AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಒಲಿದ ‘ಕಾಮನ್‌ವೆಲ್ತ್ ಗೇಮ್ಸ್ 2030’ ಆತಿಥ್ಯ!

Commonwealth Games 2030: 2026ರ ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ ತೆರೆಬಿದ್ದ ಬೆನ್ನಲ್ಲೇ, ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಸುವರ್ಣ ಅಧ್ಯಾಯ ಆರಂಭವಾಗಿದೆ. ಮುಂದಿನ 2030ರ ಕಾಮನ್​ವೆಲ್ತ್ ಕ್ರೀಡಾಕೂಟದ ಅಧಿಕೃತ ಆತಿಥ್ಯವನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಈ ಐತಿಹಾಸಿಕ ಜಾಗತಿಕ ಕೂಟಕ್ಕೆ ಗುಜರಾತ್‌ನ ಅಹಮದಾಬಾದ್ ಆತಿಥ್ಯ ವಹಿಸಲಿದೆ. 

ಭಾರತಕ್ಕೆ ಒಲಿದ 'ಕಾಮನ್‌ವೆಲ್ತ್ ಗೇಮ್ಸ್ 2030' ಆತಿಥ್ಯ!
Commonwealth Games 2030Image Credit source: CWG
ಝಾಹಿರ್ ಯೂಸುಫ್
|

Updated on: Aug 03, 2026 | 8:08 AM

Share

2026ರ ಗ್ಲ್ಯಾಸ್ಗೋ ಕಾಮನ್​ವೆಲ್ತ್ ಗೇಮ್ಸ್​ಗೆ  ತೆರೆಬಿದ್ದಿದೆ. ಇದರ ಬೆನ್ನಲ್ಲೇ, 2030ರ ಕಾಮನ್​ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಇದರೊಂದಿಗೆ, ಶತಮಾನದ ಐತಿಹಾಸಿಕ ಹೆಗ್ಗುರುತಿನ ಮುಂದಿನ ಕಾಮನ್​ವೆಲ್ತ್ ಗೇಮ್ಸ್​ಗೆ ಗುಜರಾತ್‌ನ ಅಹಮದಾಬಾದ್ ಆತಿಥ್ಯ ವಹಿಸುವುದು ಖಚಿತವಾಗಿದೆ.

ಗ್ಲ್ಯಾಸ್ಗೋ ಕಾಮನ್​ವೆಲ್ತ್ ಗೇಮ್ಸ್​ನ ಸಮಾರೋಪ ಸಮಾರಂಭದ ಅಂತ್ಯದಲ್ಲಿ ಸ್ಕಾಟ್​ಲ್ಯಾಂಡ್​ನ ಅಧಿಕಾರಿಗಳು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (CGF) ಧ್ವಜ ಮತ್ತು ಆತಿಥ್ಯದ ಬ್ಯಾಟನ್ ಅನ್ನು ಭಾರತೀಯ ನಿಯೋಗಕ್ಕೆ ಹಸ್ತಾಂತತಿಸಿದ್ದಾರೆ. ಭಾರತದ ಪರವಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಗುಜರಾತ್ ರಾಜ್ಯದ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಈ ಆತಿಥ್ಯದ ಹಕ್ಕನ್ನು ಸ್ವೀಕರಿಸಿದ್ದಾರೆ.

‘ಶತಮಾನದ ಕ್ರೀಡಾಕೂಟ’

1930ರಲ್ಲಿ ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 2030ರ ವೇಳೆಗೆ ಸರಿಯಾಗಿ 100 ವರ್ಷ ತುಂಬಲಿದೆ. ಈ ಶತಮಾನದ ಸ್ಮರಣೀಯ ಆವೃತ್ತಿಗೆ ಭಾರತ ಸಾಕ್ಷಿಯಾಗಲಿರುವುದು ವಿಶೇಷ.

2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಎರಡನೇ ಕಾಮನ್‌ವೆಲ್ತ್ ಗೇಮ್ಸ್ ಇದಾಗಿದೆ. ಹೀಗಾಗಿಯೇ ಅಹಮದಾಬಾದ್​ನಲ್ಲಿ ನಡೆಯಲಿರುವ ಕ್ರೀಡಾಕೂಟವು ವಿಶೇಷವಾಗಿರಲಿದೆ.

ಇನ್ನು ಗ್ಲ್ಯಾಸ್ಗೋ ಕಾಮನ್​ವೆಲ್ತ್​ ಕ್ರೀಡಾಕೂಟವನ್ನು​ ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ಅಹಮದಾಬಾದ್ 2030ರಲ್ಲಿ 15 ರಿಂದ 17 ಕ್ರೀಡಾ ವಿಭಾಗಗಳನ್ನು ಸೇರಿಸಲು ಕಾಮನ್‌ವೆಲ್ತ್ ಸ್ಪೋರ್ಟ್ಸ್ ಸಂಸ್ಥೆ ಒಪ್ಪಿಗೆ ನೀಡಿದೆ. ಹೀಗಾಗಿ ಮುಂದಿನ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೆಚ್ಚಿನ ಕ್ರೀಡಾಪಟುಗಳು ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಮಿನುಗಿದ ಭಾರತೀಯ ಸಂಸ್ಕೃತಿ:

ಧ್ವಜ ಹಸ್ತಾಂತರದ ವೇಳೆ ಗ್ಲ್ಯಾಸ್ಗೋ ಹೈಡ್ರೋ ಸ್ಟೇಡಿಯಂನಲ್ಲಿ ಭಾರತದ ಭವ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಖ್ಯಾತ ಗಾಯಕ ಶಂಕರ್ ಮಹದೇವನ್, ನಟಿ ಮಾನುಷಿ ಛಿಲ್ಲರ್ ಮತ್ತು ಸಿತಾರ್ ವಾದಕ ರಿಷಭ್ ಶರ್ಮಾ ನೇತೃತ್ವದಲ್ಲಿ ನಡೆದ ಪ್ರದರ್ಶನವು ಜಗತ್ತಿನ ಗಮನ ಸೆಳೆಯಿತು.

‘ವಂದೇ ಮಾತರಂ’ ಗೀತೆಯ 150ನೇ ವರ್ಷದ ನೆನಪಿನಲ್ಲಿ ಮೂಡಿಬಂದ ಸಂಗೀತ ಮತ್ತು ಸ್ಕಾಟಿಷ್ ಪೈಪರ್‌ಗಳೊಂದಿಗಿನ ಜುಗಲ್‌ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಅಹಮದಾಬಾದ್‌ನ ಪರಂಪರೆ ಹಾಗೂ ನಾವೀನ್ಯತೆಯನ್ನು ಬಿಂಬಿಸುವ ವಿಶೇಷ ಕಿರುಚಿತ್ರದ ಮೂಲಕ ಇಡೀ ಜಗತ್ತಿಗೆ ‘ವಸುಧೈವ ಕುಟುಂಬಕಂ’ ಎಂಬ ಸಂದೇಶದೊಂದಿಗೆ 2030ರ ಕಾಮನ್​ವೆಲ್ತ್​ ಕ್ರೀಡಾಕೂಟಕ್ಕೆ ಆಹ್ವಾನ ನೀಡಲಾಯಿತು.

ಒಲಿಂಪಿಕ್ಸ್ ಕನಸಿಗೆ ಬೂಸ್ಟರ್!

ಭಾರತವು 2036ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಸಲ್ಲಿಸುತ್ತಿದೆ. ಅದಕ್ಕೂ ಮುನ್ನ 2030ರಲ್ಲಿ ಇಷ್ಟು ದೊಡ್ಡ ಮಟ್ಟದ ಜಾಗತಿಕ ಕೂಟವನ್ನು ಯಶಸ್ವಿಯಾಗಿ ನಡೆಸುವುದು ಭಾರತದ ಮೂಲಭೂತ ಸೌಕರ್ಯ ಮತ್ತು ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಲಿದೆ.

2030ರ ಕಾಮನ್​ವೆಲ್ತ್ ಗೇಮ್ಸ್​ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಪ್ರಮುಖ ವೇದಿಕೆಗಳಾಗಲಿದ್ದು, ನಗರದಲ್ಲಿ ಈಗಾಗಲೇ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಆರಂಭವಾಗಿದೆ.

ಇದನ್ನೂ ಓದಿ: CWG 2026: 61 ರಿಂದ 39… ಈ ಬಾರಿ ಪದಕ ಕಮ್ಮಿಯಾಗಲು ಇದುವೇ ಅಸಲಿ ಕಾರಣ!

ಒಟ್ಟಾರೆಯಾಗಿ, 2026ರ ಗ್ಲ್ಯಾಸ್ಗೋ ಕ್ರೀಡಾಕೂಟದ ಯಶಸ್ವಿ ಮುಕ್ತಾಯ ಹಾಗೂ 2030ರ ಆತಿಥ್ಯದ ಧ್ವಜ ಹಸ್ತಾಂತರವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವನ್ನು ಬರೆದಿದೆ. ನೂರು ವರ್ಷಗಳ ಇತಿಹಾಸವಿರುವ ‘ಶತಮಾನದ ಕಾಮನ್‌ವೆಲ್ತ್ ಕ್ರೀಡಾಕೂಟ’ಕ್ಕೆ ಅಹಮದಾಬಾದ್ ಆತಿಥ್ಯ ವಹಿಸುತ್ತಿರುವುದು ಕೇವಲ ಗುಜರಾತ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೇ ಹೆಮ್ಮೆಯ ವಿಷಯ.

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’