ಆಡಿಯೋ ಲಾಂಚ್ಗೆ ಅಡಚಣೆ, ಒಟಿಟಿಯಲ್ಲಿ ‘ಜೈಲರ್ 2’ ಪ್ರೀ ರಿಲೀಸ್ ಇವೆಂಟ್
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ. ಸಿಎಂ ವಿಜಯ್ ಮತ್ತು ರಜನೀಕಾಂತ್ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಆಡಿಯೋ ಲಾಂಚ್ ಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರಿಂದ ಧೃತಿಗೆಡದ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಅನ್ನು ಈಗಾಗಲೇ ನಡೆಸಿದ್ದು, ಅದನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲಿದೆ.

ಮುಖ್ಯಾಂಶಗಳು
- ‘ಜೈಲರ್ 2’ ಆಡಿಯೋ ಲಾಂಚ್ಗೆ ಅನುಮತಿ ನಿರಾಕರಣೆ
- ‘ಜೈಲರ್ 2’ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ
- ಕಾರ್ಯಕ್ರಮವು ಒಟಿಟಿಯಲ್ಲಿ ಪ್ರಸಾರ ಆಗಲಿದೆ.
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ಕ್ಕೆ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ರಜನೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ನಟಿಸಿದ್ದು, ಸಿನಿಮಾದ ಬಗ್ಗೆ ಬಹಳ ಕುತೂಹಲವಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಲು ಚಿತ್ರತಂಡ ಯೋಜಿಸಿತ್ತು, ಆದರೆ ಅದಕ್ಕೆ ಅನುಮತಿ ನೀಡಲಾಗಿಲ್ಲ. ಸಿಎಂ ವಿಜಯ್ ಮತ್ತು ರಜನೀಕಾಂತ್ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಆಡಿಯೋ ಲಾಂಚ್ ಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರಿಂದ ಧೃತಿಗೆಡದ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಅನ್ನು ಈಗಾಗಲೇ ನಡೆಸಿದ್ದು, ಅದನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲಿದೆ.
ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮ ಮಾಡಲು ಅವಕಾಶ ನಿರಾಕರಿಸಿದ ಕಾರಣ ಚಿತ್ರತಂಡವು ಖಾಸಗಿ ಕಾರ್ಯಕ್ರಮವೊಂದನ್ನು ಮಾಡಿದೆ. ಹಾಲ್ ಒಂದರಲ್ಲಿ ರಜನೀಕಾಂತ್ ಸೇರಿದಂತೆ ‘ಜೈಲರ್ 2’ ಸಿನಿಮಾದ ಹಲವು ನಟ-ನಟಿಯರು ಸೇರಿ ಕಾರ್ಯಕ್ರಮ ಮಾಡಿದ್ದು, ಸಂವಾದ, ಸಂದರ್ಶನ, ಚರ್ಚೆಗಳನ್ನು ಮಾಡಿದ್ದಾರೆ. ಹಾಸ್ಯಮಯವಾದ ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿ ಇದೀಗ ನೇರವಾಗಿ ಒಟಿಟಿಗೆ ರಿಲೀಸ್ ಮಾಡಲಾಗುತ್ತಿದೆ. ರಜನೀಕಾಂತ್, ರಮ್ಯಾ ಕೃಷ್ಣ, ವಿದ್ಯಾ ಬಾಲನ್, ನಿರ್ದೇಶಕ ನೆಲ್ಸನ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಇನ್ನೂ ಹಲವರು ಭಾಗಿ ಆಗಿದ್ದ ಈ ಕಾರ್ಯಕ್ರಮ ನಾಳೆ (ಅಕ್ಟೋಬರ್ 09) ಸನ್ ನೆಕ್ಸ್ಟ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ರಜನೀಕಾಂತ್ ಅವರ ಸಿನಿಮಾಕ್ಕೆ, ಅವರ ನಟನೆ, ಸ್ಟೈಲ್ಗೆ ದೊಡ್ಡ ಅಭಿಮಾನಿ ವರ್ಗವಿದೆ. ಅದರಂತೆ ಅವರ ಭಾಷಣಕ್ಕೂ ಸಹ ಭಾರಿ ದೊಡ್ಡ ಅಭಿಮಾನಿ ವರ್ಗವಿದೆ. ರಜನೀಕಾಂತ್ ಅವರು ಸಿನಿಮಾದ ಆಡಯೋ ಲಾಂಚ್ ಕಾರ್ಯಕ್ರಮಗಳಲ್ಲಿ ಅದ್ಭುತವಾಗಿ ಮಾತನಾಡಿ ನೆರೆದವರನ್ನು ರಂಜಿಸುತ್ತಾರೆ. ರಜನೀಕಾಂತ್ ಅವರ ಭಾಷಣ ಕೇಳಲೆಂದೇ ಜನರು ಕಾರ್ಯಕ್ರಮಕ್ಕೆ ಬರುತ್ತಾರೆ. ಆದರೆ ‘ಜೈಲರ್ 2’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿಲ್ಲ. ಜನರ ನಿಯಂತ್ರಣ ಕಷ್ಟವಾಗಬಹುದೆಂಬ ಕಾರಣ ನೀಡಿ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿದೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ, ಚಿತ್ರೀಕರಣದಲ್ಲಿ ಭಾಗಿ
‘ಜೈಲರ್ 2’ ಸಿನಿಮಾ, 2023ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾದ ಮುಂದುವರೆದ ಭಾಗವಾಗಿದೆ. ಸಿನಿಮಾನಲ್ಲಿ ಮುತ್ತುವೇಲ ಪಾಂಡಿಯನ್ ಹೆಸರಿನ ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದಾರೆ. ಹಾಸ್ಯ ಪ್ರಧಾನ ಆಕ್ಷನ್ ಕತೆಯನ್ನು ‘ಜೈಲರ್’ ಹೊಂದಿತ್ತು. ಜೊತೆಗೆ ಸಿನಿಮಾನಲ್ಲಿನ ಅತಿಥಿ ಪಾತ್ರಗಳು ಸಹ ಸಿನಿಮಾ ಹಿಟ್ ಆಗಲು ಕಾರಣವಾಗಿದ್ದವು. ಇದೀಗ ‘ಜೈಲರ್ 2’ ಸಿನಿಮಾನಲ್ಲೂ ಅದೇ ಪ್ರಯೋಗ ಮುಂದುವರೆಸಲಾಗಿದ್ದು, ಈ ಸಿನಿಮಾನಲ್ಲೂ ಸಹ ಹಲವು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಶಿವರಾಜ್ ಕುಮಾರ್, ಮೋಹನ್ಲಾಲ್, ಹೃತಿಕ್ ರೋಷನ್ ಇನ್ನೂ ಹಲವರು ‘ಜೈಲರ್ 2’ ಸಿನಿಮಾನಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




