72 ಗಂಟೆ ಮೊದಲು ಮಾಡಿಸಿದ ಟೆಸ್ಟ್ಗೆ ಮಾನ್ಯತೆ ಇಲ್ಲ; ಕೆಲ ವಿದೇಶಿಗರ ಫ್ಲೈಟ್ ಟಿಕೆಟ್ ಕ್ಯಾನ್ಸಲ್
72 ಗಂಟೆ ಮೊದಲು ಮಾಡಿಸಿದ ಟೆಸ್ಟ್ಗೆ ಮಾನ್ಯತೆ ಇಲ್ಲ. ನೆಗೆಟಿವ್ ರಿಪೋರ್ಟ್ ಇದ್ದರೂ ಅದಕ್ಕೆ ಮಾನ್ಯತೆ ಇಲ್ಲ. ಹೀಗಾಗಿ ಲಂಡನ್ಗೆ ಹೋಗಲು ಬಂದಿದ್ದ ವ್ಯಕ್ತಿ ಟಿಕೆಟ್ ಕ್ಯಾನ್ಸಲ್ ಆಗಿದೆ.
ಆನೇಕಲ್: ಕೊರೊನಾ ರೂಪಾತಂರಿ ಒಮಿಕ್ರಾನ್ ವೈರಸ್ ರಾಜ್ಯದಲ್ಲಿ ಪತ್ತೆಯಾದ ಹಿನ್ನೆಲೆ ಸರ್ಕಾರ ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಿದೆ. ಕೆಲ ಮಾರ್ಗಸೂಚಿಯನ್ನು ಜಾರಿಗೊಳಿಸಿ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಏರ್ಪೋರ್ಟ್ ಸಿಬ್ಬಂದಿ ವಿದೇಶಿ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿ ನಂತರ ಪ್ರಯಾಣ ಮಾಡಲು ಅವಕಾಶ ನೀಡುತ್ತಿದೆ. 72 ಗಂಟೆ ಮೊದಲು ಮಾಡಿಸಿದ ಟೆಸ್ಟ್ಗೆ ಮಾನ್ಯತೆ ಇಲ್ಲ. ಹೀಗಾಗಿ ಇಂದು ಕೆಲ ವಿದೇಶಿಗರ ಫ್ಲೈಟ್ ಟಿಕೆಟ್ ರದ್ದಾಗಿದೆ. ವಿಷಯ ತಿಳಿಯದೆ ಕೆಲವರು ಏರ್ಪೋರ್ಟ್ಗೆ ಬಂದಿದ್ದರು. ಟಿಕೆಟ್ ಕ್ಯಾನ್ಸಲ್ ಆಗಿರುವುದು ತಿಳಿದು ಏರ್ಲೈನ್ಸ್ ವಿರುದ್ಧ ವಿದೇಶಿ ಪ್ರಜೆಗಳು ಕಿಡಿಕಾರಿದ್ದಾರೆ.
72 ಗಂಟೆ ಮೊದಲು ಮಾಡಿಸಿದ ಟೆಸ್ಟ್ಗೆ ಮಾನ್ಯತೆ ಇಲ್ಲ. ನೆಗೆಟಿವ್ ರಿಪೋರ್ಟ್ ಇದ್ದರೂ ಅದಕ್ಕೆ ಮಾನ್ಯತೆ ಇಲ್ಲ. ಹೀಗಾಗಿ ಲಂಡನ್ಗೆ ಹೋಗಲು ಬಂದಿದ್ದ ವ್ಯಕ್ತಿ ಟಿಕೆಟ್ ಕ್ಯಾನ್ಸಲ್ ಆಗಿದೆ. ಬೆಳಗ್ಗೆ 10 ಗಂಟೆಗೆ ಲಂಡನ್ಗೆ ಹೋಗಬೇಕಿದ್ದ ವ್ಯಕ್ತಿ 72 ಗಂಟೆ ಮುಂಚೆ ಮಾಡಿಸಿದ್ದ ಟೆಸ್ಟ್ ವರದಿ ತಂದಿದ್ದರು. ಆದರೆ ಅದಕ್ಕೆ ಮಾನ್ಯತೆ ಇಲ್ಲದ ಹಿನ್ನೆಲೆ ಟಿಕೆಟ್ ಕ್ಯಾನ್ಸಲ್ ಆಗಿದೆ.
ಇದನ್ನೂ ಓದಿ
ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ; ಅಧಿಕೃತ ಘೋಷಣೆ
Ravichandran Ashwin: ಅಶ್ವಿನ್ ಮಾಡಿದ ಒಂದು ಟ್ವೀಟ್ಗೆ ಬ್ಲೂ ಟಿಕ್ ಆಯ್ತು ಈ ನ್ಯೂಜಿಲೆಂಡ್ ಕ್ರಿಕೆಟಿಗನ ಅಕೌಂಟ್