AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಿಗ್​​ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?

Bigg Boss Kannada 13: ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮನೆಯಿಂದ ಹೊರ ಬಂದಿದ್ದಾರೆ. ಓಂ ಪ್ರಕಾಶ್ ಅವರು ಇದ್ದ ಅಲ್ಪ ಸಮಯದಲ್ಲಿಯೇ ಒಳ್ಳೆ ಮನರಂಜನೆ ಕೊಟ್ಟಿದ್ದರು. ಪ್ರೇಕ್ಷಕರಿಗೆ ಅವರ ಮೇಲೆ ನಿರೀಕ್ಷೆ ಇತ್ತು. ಆದರೆ ಅವರು ಅನಾರೋಗ್ಯದ ಕಾರಣ ನೀಡಿ ಶೋನಿಂದ ಹೊರಗೆ ಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಓಂ ಪ್ರಕಾಶ್ ರಾವ್ ಮತ್ತೆ ಶೋಗೆ ಹೋಗುವ ಉದ್ದೇಶದ ಬಗ್ಗೆ ಮಾತನಾಡಿದ್ದಾರೆ.

ಮತ್ತೆ ಬಿಗ್​​ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?
Om Prakash Bigg Boss1
ಮಂಜುನಾಥ ಸಿ.
|

Updated on:Sep 15, 2026 | 8:11 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್​​ನಿಂದ ಹೊರ ಬಂದಿದ್ದಾರೆ ಓಂ ಪ್ರಕಾಶ್ ರಾವ್
  • ಓಂ ಪ್ರಕಾಶ್ ರಾವ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು
  • ಮತ್ತೆ ಬಿಗ್​​ಬಾಸ್ ಮನೆಗೆ ಹೋಗ್ತಾರಾ ಓಂ ಪ್ರಕಾಶ್ ರಾವ್?

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಿ ವಾರವಾಗಿದ್ದು, ಶೋ ಎರಡನೇ ವಾರಕ್ಕೆ ಕಾಲಿರಿಸಿದೆ. ಕಳೆದ ಭಾನುವಾರದ ಎಪಿಸೋಡ್​​ನಲ್ಲಿ ಪ್ರಥಮಾ ಪ್ರಸಾದ್ ಮೊದಲ ಸ್ಪರ್ಧಿಯಾಗಿ ಎವಿಕ್ಟ್ ಆಗಿದ್ದಾರೆ. ಆದರೆ ಅಚಾನಕ್ಕಾಗಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮನೆಯಿಂದ ಹೊರ ಬಂದಿದ್ದಾರೆ. ಓಂ ಪ್ರಕಾಶ್ ಅವರು ಇದ್ದ ಅಲ್ಪ ಸಮಯದಲ್ಲಿಯೇ ಒಳ್ಳೆ ಮನರಂಜನೆ ಕೊಟ್ಟಿದ್ದರು. ಪ್ರೇಕ್ಷಕರಿಗೆ ಅವರ ಮೇಲೆ ನಿರೀಕ್ಷೆ ಇತ್ತು. ಆದರೆ ಅವರು ಅನಾರೋಗ್ಯದ ಕಾರಣ ನೀಡಿ ಶೋನಿಂದ ಹೊರಗೆ ಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಓಂ ಪ್ರಕಾಶ್ ರಾವ್ ಮತ್ತೆ ಶೋಗೆ ಹೋಗುವ ಉದ್ದೇಶದ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಅನಾರೋಗ್ಯದ ಬಗ್ಗೆ ಪೂರ್ಣ ವಿವಿರ ನೀಡಿರುವ ಓಂ ಪ್ರಕಾಶ್ ರಾವ್, ‘ನನಗೆ ಮೊದಲಿನಿಂದಲೂ ಶುಗರ್ ಮತ್ತು ಬಿಪಿ ಇತ್ತು. ನನ್ನ ವೈದ್ಯಕೀಯ ವರದಿಗಳನ್ನು ಶೋನವರಿಗೆ ನೀಡಿದ್ದೆ. ಮನೆಗೆ ಹೋದಾಗ ಏನೂ ಸಮಸ್ಯೆ ಇರಲಿಲ್ಲ ಆದರೆ ಬರ ಬರುತ್ತಾ ಕಾಲು ನೋವು ಶುರುವಾಯ್ತು. ಕಾಲು ನೋವಿನ ಸಮಸ್ಯೆಯೂ ಸಹ ನನಗೆ ಮೊದಲಿನಿಂದಲೂ ಇರುವಂಥಹದ್ದೇ. ಆದರೆ ಶುಕ್ರವಾರದ ವೇಳೆಗೆ ಅದು ಹೆಚ್ಚಾಯ್ತು’ ಎಂದಿದ್ದಾರೆ ಓಂ ಪ್ರಕಾಶ್ ರಾವ್.

‘ಆದರೆ ಶನಿವಾರ ಸುದೀಪ್ ಅವರು ಬರುತ್ತಾರೆ, ಅವರ ಶೋ ನಾನು ಮಿಸ್ ಮಾಡಿಕೊಳ್ಳಬಾರದು ಎಂಬ ಏಕೈಕ ಕಾರಣಕ್ಕೆ ನಾನು ಶೋನಲ್ಲಿ ಉಳಿದುಕೊಂಡೆ. ಶನಿವಾರದ ವೇಳೆ ನನಗೆ ಕಾಲು ನೋವು ಮತ್ತು ಊತ ಎರಡೂ ಹೆಚ್ಚಾಗಿತ್ತು. ಬಹಳ ತಡೆದುಕೊಂಡಿದ್ದೆ. ಆದರೆ ಆ ಬಳಿಕ ನನ್ನಿಂದ ಇರಲು ಆಗಲಿಲ್ಲ. ನಾನು ಬಿಗ್​​ಬಾಸ್​​ ನವರಿಗೆ ಹೇಳಿದೆ. ಅವರೂ ಬಂದು ಪರೀಕ್ಷಿಸಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲಿಗೆ ಅಲ್ಲೇ ಒಂದು ದಿನ ಚಿಕಿತ್ಸೆ ನೀಡಿದರು. ಚೆನ್ನಾಗಿಯೇ ಆರೈಕೆ ಮಾಡಿದರು. ಆದರೆ ನಾವು ನಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ನಮ್ಮ ಅನುಕೂಲದ ಆಸ್ಪತ್ರೆಗೆ ದಾಖಲಾದೆವು’ ಎಂದಿದ್ದಾರೆ.

ಇದನ್ನೂ ಓದಿ:ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್​ಬಾಸ್ ಜಾನ್ಹವಿ: ವಿಡಿಯೋ

ಬಿಗ್​​ಬಾಸ್​​ ಶೋಗೆ ಮತ್ತೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಓಂ ಪ್ರಕಾಶ್ ರಾವ್, ‘ನಾನು ಗೆಲ್ಲಬೇಕೆಂದು ಶೋಗೆ ಹೋಗಿರಲಿಲ್ಲ. ಒಪ್ಪಂದದ ಪ್ರಕಾರ ವಾರದ ಸಂಭಾವನೆ ಕೊಟ್ಟರೆ ಸಾಕಿತ್ತು. ಗೆಲುವಿಗಾಗಿ ಕಿತ್ತಾಡುವ ವ್ಯಕ್ತಿಯೂ ನಾನಲ್ಲ. ಆದರೆ ಅನಾರೋಗ್ಯದಿಂದ ಈಗ ಹೊರಗೆ ಬಂದಿದ್ದೇನೆ. ಮತ್ತೆ ಒಳಗೆ ಹೋಗುವ ಬಗ್ಗೆ ಇನ್ನೂ ಯೋಚಿಸಿಲ್ಲ. ವೈದ್ಯರು 15 ದಿನಗಳ ಕಡ್ಡಾಯ ವಿಶ್ರಾಂತಿ ಸೂಚಿಸಿದ್ದಾರೆ. 15 ದಿನಗಳ ಬಳಿಕ ನಾನು ಹೇಗೆ ಗುಣ ಹೊಂದಿದ್ದೀನಿ ಎಂದು ನೋಡಿಕೊಂಡು ನಿರ್ಧಾರ ಮಾಡುತ್ತೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Tue, 15 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!