AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ ‘ಯುವರತ್ನ’ ಚಿತ್ರ; ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ವಿವರ

ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಚಿತ್ರ 2021ರ ಏಪ್ರಿಲ್​ 1ರಂದು ಥಿಯೇಟರ್​​​ನಲ್ಲಿ ಬಿಡುಗಡೆ ಆಗಿತ್ತು. ಆಗ ಕೊರೊನಾ 2ನೇ ಅಲೆ ಶುರುವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ.

ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ ‘ಯುವರತ್ನ’ ಚಿತ್ರ; ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ವಿವರ
ಪುನೀತ್​ ರಾಜ್​ಕುಮಾರ್
TV9 Web
| Edited By: |

Updated on: Jan 07, 2022 | 8:38 AM

Share

ಪುನೀತ್​ ರಾಜ್​ಕುಮಾರ್​ (Puneeth Rajkumar) ಇದ್ದಾಗ ಬಿಡುಗಡೆಯಾದ ಅವರ ಕೊನೇ ಸಿನಿಮಾ ‘ಯುವರತ್ನ’. ಕೊರೊನಾ ಹಾವಳಿಯ ಕಾರಣದಿಂದ ಚಿತ್ರಮಂದಿರದಲ್ಲಿ ಆ ಸಿನಿಮಾ ಹೆಚ್ಚು ದಿನ ಪ್ರದರ್ಶನ ಕಾಣಲು ಸಾಧ್ಯವಾಗಿರಲಿಲ್ಲ. ಬಳಿಕ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆ ಆಯಿತು. ಅಲ್ಲಿಯೂ ಸಿನಿಮಾವನ್ನು ಮಿಸ್​ ಮಾಡಿಕೊಂಡವರಿಗೆ ಈಗ ಇನ್ನೊಂದು ಸೂಪರ್​ ಅವಕಾಶ ಸಿಗುತ್ತಿದೆ. ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ‘ಯುವರತ್ನ’ (Yuvarathnaa Movie) ಸಿನಿಮಾವನ್ನು ಪ್ರಸಾರ ಮಾಡಲು ದಿನಾಂಕ ನಿಗದಿ ಆಗಿದೆ. ಉದಯ ಟಿವಿ (Udaya TV) ಪ್ರೇಕ್ಷಕರು ಆ ದಿನಕ್ಕಾಗಿ ಕಾದಿದ್ದಾರೆ. ಜ.15ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಜೆ 6.30ಕ್ಕೆ ‘ಯುವರತ್ನ’ ಚಿತ್ರ ಪ್ರಸಾರ ಆಗಲಿದೆ. ಈ ಚಿತ್ರಕ್ಕೆ ಸಂತೋಷ್​ ಆನಂದ್​ರಾಮ್​ ನಿರ್ದೇಶನ ಮಾಡಿದ್ದು, ಸಾಯೆಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ.

ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ‘ಯುವರತ್ನ’ ಸಿನಿಮಾ ನಿರ್ಮಾಣ ಆಗಿದೆ. 2021ರ ಏಪ್ರಿಲ್​ 1ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆ ಸಂದರ್ಭದಲ್ಲಿ ಕೊರೊನಾ 2ನೇ ಅಲೆಯ ಹಾವಳಿ ಇದ್ದಿದ್ದರಿಂದ ಚಿತ್ರಮಂದಿರದಲ್ಲಿ ಶೇ.50 ಆಸನ ಮಿತಿ ನಿಯಮವನ್ನು ಜಾರಿ ಮಾಡಲಾಯಿತು. ಇದರಿಂದ ಚಿತ್ರದ ಕಲೆಕ್ಷನ್​ಗೆ ಹೊಡೆತಬಿದ್ದಿತ್ತು. ಅಲ್ಲದೇ ಬಹುಪಾಲು ಪ್ರೇಕ್ಷಕರಿಗೆ ಈ ಚಿತ್ರವನ್ನು ನೋಡಲು ಸಾಧ್ಯವಾಗಿರಲಿಲ್ಲ.

ಈಗ ಕಿರುತೆರೆಯಲ್ಲಿ ‘ಯುವರತ್ನ’ ಪ್ರಸಾರ ಆಗಲಿರುವುದರಿಂದ ಅಪ್ಪು ಅಭಿಮಾನಿಗಳು, ಕನ್ನಡ ಸಿನಿಮಾ ಪ್ರಿಯರು ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಸೋಶಿಯಲ್​ ಮೀಡಿಯಾದಲ್ಲಿ ಉದಯ ವಾಹಿನಿ ಈಗಾಗಲೇ ಪ್ರೋಮೋ ಹಂಚಿಕೊಂಡಿದೆ. ಆ ಮೂಲಕ ವೀಕ್ಷಕರ ಮನದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮತ್ತು ಪುನೀತ್​ ರಾಜ್​​ಕುಮಾರ್​ ಅವರು ಎರಡನೇ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ ಸಿನಿಮಾ ಇದು. ಇವರಿಬ್ಬರ ಕಾಂಬಿನೇಷನ್​ ಇಷ್ಟಪಡುವ ಪ್ರೇಕ್ಷಕರಿಗೆ ‘ಯುವರತ್ನ’ ಹೆಚ್ಚು ಮನರಂಜನೆ ನೀಡಲಿದೆ.

ಕೆಲಸ ಮುಂದುವರಿಸಿದ ಜೇಮ್ಸ್​ ಸಿನಿಮಾ:

ಪುನೀತ್​ ರಾಜ್​ಕುಮಾರ್​ ನಿಧನದಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗಿದೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಅವರು ಎಲ್ಲ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಇಹಲೋಕ ತ್ಯಜಿಸಿದರು. ಪುನೀತ್​ ನಟಿಸುತ್ತಿದ್ದ ‘ಜೇಮ್ಸ್​​’ ಸಿನಿಮಾದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಆ ಚಿತ್ರದ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದು ಬೇಸರದ ಸಂಗತಿ. ಚೇತನ್​ ಕುಮಾರ್​ ನಿರ್ದೇಶನದ ಈ ಚಿತ್ರದ ಶೂಟಿಂಗ್​ ಅರ್ಧಕ್ಕೆ ನಿಂತಿತ್ತು. ಈಗ ಪುನೀತ್​ ಇಲ್ಲ ಎಂಬ ನೋವಿನ ನಡುವೆಯೂ ಸಿನಿಮಾದ ಶೂಟಿಂಗ್​ ಪುನಾರಂಭ ಆಗಿದೆ. ಪುನೀತ್​ ನಟಿಸಿದ್ದ ‘ಲಕ್ಕಿ ಮ್ಯಾನ್​’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.

ಇದನ್ನೂ ಓದಿ:

ಪುನೀತ್​ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ; ಮೊದಲ ದಿನವೇ ಅಪ್ಪು ಬಗ್ಗೆ ಮಾತು

ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ