ಬೀಜಿಂಗ್​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ; ಅಧಿಕೃತ ಘೋಷಣೆ

ಅಮೆರಿಕ 2022ರ ಬೀಜಿಂಗ್​ ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆಯೇ ಹೊರತು ಸಂಪೂರ್ಣ ಬಹಿಷ್ಕಾರ ಹಾಕಿಲ್ಲ. ಹೀಗಾಗಿ ಬೀಜಿಂಗ್​​ನ ಒಲಿಂಪಿಕ್ಸ್​​ನಲ್ಲಿ ಅಮೆರಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಾರೆ.

ಬೀಜಿಂಗ್​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ; ಅಧಿಕೃತ ಘೋಷಣೆ
ಅಮೆರಿಕ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on:Dec 07, 2021 | 9:21 AM

ವಾಷಿಂಗ್ಟನ್​: 2022ರಲ್ಲಿ ಬೀಜಿಂಗ್​​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​​ಗೆ ಯುಎಸ್​ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆ.  ಈ ಮೂಲಕ ಒಲಿಂಪಿಕ್ಸ್​​ನಲ್ಲಿ ಅಮೆರಿಕ ಸರ್ಕಾರದ ಯಾವುದೇ ಅಧಿಕಾರಿಗಳೂ ಪಾಲ್ಗೊಳ್ಳುವುದಿಲ್ಲ ಎಂದು ಜೋ ಬೈಡನ್​ ಆಡಳಿತ ಸ್ಪಷ್ಟಪಡಿಸಿದೆ.   ಚೀನಾದ ಕ್ಸಿನ್​ಜಿಯಾಂಗ್​​ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಕ್ರೈಂಗಳನ್ನು ತಡೆಯಲು ಚೀನಾ ಸರ್ಕಾರ ವಿಫಲವಾಗಿದೆ. ಅಲ್ಲಿ ಅವರ ನರಮೇಧ ನಡೆಯುತ್ತಿದ್ದು, ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹೀಗಿದ್ದಾಗ್ಯೂ ಕೂಡ ಚೀನಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಬೀಜಿಂಗ್​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ವೈಟ್​ಹೌಸ್ ಹೇಳಿದೆ. 

ಬೀಜಿಂಗ್​ ಒಲಿಂಪಿಕ್ಸ್​​ ಬಹಿಷ್ಕಾರವನ್ನು ಅಮೆರಿಕ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದರೂ, ಈ ವಿಚಾರ ಸಂಬಂಧ ಕಳೆದ ಐದಾರು ತಿಂಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಅಮೆರಿಕದ ಸಂಸತ್ತಿನ ಸ್ಪೀಕರ್​ ನ್ಯಾನ್ಸಿ ಪೆಲೋಸಿ ಮೇ ತಿಂಗಳಲ್ಲಿಯೇ ಈ ಬಗ್ಗೆ ಕರೆ ನೀಡಿದ್ದರು. ಡೆಮಾಕ್ರಟಿಕ್​ ಪಕ್ಷದವರಾಗಿರುವ ನ್ಯಾನ್ಸಿ, 2022ರಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಹೀಗಾಗಿ 2022ರಲ್ಲಿ ಬೀಜಿಂಗ್​​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಬೇಕು. ಕೇವಲ ಅಮೆರಿಕ ಮಾತ್ರವಲ್ಲ, ಜಗತ್ತಿನ ಯಾವುದೇ ನಾಯಕನೂ ಅದರಲ್ಲಿ ಪಾಲ್ಗೊಳ್ಳಬಾರು ಎಂದು ಹೇಳಿದ್ದರು. ಅದಕ್ಕೆ ಉಳಿದ ಜನಪ್ರತಿನಿಧಿಗಳೂ ದನಿ ಗೂಡಿಸಿದ್ದರು.

ಇನ್ನು ಅಮೆರಿಕದ ರಾಜತಾಂತ್ರಿಕ ಬಹಿಷ್ಕಾರಕ್ಕೆ ಚೀನಾ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಚೀನಾ, ಯಾವುದೇ ರಾಜತಾಂತ್ರಿಕ ಬಹಿಷ್ಕಾರ ಹಾಕಿದರೆ, ಅದರ ವಿರುದ್ಧ ಸೂಕ್ತ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಈ ಮಧ್ಯೆ ಜೋ ಬೈಡನ್​ ಕಳೆದ ತಿಂಗಳೇ ತಮ್ಮ ನಿಲುವು ಪ್ರಕಟಿಸಿದ್ದರು. ಚೀನಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ನರಮೇಧ ನಡೆಯುತ್ತಿದೆ. ಆ ದೇಶ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದರ ವಿರುದ್ಧ ಪ್ರತಿಭಟನೆ ಸ್ವರೂಪವಾಗಿ ಇಂಥ ರಾಜತಾಂತ್ರಿಕ ಬಹಿಷ್ಕಾರವನ್ನು ಪರಿಗಣಿಸಲಾಗುವುದು ಎಂದಿದ್ದರು.

ಕ್ರೀಡಾಪಟುಗಳಿಗೆ ಸಮಸ್ಯೆಯಿಲ್ಲ ಇಲ್ಲಿ ಅಮೆರಿಕ 2022ರ ಬೀಜಿಂಗ್​ ಒಲಿಂಪಿಕ್ಸ್​​ಗೆ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆಯೇ ಹೊರತು ಸಂಪೂರ್ಣ ಬಹಿಷ್ಕಾರ ಹಾಕಿಲ್ಲ. ಹೀಗಾಗಿ ಬೀಜಿಂಗ್​​ನ ಒಲಿಂಪಿಕ್ಸ್​​ನಲ್ಲಿ ಅಮೆರಿಕ ಸರ್ಕಾರದ ಯಾವುದೇ ನಾಯಕ, ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ. ಆದರೆ ಅಮೆರಿಕದ ಆಟಗಾರರು ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ಇನ್ನು 2028ರಲ್ಲಿ ಅಮೆರಿಕದ ಲಾಸ್​ ಏಂಜಲಿನಸ್​​ನಲ್ಲಿ ಒಲಿಂಪಿಕ್ಸ್​ ಇದ್ದು, ಈ ಬಗ್ಗೆ ಚೀನಾ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲವೂ ಇದೆ.

ಇದನ್ನೂ ಓದಿ: Viral Video: ಜಿಮ್​ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್‌ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್

Published On - 9:20 am, Tue, 7 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ