AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನವಿ ಮಾಡಿಕೊಂಡ್ರೂ ಇವರು ಇಂಥ ಕೆಲಸ ಮಾಡಲ್ಲ’; ಜ್ಯೂ. ಎನ್​ಟಿಆರ್​ ಮೇಲೆ ಆಲಿಯಾ ಆರೋಪ

The Kapil Sharma Show: ಎಲ್ಲರಿಗೂ ತಿಳಿದಿರುವಂತೆ ಜ್ಯೂ. ಎನ್​ಟಿಆರ್​ ಅವರ ಹಾಸ್ಯಪ್ರಜ್ಞೆ ಸೂಪರ್​ ಆಗಿದೆ. ಆಲಿಯಾ ಭಟ್​ ಮಾಡಿದ ಆರೋಪಕ್ಕೆ ಅವರು ತಮಾಷೆಯಾಗಿಯೇ ಉತ್ತರ ನೀಡಿದರು.

‘ಮನವಿ ಮಾಡಿಕೊಂಡ್ರೂ ಇವರು ಇಂಥ ಕೆಲಸ ಮಾಡಲ್ಲ’; ಜ್ಯೂ. ಎನ್​ಟಿಆರ್​ ಮೇಲೆ ಆಲಿಯಾ ಆರೋಪ
ಆಲಿಯಾ ಭಟ್​, ಜ್ಯೂ. ಎನ್​ಟಿಆರ್
TV9 Web
| Updated By: ಮದನ್​ ಕುಮಾರ್​|

Updated on: Jan 06, 2022 | 12:01 PM

Share

ನಟಿ ಆಲಿಯಾ ಭಟ್​ (Alia Bhatt) ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಆರ್​ಆರ್​ಆರ್​’ (RRR Movie) ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಒಮಿಕ್ರಾನ್​ ಕಾರಣದಿಂದ ಆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ‘ಆರ್​ಆರ್​ಆರ್​’ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳಲ್ಲಿ ಚಿತ್ರತಂಡ ಭಾಗವಹಿಸಿದೆ. ಅವುಗಳಲ್ಲಿ ‘ದಿ ಕಪಿಲ್​ ಶರ್ಮಾ ಶೋ’ (The Kapil Sharma Show) ಕಾರ್ಯಕ್ರಮ ಹೆಚ್ಚು ಹೈಲೈಟ್​ ಆಗಿದೆ. ಈ ಶೋನಲ್ಲಿ ಆಲಿಯಾ ಭಟ್​ ಜೊತೆ ಜ್ಯೂ. ಎನ್​ಟಿಆರ್​, ರಾಮ್​ ಚರಣ್​ (Ram Charan), ರಾಜಮೌಳಿ ಕೂಡ ಭಾಗಿ ಆಗಿದ್ದರು. ಈ ವೇಳೆ ಆಲಿಯಾ ಮತ್ತು ಜ್ಯೂ. ಎನ್​ಟಿಆರ್​ (Jr NTR) ನಡುವೆ ಒಂದಷ್ಟು ತಮಾಷೆಯ ಮಾತುಕತೆ ನಡೆದಿದೆ.

ಕಪಿಲ್​ ಶರ್ಮಾ ಶೋ ಎಂದರೆ ಅಲ್ಲಿ ತಮಾಷೆಗೆ ಬರವಿಲ್ಲ. ಬಂದ ಅತಿಥಿಗಳನ್ನು ಕಪಿಲ್​ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯದ ಲಹರಿಗೆ ಅತಿಥಿಗಳು ಕೂಡ ಸಾಥ್​ ನೀಡುತ್ತಾರೆ. ನಟಿ ಆಲಿಯಾ ಭಟ್​ ಅವರು ಜ್ಯೂ. ಎನ್​ಟಿಆರ್​ ಬಗ್ಗೆ ಒಂದು ಆರೋಪ ಮಾಡಿದರು. ‘ಇವರು ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರೆ. ಆದರೆ ಒಂದು ಬಾರಿ ಕೂಡ ನಮಗೆ ಅಡುಗೆ ಮಾಡಿ ಕೊಟ್ಟಿಲ್ಲ’ ಎಂದು ಆಲಿಯಾ ತಕರಾರು ತೆಗೆದರು. ಅದಕ್ಕೆ ಜ್ಯೂ. ಎನ್​ಟಿಆರ್​ ಕಡೆಯಿಂದ ಬಂದ ಪ್ರತಿಕ್ರಿಯೆ ಕೂಡ ಅಷ್ಟೇ ಫನ್ನಿ ಆಗಿತ್ತು.

ಎಲ್ಲರಿಗೂ ತಿಳಿದಿರುವಂತೆ ಜ್ಯೂ. ಎನ್​ಟಿಆರ್​ ಅವರ ಹಾಸ್ಯಪ್ರಜ್ಞೆ ಸೂಪರ್​ ಆಗಿದೆ. ಆಲಿಯಾ ಮಾಡಿದ ಆರೋಪಕ್ಕೆ ಅವರು ತಮಾಷೆಯಾಗಿಯೇ ಉತ್ತರ ನೀಡಿದರು. ‘ಇವರು ಸೈಜ್​ ಜೀರೋ ಆಗಿದ್ದಾರೆ. ಇವರಿಗೆ ನಾನು ಅಡುಗೆ ಮಾಡಿ ಬಡಿಸಲು ಹೇಗೆ ಸಾಧ್ಯ’ ಎಂದು ಅವರು ಕಾಲೆಳೆದರು. ಆ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು. ‘ನಾನು ಕೇಳಿಕೊಂಡ್ರೂ ಸಹ ಇವರು ನನಗೆ ಅಡುಗೆ ಮಾಡಿ ಬಡಿಸುವುದಿಲ್ಲ’ ಎಂದು ಆಲಿಯಾ ಪ್ರತ್ಯಾರೋಪ ಮಾಡಿದರು.

ಇಂಥ ಅನೇಕ ಫನ್ನಿ ಮಾತುಕತೆಗಳು ಈ ಎಪಿಸೋಡ್​ನಲ್ಲಿ ನಡೆದಿವೆ. ಆದರೆ ಎಲ್ಲವನ್ನೂ ಟಿವಿಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅನ್​-ಸೆನ್ಸಾರ್ಡ್​ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಲಾಗಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಆ ವಿಡಿಯೋ 37 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಹಲವು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ಮಿತಿ ನಿರ್ಬಂಧ ಹೇರಲಾಗಿದೆ. ಹಾಗಾಗಿ ‘ಆರ್​ಆರ್​ಆರ್​’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದ್ದು, ಹೊಸ ರಿಲೀಸ್​ ಡೇಟ್​ ತಿಳಿದುಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!