AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಂಕು ಸಿಂಗ್-ಪ್ರಿಯಾ ಸರೋಜ್ ಮದುವೆಗೆ ದಿನಾಂಕ ನಿಗದಿ

ಡಿಸೆಂಬರ್ 4 ರಂದು ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಲಕ್ನೋದ ರಾಮದಾ ಹೋಟೆಲ್‌ನಲ್ಲಿ ನಡೆಯಲಿರುವ ಈ ಮದುವೆಗೆ ಕ್ರಿಕೆಟ್ ಮತ್ತು ರಾಜಕೀಯ ಲೋಕದ ಗಣ್ಯರು ಸಾಕ್ಷಿಯಾಗಲಿದ್ದಾರೆ. ಆರಂಭದಲ್ಲಿ ಮುಂದೂಡಲ್ಪಟ್ಟಿದ್ದ ಈ ಮದುವೆ ಈಗ ಲಕ್ನೋದಲ್ಲಿ ಅದ್ಧೂರಿಯಾಗಿ ನಡೆಯಲಿದೆ, ಪ್ರಿಯಾ ಅವರ ಹಳ್ಳಿಯ ಮದುವೆ ಕನಸು ಬದಲಾಗಿದೆ.

ರಿಂಕು ಸಿಂಗ್-ಪ್ರಿಯಾ ಸರೋಜ್ ಮದುವೆಗೆ ದಿನಾಂಕ ನಿಗದಿ
ರಿಂಕು ಸಿಂಗ್, ಪ್ರಿಯಾ ಸರೋಜ್Image Credit source: PTI
ಪೃಥ್ವಿಶಂಕರ
|

Updated on:Sep 15, 2026 | 8:09 PM

Share

ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಡಿಸೆಂಬರ್ 4 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇವರಿಬ್ಬರ ವಿವಾಹ ಸಮಾರಂಭವು ಲಕ್ನೋದ ರಾಮದಾ ಹೋಟೆಲ್‌ನಲ್ಲಿ ನಡೆಯಲಿದ್ದು, ವಿವಾಹಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಡಿಸೆಂಬರ್ 4 ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರು, ಕ್ರಿಕೆಟ್ ಮತ್ತು ರಾಜಕೀಯದ ಹಲವಾರು ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಮದುವೆ ಮುಂದೂಡಲಾಗಿತ್ತು

ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಜೂನ್ 8, 2025 ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ನವೆಂಬರ್ 2025 ರಲ್ಲಿ ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿತ್ತು. ಆದಾಗ್ಯೂ, ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳಿಂದಾಗಿ ವಿವಾಹವನ್ನು ಮುಂದೂಡಲಾಯಿತು. ಆರಂಭದಲ್ಲಿ, ಫೆಬ್ರವರಿ 2026 ರಲ್ಲಿ ವಿವಾಹವನ್ನು ನಿಗದಿಪಡಿಸಲಾಗಿತ್ತು, ಆದರೆ ಫೆಬ್ರವರಿ 2026 ರಲ್ಲಿ ಟಿ20 ವಿಶ್ವಕಪ್ ಮತ್ತು ಇತರ ಕ್ರಿಕೆಟ್ ಪಂದ್ಯಗಳ ಕಾರಣ, ವಿವಾಹವನ್ನು ಮುಂದೂಡಲಾಗಿತ್ತು.

ಒಂದು ವರ್ಷದ ನಂತರ ಮದುವೆ

ಇದೀಗ ಸುಮಾರು ಒಂದು ವರ್ಷದ ನಂತರ ಸಪ್ತಪದಿ ತುಳಿಯಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಚುನಾವಣೆಗೆ ಮುನ್ನವೇ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ ಈ ಮೊದಲು ಪ್ರಿಯಾ ಸರೋಜ್‌ಗೆ ತಮ್ಮ ಹಳ್ಳಿಯಲ್ಲಿ ಮದುವೆ ಆಗಬೇಕೆಂದು ಅವಳು ಬಯಸಿದ್ದರು. ಇದಕ್ಕೆ ಕಾರಣ ಪ್ರಿಯಾ ಅವರ ಕುಟುಂಬದಲ್ಲಿ ಹೆಚ್ಚಿನ ವಿವಾಹಗಳು ಗ್ರಾಮೀಣ ಶೈಲಿಯಲ್ಲಿ ನಡೆಯುತ್ತವೆ. ಅಲ್ಲದೆ ಬಾಲ್ಯದಿಂದಲೂ, ಅವರು ಸಾಂಪ್ರದಾಯಿಕ ಹಳ್ಳಿಯ ವಿವಾಹಗಳನ್ನು ಕಂಡಿದ್ದಾರೆ. ಮಂಟಪ, ಸಂಬಂಧಿಕರು, ಇಡೀ ಕುಟುಂಬ ಮತ್ತು ಹಳ್ಳಿಯ ವಾತಾವರಣದಲ್ಲಿ ಮದುವೆಯಾಗುವುದು ಪ್ರಿಯಾ ಅವರ ಆಸೆಯೂ ಆಗಿತ್ತು. ಆದರೆ ರಿಂಕು ಮತ್ತು ಪ್ರಿಯಾ ಇಬ್ಬರ ಜನಪ್ರಿಯತೆಯಿಂದಾಗಿ ಮದುವೆಯನ್ನು ಈಗ ಲಕ್ನೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಟಿ20 ವಿಶ್ವಕಪ್ ಗೆದ್ದು ಅಗಲಿದ ಅಪ್ಪನ ಬಗ್ಗೆ ರಿಂಕು ಸಿಂಗ್ ಭಾವುಕ ಸಂದೇಶ

ಲಕ್ನೋದಲ್ಲೇ ಮದುವೆ ಏಕೆ?

ರಿಂಕು ಮತ್ತು ಪ್ರಿಯಾ ಅವರ ನಿಶ್ಚಿತಾರ್ಥವೂ ಲಕ್ನೋದಲ್ಲಿಯೇ ನಡೆದಿತ್ತು. ನಿಶ್ಚಿತಾರ್ಥದಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎರಡೂ ಕ್ಷೇತ್ರಗಳ ಜನರು ಹಾಜರಿದ್ದರು. ಆದ್ದರಿಂದ, ಲಕ್ನೋ ಮದುವೆಗೆ ಸ್ವಾಭಾವಿಕ ಆಯ್ಕೆಯಾಗಿದೆ. ಇನ್ನೊಂದು ಕಾರಣ ಪ್ರಿಯಾ ಸರೋಜ್ ಅವರ ರಾಜಕೀಯ ಜೀವನ. ಪ್ರಿಯಾ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದು, ಉತ್ತರ ಪ್ರದೇಶ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದಕ್ಕೆ ಪೂರಕವಾಗಿ 2027 ರ ವಿಧಾನಸಭಾ ಚುನಾವಣೆಗಳು ಸಹ ಸಮೀಪಿಸುತ್ತಿರುವುದರಿಂದ ಇಲ್ಲಿ ಮದುವೆಯಾಗುವುದು ಕೂಡ ಅವರಿಗೆ ಒಂದು ರೀತಿಯ ಲಾಭವನ್ನು ತಂದುಕೊಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Tue, 15 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ