AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: 61 ರಿಂದ 39… ಈ ಬಾರಿ ಪದಕ ಕಮ್ಮಿಯಾಗಲು ಇದುವೇ ಅಸಲಿ ಕಾರಣ!

Commonwealth Games 2026: ಸ್ಕಾಟ್​ಲ್ಯಾಂಡ್​ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ (CWG 2026) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಭಾರತ ಈ ಬಾರಿ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಆದರೆ, ಕ್ರೀಡಾಭಿಮಾನಿಗಳನ್ನು ಕಾಡುತ್ತಿರುವ ಏಕೈಕ ದೊಡ್ಡ ಪ್ರಶ್ನೆಯೆಂದರೆ, 2022ರ ಬರ್ಮಿಂಗ್‌ಹ್ಯಾಮ್ ಕೂಟದಲ್ಲಿ ಬರೋಬ್ಬರಿ 61 ಪದಕಗಳನ್ನು ಬೇಟೆಯಾಡಿದ್ದ ಭಾರತೀಯ ಅಥ್ಲೀಟ್‌ಗಳು, ಈ ಬಾರಿ ಕೇವಲ 39 ಪದಕಗಳಿಗೆ ಸೀಮಿತವಾಗಿದ್ದೇಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

CWG 2026: 61 ರಿಂದ 39... ಈ ಬಾರಿ ಪದಕ ಕಮ್ಮಿಯಾಗಲು ಇದುವೇ ಅಸಲಿ ಕಾರಣ!
Cwg 2026Image Credit source: CWG
ಝಾಹಿರ್ ಯೂಸುಫ್
|

Updated on: Aug 03, 2026 | 7:32 AM

Share

ಗ್ಲ್ಯಾಸ್ಗೋದಲ್ಲಿ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕ್ರೀಡಾಕೂಟದ ಅಂತ್ಯಕ್ಕೆ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನೊಂದಿಗೆ ಒಟ್ಟು 39 ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್‌ಗಳು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು 2022ರ ಬರ್ಮಿಂಗ್​​​ಹ್ಯಾಮ್​ ಕೂಟದ ಪ್ರದರ್ಶನಕ್ಕೆ ಹೋಲಿಸಿದರೆ ತುಂಬಾ ಕಮ್ಮಿ. ಏಕೆಂದರೆ ಕಳೆದ ಬಾರಿ ಬರೋಬ್ಬರಿ 61 ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಭಾರತ, ಈ ಬಾರಿ ಕೇವಲ 39 ಪದಕಗಳಿಗಷ್ಟೇ ತೃಪ್ತಿಪಡಬೇಕಾಗಿ ಬಂದಿದೆ.

ಆದರೆ, ಪದಕಗಳ ಈ ಕುಸಿತಕ್ಕೆ ಕ್ರೀಡಾಪಟುಗಳ ವೈಫಲ್ಯ ಖಂಡಿತಾ ಕಾರಣವಲ್ಲ, ಬದಲಿಗೆ ಕ್ರೀಡಾಕೂಟದ ಹೊಸ ನಿಯಮಾವಳಿಗಳೇ ಕಾರಣ! ಈ ಬಾರಿ ಭಾರತಕ್ಕೆ ಪದಕದ ಗ್ಯಾರಂಟಿ ನೀಡುತ್ತಿದ್ದ ಹಲವು ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಕೈಬಿಟ್ಟಿರುವುದು ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಇಷ್ಟೊಂದು ಭಾರಿ ವ್ಯತ್ಯಾಸ ಉಂಟಾಗಲು ಅಸಲಿ ಕಾರಣವಾಗಿದೆ.

‘ಮೆಡಲ್ ಗ್ಯಾರಂಟಿ’ ಕ್ರೀಡೆಗಳಿಗೇ ಕತ್ತರಿ:

ಆತಿಥೇಯ ನಗರವಾದ ಗ್ಲ್ಯಾಸ್ಗೋ ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಬಾರಿ ಕ್ರೀಡಾಕೂಟವನ್ನು ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಿತು. ಈ ನಿರ್ಧಾರದಿಂದಾಗಿ ಭಾರತಕ್ಕೆ ನೂರಕ್ಕೆ ನೂರು ಪದಕ ತಂದುಕೊಡುತ್ತಿದ್ದ 9 ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಸಂಪೂರ್ಣವಾಗಿ ಹೊರಗಿಡಲಾಯಿತು.

  • ಕುಸ್ತಿಯ ಕಣ್ಮರೆ: ಕಳೆದ ಬಾರಿ ಭಾರತ ಕುಸ್ತಿಯೊಂದರಲ್ಲೇ 12 ಪದಕಗಳನ್ನು ಬಾಚಿತ್ತು. ಈ ಬಾರಿ ಕುಸ್ತಿಯೇ ಇರಲಿಲ್ಲ.
  • ಬ್ಯಾಡ್ಮಿಂಟನ್: ಕಳೆದ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರು 6 ಪದಕ ಗೆದ್ದಿದ್ದರು. ಈ ಬಾರಿ ಈ ಕ್ರೀಡೆ ಇರಲಿಲ್ಲ.
  • ಟೇಬಲ್ ಟೆನಿಸ್: 2022 ರಲ್ಲಿ ಟೇಬಲ್ ಟೆನಿಸ್‌ನಲ್ಲಿ 7 ಪದಕಗಳು ಭಾರತದ ಮುಡಿಗೇರಿದ್ದವು. ಈ ಬಾರಿ ಟೇಬಲ್ ಟೆನಿಸ್‌ ಅನ್ನು ಕೂಡ ಕೈಬಿಡಲಾಯಿತು.
  • ಹಾಕಿ ಮತ್ತು ಕ್ರಿಕೆಟ್ ಇಲ್ಲ: ಭಾರತಕ್ಕೆ ಪದಕದ ಭರವಸೆ ಮೂಡಿಸುತ್ತಿದ್ದ ಪುರುಷರ ಹಾಗೂ ಮಹಿಳೆಯರ ಹಾಕಿ ಮತ್ತು ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳೂ ಈ ಬಾರಿ ಇರಲಿಲ್ಲ.

ಅಂದರೆ ಕಳೆದ ಬಾರಿಯ 61 ಪದಕಗಳಲ್ಲಿ ಬರೋಬ್ಬರಿ 30 ಪದಕಗಳು ಬಂದಿದ್ದು ಇದೇ ಕ್ರೀಡೆಗಳಿಂದ. ಆದರೆ ಈ ಬಾರಿ ಕ್ರೀಡಾಕೂಟ ಆರಂಭವಾಗುವ ಮುನ್ನವೇ ಭಾರತ ತನ್ನ ಅರ್ಧದಷ್ಟು ಪದಕದ ಅವಕಾಶಗಳನ್ನು ಕಳೆದುಕೊಂಡಿತ್ತು. ಜೊತೆಗೆ, ಭಾರತದ ಸಾಂಪ್ರದಾಯಿಕ ಕ್ರೀಡೆಗಳಾದ ಶೂಟಿಂಗ್ ಮತ್ತು ಆರ್ಚರಿ ಕೂಡ ಈ ಬಾರಿ ಇರಲಿಲ್ಲ.

ಕಣಕ್ಕಿಳಿದ ಅಥ್ಲೀಟ್‌ಗಳ ಸಂಖ್ಯೆಯೂ ಕಮ್ಮಿ!

ಕ್ರೀಡೆಗಳ ಸಂಖ್ಯೆ ಕಡಿತಗೊಂಡಿದ್ದರಿಂದ ಸಹಜವಾಗಿಯೇ ಭಾರತೀಯ ಕ್ರೀಡಾಪಟುಗಳ ಸಂಖ್ಯೆಯೂ ಇಳಿಮುಖವಾಯಿತು. 2022ರಲ್ಲಿ ಭಾರತದಿಂದ 210 ಅಥ್ಲೀಟ್‌ಗಳು ಭಾಗವಹಿಸಿದ್ದರೆ, ಈ ಬಾರಿ ಕೇವಲ 122 ಅಥ್ಲೀಟ್‌ಗಳಷ್ಟೇ ಗ್ಲ್ಯಾಸ್ಗೋಗೆ ತೆರಳಿದ್ದರು. ಸ್ಪರ್ಧಿಸುವ ಅವಕಾಶಗಳೇ ಕಮ್ಮಿಯಾದಾಗ ಪದಕಗಳ ಸಂಖ್ಯೆ ತಗ್ಗುವುದು ಅನಿವಾರ್ಯವಾಯಿತು.

10 ಕ್ರೀಡೆಗಳಲ್ಲೇ ಮಿಂಚಿಂಗ್:

ಪದಕಗಳ ಒಟ್ಟು ಸಂಖ್ಯೆ ಕಡಿಮೆಯಾಗಿದ್ದರೂ, ಲಭ್ಯವಿದ್ದ 10 ಕ್ರೀಡೆಗಳಲ್ಲಿ ಭಾರತೀಯರು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

  • ಬಾಕ್ಸಿಂಗ್‌ನಲ್ಲಿ ಐತಿಹಾಸಿಕ ಪಂಚ್: ಭಾರತದ ಬಾಕ್ಸರ್​​ಗಳು ಈ ಬಾರಿ 7 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
  • ವೇಟ್‌ಲಿಫ್ಟಿಂಗ್: ಭಾರತೀಯ ವೇಟ್‌ಲಿಫ್ಟರ್​ಗಳು ಈ ಬಾರಿ ಬರೋಬ್ಬರಿ 8 ಪದಕಗಳಿಗೆ ಕೊರೊಳೊಡಡಿದ್ದಾರೆ.
  • ಪ್ಯಾರಾ ಸ್ಪೋರ್ಟ್ಸ್​: ಪ್ಯಾರಾ ಕ್ರೀಡಾಪಟುಗಳು ಕೂಡ 7 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಕಮ್ಮಿಯಾಗಿರಬಹುದು, ಆದರೆ ಕ್ರೀಡಾಪಟುಗಳ ಛಲ ಮತ್ತು ಹೋರಾಟದ ಗುಣ ಮಾತ್ರ ಕಿಂಚಿತ್ತೂ ಕಮ್ಮಿಯಾಗಿರಲಿಲ್ಲ. ಪ್ರತಿಕೂಲ ಪರಿಸ್ಥಿತಿ ಮತ್ತು ಸೀಮಿತ ಅವಕಾಶಗಳ ನಡುವೆಯೂ ಭಾರತ ತನ್ನ 4ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

2022ರಲ್ಲಿ ಹಲವು ಪ್ರಮುಖ ಕ್ರೀಡೆಗಳ ಬೆಂಬಲದೊಂದಿಗೆ 4ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಅತ್ಯಂತ ಕಡಿಮೆ ಕ್ರೀಡೆ ಹಾಗೂ ಸೀಮಿತ ಅಥ್ಲೀಟ್‌ಗಳಿದ್ದರೂ ಅದೇ ರ‍್ಯಾಂಕಿಂಗ್ ಉಳಿಸಿಕೊಂಡಿರುವುದು ನಿಜಕ್ಕೂ ಭಾರತೀಯ ಕ್ರೀಡಾಲೋಕದ ಸಾಧನೆಗೆ ಸಾಕ್ಷಿಯಾಗಿದೆ.

Follow Us
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ