AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ Test: ವಾಂಖೆಡೆ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ಟೀಮ್ ಇಂಡಿಯಾ ಕೊಟ್ಟ ಉಡುಗೊರೆ ಏನು ಗೊತ್ತಾ?

India vs New Zealand: ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಕಾಣಲು ಕಾರಣವಾದ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಭಾರತಕ್ಕೆ ಹೇಗೆ ಬೇಕೋ ಹಾಗೆ ವರ್ತಿಸಿತು. ಇದರಿಂದ ಖುಷಿಯಾದ ಟೀಮ್ ಇಂಡಿಯಾ ಅಲ್ಲಿನ ಗ್ರೌಂಡ್ಸ್​ಮೆನ್​ಗೆ 35,000 ರೂಪಾಯಿ ನೀಡಿದ್ದಾರೆ.

IND vs NZ Test: ವಾಂಖೆಡೆ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ಟೀಮ್ ಇಂಡಿಯಾ ಕೊಟ್ಟ ಉಡುಗೊರೆ ಏನು ಗೊತ್ತಾ?
wankhede stadium India vs New Zealand
TV9 Web
| Edited By: |

Updated on: Dec 07, 2021 | 11:14 AM

Share

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್​ನಲ್ಲಿ ಭಾರತ ದಾಖಲೆಯ ಮೊತ್ತದ ಗೆಲುವು ಸಾಧಿಸಿ ಟೆಸ್ಟ್ ಸರಣಿ (Test Series) ವಶಪಡಿಸಿಕೊಂಡಿತು. ಸ್ಪಿನ್ನರ್​ಗಳಿಗೇ ಹೆಚ್ಚು ನೆರವಾಗುವ ಮುಂಬೈನ ವಾಂಖೆಡೆ ಪಿಚ್ (Wankhede Pitch) ವೇಗಿಗಳಿಗೂ ಸಹಾಯವಾಗುವಂತೆ ವರ್ತಿಸಿದ್ದು ಅಚ್ಚರಿ ಮೂಡಿಸಿತು. ಇದರ ಪ್ರಯೋಗವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ಟೀಮ್ ಇಂಡಿಯಾ (Team India) ಕಿವೀಸ್ ಮೇಲೆ ಸವಾರಿ ಮಾಡಿತು. ಪಂದ್ಯ ಆರಂಭಕ್ಕೂ ಮುನ್ನ ಮತ್ತು ಅದರ ಹಿಂದಿನ ದಿನ ಸತತ ಮಳೆ ಸುರಿದರೂ ವಾಂಖೆಡೆ ಪಿಚ್ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿ ಕಠಿಣವಾಗಿತ್ತು ನಿರ್ಮಿಸಲಾಗಿತ್ತು. ಇದನ್ನು ಸಿದ್ಧಪಡಿಸಿ ಗ್ರೌಂಡ್ಸ್​ಮೆನ್ ಸಾಕಷ್ಟು ಶ್ರಮವಹಿಸಿದ್ದರು. ಇದನ್ನ ಮರೆಯದ ವಿರಾಟ್ ಕೊಹ್ಲಿ ಪಡೆ (Virat Kohli) ಪಂದ್ಯ ಮುಗಿದ ಬಳಿಕ ವಾಂಖೆಡೆ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಐತಿಹಾಸಿಕ ಗೆಲುವು ಕಾಣಲು ಕಾರಣವಾದ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಭಾರತಕ್ಕೆ ಹೇಗೆ ಬೇಕೋ ಹಾಗೆ ವರ್ತಿಸಿತು. ಇದರಿಂದ ಖುಷಿಯಾದ ಟೀಮ್ ಇಂಡಿಯಾ ಅಲ್ಲಿನ ಗ್ರೌಂಡ್ಸ್​ಮೆನ್​ಗೆ 35,000 ರೂಪಾಯಿ ನೀಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಮೊದಲ ಟೆಸ್ಟ್​ನ ಕಾನ್ಪುರ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ಹಣ ನೀಡಿದ್ದರು. ಈ ಬಗ್ಗೆ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಪ್ರಕಟಿಸಿತ್ತು. “ನಾವು ಅಧಿಕೃತವಾಗಿ ಪ್ರಕಟಿಸಲು ಬಯಸುತ್ತೇವೆ. ರಾಹುಲ್ ದ್ರಾವಿಡ್ ಅವರು ನಮ್ಮ ಗ್ರೌಂಡ್ಸ್​ಮೆನ್​ಗೆ ವೈಯಕ್ತಿಕವಾಗಿ 35 ಸಾವಿರ ರೂ ಕೊಟ್ಟಿದ್ದಾರೆ” ಎಂದು ಕ್ರಿಕೆಟ್ ಸಂಸ್ಥೆ ಹೇಳಿತ್ತು. ಸದ್ಯ ಭಾರತೀಯ ಕ್ರಿಕೆಟ್ ಕೂಡ ವಾಂಖೆಡೆ ಗ್ರೌಂಡ್ಸ್​ಮೆನ್​ಗೆ ಹಣ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ 5 ವಿಕೆಟ್‌ ಕಳೆದುಕೊಂಡು 140 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್‌ ತಂಡಕ್ಕೆ ಗೆಲ್ಲಲು 400 ರನ್‌ ಅಗತ್ಯವಿತ್ತು. ಆದರೆ, ಜಯಂತ್ ಯಾದವ್‌ ಸ್ಪಿನ್‌ ಮೋಡಿಗೆ ನಲುಗಿದ ಕಿವೀಸ್‌ 56.3 ಓವರ್‌ಗಳಿಗೆ 167 ರನ್‌ಗಳಿಗೆ ಸರ್ವ ಪತನ ಕಂಡಿತು. ಆ ಮೂಲಕ ಹೆಚ್ಚು ಕಡಿಮೆ ಎರಡು ದಿನ ಬಾಕಿ ಇರುವಾಗಲೇ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಪರ ಅತ್ಯುತ್ತಮ ಬೌಲ್‌ ಮಾಡಿದ ಆರ್‌ ಅಶ್ವಿನ್‌ ಹಾಗೂ ಜಯಂತ್‌ ಯಾದವ್ ತಲಾ 4 ವಿಕೆಟ್‌ಗಳನ್ನು ಪಡೆದುಕೊಂಡರು.

ಇದರ ಜೊತೆಗೆ ವಿರಾಟ್‌ ಕೊಹ್ಲಿ ಎಲ್ಲಾ ಸ್ವರೂಪದಲ್ಲಿಯೂ 50 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಈ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿತು. ಆ ಮೂಲಕ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇನ್ನಷ್ಟು ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್‌ 26 ರಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯವಾಡಲಿದೆ.

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ: ಆಯ್ಕೆಯಾಗಲಿರುವ 15 ಆಟಗಾರರು ಯಾರೆಲ್ಲ ಗೊತ್ತೇ?

Ravichandran Ashwin: ಅಶ್ವಿನ್ ಮಾಡಿದ ಒಂದು ಟ್ವೀಟ್​ಗೆ ಬ್ಲೂ ಟಿಕ್ ಆಯ್ತು ಈ ನ್ಯೂಜಿಲೆಂಡ್ ಕ್ರಿಕೆಟಿಗನ ಅಕೌಂಟ್

(Indian cricket team donated a sum of INR 35000 to Wankhede Stadium groundstaff after Virat Kohli Team Won vs New Zealand)

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​