AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ

ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್​ ವಿಲನ್​ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ.

Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ
ನಟ ಅನಿರುದ್ಧ
ರಾಜೇಶ್ ದುಗ್ಗುಮನೆ
|

Updated on:Jan 06, 2022 | 6:12 PM

Share

ತೆರೆ ಮೇಲೆ ಹೀರೋ ಆಗಿ ನೋಡುತ್ತಿದ್ದವರನ್ನು ವಿಲನ್​ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ (Jothe Jotheyali Serial) ಅದೇ ಆಗಿದೆ. ಈ ಧಾರಾವಾಹಿಯಲ್ಲಿ ವಿಷ್ಣುವರ್ಧನ್​ ಅಳಿಯ, ನಟ ಅನಿರುದ್ಧ​ ನಿರ್ವಹಿಸುತ್ತಿರುವ ಆರ್ಯವರ್ಧನ್ (Aryavardhan )​ ಪಾತ್ರ ನಿಧಾನವಾಗಿ ನೆಗೆಟಿವ್​ ಶೇಡ್​ಗೆ ತಿರುಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಒಂದು ವರ್ಗದವರು ಕಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಅನಿರುದ್ಧ​​ ಅವರು ‘ಟಿವಿ9 ಕನ್ನಡ ಡಿಜಿಟಲ್​’ ಜತೆ ಮಾತನಾಡಿದ್ದಾರೆ. ‘ಓರ್ವ ಕಲಾವಿದನಾಗಿ ಈ ಪಾತ್ರವನ್ನು ತುಂಬಾನೇ ಎಂಜಾಯ್​ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು.

ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್​ ವಿಲನ್​ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ. ‘ತಿರುವುಗಳು ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ. ನಾವು ಮೊದಲಿನಿಂದಲೂ ಟ್ವಿಸ್ಟ್​ಗಳನ್ನು ನೀಡುತ್ತಲೇ ಬಂದಿದ್ದೇವೆ. ಆರ್ಯವರ್ಧನ್​ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಎಲ್ಲ ತರಹದ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನನಗೆ ಈ ಪಾತ್ರದ ಮೂಲಕ ಸಿಕ್ಕಿದೆ. ನನ್ನ ಪಾತ್ರ ನೆಗೆಟಿವ್​ ಶೇಡ್​ ಪಡೆದುಕೊಂಡಿದೆ. ಒಂದು ರೀತಿಯಲ್ಲಿ ವಿಲನ್​ ಎಂದೇ ಹೇಳಬಹುದು. ಕಥೆಯಲ್ಲಿ ಮುಂದೆ ಹೋಗುತ್ತಾ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ’ ಎಂದಿದ್ದಾರೆ ಅನಿರುದ್ಧ.

ಧಾರಾವಾಹಿಯಲ್ಲಿ ಈ ಕ್ಷಣ ಏನು ಸಾಗುತ್ತಿದೆಯೋ ಅದನ್ನು ಆನಂದಿಸಬೇಕು ಎಂಬುದು ಅನಿರುದ್ಧ ಮನವಿ. ‘ಗುರಿ ತಲುಪೋದು ಇದ್ದೇ ಇದೆ. ಪ್ರವಾಸದ ಪ್ರತಿ ಹಂತವನ್ನೂ ನಾವು ಆನಂದಿಸಬೇಕು. ಹೀರೋನೆ ವಿಲನ್​ ಆಗಿರೋದು ಕನ್ನಡ ಕಿರುತೆರೆ ಲೋಕದಲ್ಲಿ ಇದೇ ಮೊದಲು. ಈ ಹಂತವನ್ನೂ ಆನಂದಿಸೋಣ. ಈ ರೀತಿ ನಟಿಸೋಕೆ ಕಲಾವಿದನಾಗಿ ನನಗೆ ನಿಜಕ್ಕೂ ಖುಷಿ ಇದೆ. ಸಿನಿಮಾದಲ್ಲಿ ಈ ರೀತಿಯ ಪಾತ್ರ ಸಿಕ್ಕಿಲ್ಲ. ಆದರೆ, ಇಲ್ಲಿ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.

‘ಇದು ಆರಂಭವಾದ್ದರಿಂದ ವೀಕ್ಷಕರಿಗೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಆದರೆ, ಮುಂದೆ ಹೋಗುತ್ತಾ ಗೊತ್ತಾಗುತ್ತದೆ. ಓರ್ವ ಕಲಾವಿದನಾಗಿ ಈ ಪಾತ್ರವನ್ನು ನಾನು ಹೇಗೆ ಎಂಜಾಯ್​ ಮಾಡುತ್ತಿದ್ದೇನೋ, ಅದೇ ರೀತಿ ವೀಕ್ಷಕರಾಗಿ ಅವರು ಈ ಪಾತ್ರವನ್ನು ನೋಡಿ ಸಂತೋಷ ಪಡಬೇಕು’ ಎಂದು ಅನಿರುದ್ಧ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ‘ಜೊತೆ ಜೊತೆಯಲಿ’ ನಿರ್ದೇಶಕರ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’; ಇದರಲ್ಲಿದೆ ವಿಶೇಷ ಕಥೆ

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​; ಇದನ್ನು ನಾವು ಒಪ್ಪಲ್ಲ ಎಂದ ವೀಕ್ಷಕರು

Published On - 6:10 pm, Thu, 6 January 22

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ