Ravichandran Ashwin: ಅಶ್ವಿನ್ ಮಾಡಿದ ಒಂದು ಟ್ವೀಟ್​ಗೆ ಬ್ಲೂ ಟಿಕ್ ಆಯ್ತು ಈ ನ್ಯೂಜಿಲೆಂಡ್ ಕ್ರಿಕೆಟಿಗನ ಅಕೌಂಟ್

Ajaz Patel, IND vs NZ: ಎಜಾಜ್ ಪಟೇಲ್ ಅವರನ್ನು ಸಂದರ್ಶನ ಮಾಡುವ ವೇಳೆ ಅಶ್ವಿನ್ ಅವರು ಟ್ವಿಟ್ಟರ್ ಸಂಸ್ಥೆಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಎಜಾಜ್ ಅವರ ಟ್ವಿಟ್ಟರ್ ಖಾತೆ ವೆರಿಫೈ ಮಾಡಿ ಎಂದು ಕೇಳಿಕೊಂಡಿದ್ದಾರೆ.

Ravichandran Ashwin: ಅಶ್ವಿನ್ ಮಾಡಿದ ಒಂದು ಟ್ವೀಟ್​ಗೆ ಬ್ಲೂ ಟಿಕ್ ಆಯ್ತು ಈ ನ್ಯೂಜಿಲೆಂಡ್ ಕ್ರಿಕೆಟಿಗನ ಅಕೌಂಟ್
R Ashwin and Ajaz Patel IND vs NZ
Follow us
TV9 Web
| Updated By: Vinay Bhat

Updated on: Dec 07, 2021 | 8:48 AM

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟೆಸ್ಟ್ ಸರಣಿ ಮಕ್ತಾಯಗೊಂಡಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯಕಂಡರೆ ವಾಂಖೆಡೆಯಲ್ಲಿ ಸೋಮವಾರ ಮುಕ್ತಾಯಗೊಂಡ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 372 ರನ್​ಗಳ ಅಮೋಘ ಗೆಲುವು ಕಾಣುವ ಮೂಲಕ 1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ರವಿಚಂದ್ರನ್ ಅಶ್ವಿನ್ (Ravichandran Ashwin) ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಪಂದ್ಯ ಮುಗಿದ ಬಳಿಕ ನ್ಯೂಜಿಲೆಂಡ್ ಕ್ರಿಕೆಟಿಗರ ಜೊತೆ ಅಶ್ವಿನ್ ಸಾಕಷ್ಟು ಸಮಯ ಕಳೆದರು. ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ (Test Cricket) ಇತಿಹಾಸ ರಚಿಸಿದ ಎಜಾಜ್ ಪಟೇಲ್ (Ajaz Patel) ಅವರನ್ನು ಸಂದರ್ಶನ ನಡೆಸಿ ಅವರಿಗೆ ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇದೇವೇಳೆ ಟ್ವಿಟ್ಟರ್ (Twitter)​ ಕಂಪನಿಗೆ ವಿಶೇಷ ಮನವಿಯನ್ನೂ ಅಶ್ವಿನ್ (R Ashwin) ಮಾಡಿದರು.

ಹೌದು, ಎಜಾಜ್ ಅವರನ್ನು ಸಂದರ್ಶನ ಮಾಡುವ ವೇಳೆ ಅಶ್ವಿನ್ ಅವರು ಟ್ವಿಟ್ಟರ್ ಸಂಸ್ಥೆಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿರುವ ಎಜಾಜ್ ಪಟೇಲ್ ಅವರ ಟ್ವಿಟ್ಟರ್ ಖಾತೆಯನ್ನು ವೆರಿಫೈ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಅಶ್ವಿನ್, “ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್ ಗೊಂಚಲು ಪಡೆದಿರುವ ಎಜಾಜ್ ಪಟೇಲ್ ಖಂಡಿತವಾಗಿಯೂ ವೆರಿಫೈ ಆಗಲು ಅರ್ಹರು” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಟ್ವಿಟ್ಟರ್ ಕೂಡಲೇ ಎಜಾಜ್ ಅವರ ಟ್ವಿಟ್ಟರ್ ಖಾತೆಗೆ ಬ್ಲೂ ಟಿಕ್ ನೀಡಿದೆ.

ಪಂದ್ಯ ಮುಗಿದ ಬಳಿಕ ಎಜಾಜ್ ಪಟೇಲ್ ಕೂಡ ಭಾರತದ ಪ್ರದರ್ಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್​ಗೆ ಅಭಿನಂದನೆ ಸಲ್ಲಿಸಿರುವ ಇವರು ಮಯಾಂಕ್ ಅಗರ್ವಾಲ್ ಶತಕಕ್ಕೆ ಸಲಾಂ ಎಂದಿದ್ದಾರೆ.

ಎಜಾಜ್ ಪಟೇಲ್ ಮೂಲತಃ ಭಾರತದವರು. ಇವರ ಜನನ ಆಗಿದ್ದು ಮುಂಬೈನಲ್ಲಿ. ಎಜಾಜ್​ಗೆ 8 ವರ್ಷವಿರುವಾಗ ಇವರ ಕುಟುಂಬ ಭಾರತದಿಂದ ನ್ಯೂಜಿಲೆಂಡ್​ಗೆ ತೆರಳಿತು. ಮುಂದೆ ಇವರು ನ್ಯೂಜಿಲೆಂಡ್​ನ ದೇಶೀಯ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ಪರವಾಗಿ ಮೊದಲು ಆಡಲು ಶುರು ಮಾಡಿ ಈಗ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ  ಭಾರತದ ಎಲ್ಲ 10 ವಿಕೆಟ್​ ಪಡೆದು ವಿಶೇಷ ಸಾಧನೆ ಮಾಡಿದರು. ಜಿಮ್​ ಲೇಕರ್​ ಮತ್ತು ಅನಿಲ್​ ಕುಂಬ್ಳೆ ಬಳಿಕ ಇನ್ನಿಂಗ್ಸ್​ವೊಂದರಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರನಾಗಿ ಎಜಾಜ್​ ಪಟೇಲ್​ ಆಗಿದ್ದಾರೆ.

ನ್ಯೂಜಿಲೆಂಡ್ ತಂಡ ಸದ್ಯ ತವರಿಗೆ ಮರಳಲು ಸಜ್ಜಾಗಿದ್ದು ಬಾಂಗ್ಲಾದೇಶ ವಿರುದ್ಧ ಸರಣಿಯನ್ನು ಆಡಲಿದೆ. ಇತ್ತ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ.

David Warner: ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಡೇವಿಡ್ ವಾರ್ನರ್​ಗೆ ವಿಶೇಷ ಬೇಡಿಕೆ: ಈಡೇರಿಸ್ತಾರ ಆಸೀಸ್ ಕ್ರಿಕೆಟಿಗ?

(Ravichandran Ashwin special request to Twitter to verify Ajaz Patel Twitter account After India vs New Zealand Test)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ