AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 171… ಈ ಬಾರಿ ಅತ್ಯಧಿಕ ಪದಕ ಗೆದ್ದ ದೇಶ ಯಾವುದು ಗೊತ್ತಾ?

Commonwealth Games 2026: ವಿಶ್ವದ ವಿವಿಧ ದೇಶಗಳ ಅಥ್ಲೀಟ್‌ಗಳು ತಮ್ಮ ಸರ್ವಸ್ವವನ್ನು ಪಣಕ್ಕಿಟ್ಟು ಹೋರಾಡಿದರು. ಆದರೆ, ಈ ಬಾರಿಯ ಅಂತಿಮ ಪದಕ ಪಟ್ಟಿಯು ಜಾಗತಿಕ ಕ್ರೀಡಾ ರಂಗದಲ್ಲಿ ಕೆಲವೇ ಕೆಲವು ದೇಶಗಳ ಪ್ರಶ್ನಾತೀತ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳು ಇತರ ರಾಷ್ಟ್ರಗಳಿಗಿಂತ ಮೈಲುಗೈ ಸಾಧಿಸಿದ್ದು, ಒಟ್ಟಾರೆ ಪದಕ ಪಟ್ಟಿಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಬರೋಬ್ಬರಿ 171... ಈ ಬಾರಿ ಅತ್ಯಧಿಕ ಪದಕ ಗೆದ್ದ ದೇಶ ಯಾವುದು ಗೊತ್ತಾ?
Commonwealth Games 2026
ಝಾಹಿರ್ ಯೂಸುಫ್
|

Updated on:Aug 03, 2026 | 9:57 AM

Share

ವಿಶ್ವದ ಪ್ರಮುಖ ಹಾಗೂ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್​ವೆಲ್ತ್ ಗೇಮ್ಸ್ 2026 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಸ್ಕಾಟ್​ಲ್ಯಾಂಡ್​ನಲ್ಲಿ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆದ ಈ ಜಾಗತಿಕ ಕ್ರೀಡಾಕೂಟದಲ್ಲಿ, ಜಗತ್ತಿನ ನಾನಾ ರಾಷ್ಟ್ರಗಳ ಸಾವಿರಾರು ಅಥ್ಲೀಟ್‌ಗಳು ತಮ್ಮ ಅದ್ಭುತ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಇನ್ನು ಇಡೀ ಕ್ರೀಡಾಕೂಟದಲ್ಲಿ ಎಂದಿನಂತೆ ಈ ಬಾರಿಯೂ ಆಸ್ಟ್ರೇಲಿಯಾ ತನ್ನ ಸಾಂಪ್ರದಾಯಿಕ ಪ್ರಾಬಲ್ಯವನ್ನು ಮುಂದುವರಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವುದು ವಿಶೇಷ.

ಆಸ್ಟ್ರೇಲಿಯಾ ಅಧಿಪತಿ:

ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಅತ್ಯಧಿಕ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಆಸ್ಟ್ರೇಲಿಯಾ, ಈ ಬಾರಿಯ ಗ್ಲಾಸ್ಗೋ ಕ್ರೀಡಾಕೂಟದಲ್ಲೂ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಒಟ್ಟು 171 ಪದಕಗಳನ್ನು (70 ಚಿನ್ನ, 45 ಬೆಳ್ಳಿ, 56 ಕಂಚು) ಮುಡಿಗೇರಿಸಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಇಂಗ್ಲೆಂಡ್ 110 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಕೆನಡಾ 62 ಪದಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ.

ಭಾರತದ ಪಾರುಪತ್ಯ:

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್ ಭಾರತಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಏಕೆಂದರೆ ಭಾರತಕ್ಕೆ ಸಾಮಾನ್ಯವಾಗಿ ಅತಿ ಹೆಚ್ಚು ಪದಕಗಳನ್ನು ತಂದುಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಶೂಟಿಂಗ್ ಮತ್ತು ಹಾಕಿಯಂತಹ ಪ್ರಮುಖ ಕ್ರೀಡೆಗಳನ್ನು ಈ ಬಾರಿಯ ಗೇಮ್ಸ್‌ನಿಂದ ಕೈಬಿಡಲಾಗಿತ್ತು.

ಇಷ್ಟೆಲ್ಲಾ ಹಿನ್ನಡೆಗಳಿದ್ದರೂ, ಭಾರತೀಯ ಅಥ್ಲೀಟ್‌ಗಳು ಎದೆಗುಂದದೆ ಅಭೂತಪೂರ್ವ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಭಾರತವು ಒಟ್ಟು 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು) ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.

ಕಾಮನ್​ವೆಲ್ತ್ ಗೇಮ್ಸ್​ 2026 ಪದಕ ಪಟ್ಟಿ:

ಶ್ರೇಯಾಂಕ  ದೇಶ  ಚಿನ್ನ  ಬೆಳ್ಳಿ  ಕಂಚು ಒಟ್ಟು ಪದಕಗಳು
1 ಆಸ್ಟ್ರೇಲಿಯಾ 70 45 55 171
2 ಇಂಗ್ಲೆಂಡ್ 29 45 36 110
3 ಕೆನಡಾ 19 20 23 62
4 ಭಾರತ 13 17 9 39
5 ಸ್ಕಾಟ್ಲೆಂಡ್ 13 9 17 39
6 ನ್ಯೂಝಿಲ್ಯಾಂಡ್ 10 14 12 36
7 ನೈಜೀರಿಯಾ 10 7 7 24
8 ಜಮೈಕಾ 10 4 5 19
9 ವೇಲ್ಸ್ 9 10 12 31
10 ಮಲೇಷ್ಯಾ 8 3 5 16
11 ಸೌತ್ ಆಫ್ರಿಕಾ 7 11 11 29
12 ನಾರ್ತ್ ಐರ್ಲೆಂಡ್ 7 4 10 21
13 ಕೀನ್ಯಾ 6 5 8 19
14 ಸೈಪ್ರಸ್ 5 1 8 14
15 ಬಹಾಮಾಸ್ 4 1 2 7
16 ಟ್ರಿನಿಡಾಡ್ ಅ್ಯಂಡ್ ಟೊಬಾಗೊ 3 2 5 10
17 ಯುಗಾಂಡಾ 3 1 3 7
18 ಸಿಂಗಾಪುರ 2 6 3 11
19 ಸಮೋವಾ 2 3 3 8
20 ಫಿಜಿ 2 2 2 6

ಒಟ್ಟಾರೆಯಾಗಿ ಹೇಳುವುದಾದರೆ, ಗ್ಲಾಸ್ಗೋ 2026ರ ಕಾಮನ್​ವೆಲ್ತ್ ಗೇಮ್ಸ್‌ನ ಪದಕ ಪಟ್ಟಿಯನ್ನು ಗಮನಿಸಿದರೆ ಜಾಗತಿಕ ಕ್ರೀಡಾರಂಗದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಸಾಮ್ರಾಜ್ಯ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ಈ ಬಾರಿಯ ಪದಕ ಪಟ್ಟಿಯಲ್ಲಿ ನೂರಕ್ಕೂ ಅಧಿಕ ಮೆಡಲ್ ಗೆದ್ದಿರುವುದು ಕೇವಲ 2 ದೇಶಗಳು ಮಾತ್ರ. ಅದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್.

ಇದನ್ನೂ ಓದಿ: ಮೊದಲು ಶ್ರೀಲಂಕಾ ವಿರುದ್ಧ ಗೆಲ್ಲಿ, ಫೈನಲ್ ಆಮೇಲೆ ನೋಡೋಣ!

ಉಳಿದ ಯಾವುದೇ ರಾಷ್ಟ್ರಗಳು ಕನಿಷ್ಠ 70ರ ಗಡಿಯನ್ನೂ ದಾಟಲು ಸಾಧ್ಯವಾಗದಿರುವುದು ಈ ಎರಡು ದೇಶಗಳ ಅಪ್ರತಿಮ ಕ್ರೀಡಾ ಶಕ್ತಿಗೆ ಸಾಕ್ಷಿ. ಇಂತಹ ಬಲಿಷ್ಠ ಪೈಪೋಟಿಯ ನಡುವೆಯೂ ಭಾರತವು 39 ಪದಕಗಳೊಂದಿಗೆ 4ನೇ ಸ್ಥಾನ ಕಾಯ್ದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

Published On - 9:50 am, Mon, 3 August 26

Follow Us
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ