪುನೀತ್​ ಅಭಿಮಾನಿಗಳಿಂದ ಹೀಗೊಂದು ಶ್ರದ್ಧಾಂಜಲಿ

ಇನ್ನೂ ನಿಂತಿಲ್ಲ ಶಿವಣ್ಣನ ಕಣ್ಣೀರು; ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮುತ್ತಣ್ಣ

Follow us on

Click on your DTH Provider to Add TV9 Kannada