ಡಾನ್ಸಿಂಗ್​ ಚಾಂಪಿಯನ್​ ಶೋನಲ್ಲಿ ಚಿರು-ರಾಯನ್​ ಬಗ್ಗೆ ಮೇಘನಾ ರಾಜ್​ ಸರ್ಜಾ ಹೃದಯಸ್ಪರ್ಶಿ ಮಾತು

ಡಾನ್ಸಿಂಗ್​ ಚಾಂಪಿಯನ್​ ಶೋನಲ್ಲಿ ಚಿರು-ರಾಯನ್​ ಬಗ್ಗೆ ಮೇಘನಾ ರಾಜ್​ ಸರ್ಜಾ ಹೃದಯಸ್ಪರ್ಶಿ ಮಾತು
ಮೇಘನಾ ರಾಜ್, ಚಿರಂಜೀವಿ ಸರ್ಜಾ

‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಜ.8ರಿಂದ ‘ಡಾನ್ಸಿಂಗ್ ಚಾಂಪಿಯನ್​’ ಶೋ ಆರಂಭ ಆಗಲಿದೆ. ಇದರಲ್ಲಿ ಮೇಘನಾ ರಾಜ್​ ಅವರು ಸೆಲೆಬ್ರಿಟಿ ಜಡ್ಜ್​ ಆಗಿ ಭಾಗವಹಿಸಿದ್ದಾರೆ.

TV9kannada Web Team

| Edited By: Madan Kumar

Jan 08, 2022 | 8:33 AM

ನಟ ಚಿರಂಜೀವಿ ಸರ್ಜಾ ( Chiranjeevi Sarja) ನಿಧನರಾದ ಬಳಿಕ ಅವರ ಪತ್ನಿ ಮೇಘನಾ ರಾಜ್​ (Meghana Raj) ಸಂಪೂರ್ಣ ಕುಸಿದು ಹೋಗಿದ್ದರು. ಆ ಸಂದರ್ಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ದಿಕ್ಕೇ ತೋಚದಂತೆ ಆಗಿತ್ತು. ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja) ಜನನದ ಬಳಿಕ ಅವರು ನಿಧಾನಕ್ಕೆ ಚೇತರಿಸಿಕೊಳ್ಳಲು ಆರಂಭಿಸಿದರು. ಈಗ ಅವರು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದ್ದಾರೆ ಎನ್ನಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ‘ಕಲರ್ಸ್​ ಕನ್ನಡ’ (Colors Kannada) ವಾಹಿನಿಯ ಹೊಸ ರಿಯಾಲಿಟಿ ಶೋಗೆ ಮೇಘನಾ ರಾಜ್​ ಜಡ್ಜ್​ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಚಿರು ಬಗ್ಗೆ ಹಾಗೂ ಪುತ್ರ ರಾಯನ್​ ರಾಜ್​ ಸರ್ಜಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಜ.8ರಿಂದ ‘ಡಾನ್ಸಿಂಗ್ ಚಾಂಪಿಯನ್​’ ಶೋ ಆರಂಭ ಆಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಇದರಲ್ಲಿ ಮೇಘನಾ ರಾಜ್​ ಅವರು ಸೆಲೆಬ್ರಿಟಿ ಜಡ್ಜ್​ ಆಗಿ ಭಾಗವಹಿಸಿದ್ದಾರೆ. ವಾಹಿನಿಯ ಬಿಸ್ನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಒಂದು ಪ್ರೋಮೋ ಹಂಚಿಕೊಂಡಿದ್ದು, ಅದರಲ್ಲಿ ಮೇಘನಾ ಮಾತುಗಳ ಝಲಕ್​ ಇದೆ. ಚಿರು ಮತ್ತು ರಾಯನ್​ ಗುಣಗಳ ಬಗ್ಗೆ ಮೇಘನಾ ಮಾತನಾಡಿದ್ದಾರೆ.

‘ರಾಯನ್​, ಸೇಮ್​ ಅವರ ಅಪ್ಪನ ರೀತಿಯೇ ತರಲೆ. ಅಮ್ಮ ಅನ್ನು ಅಮ್ಮ ಅನ್ನು ಅಂತ ಹೇಳಿದ್ರೆ ಅವನು ವಾಪಸ್​ ತಿರುಗಿ ಅಪ್ಪ ಎನ್ನುತ್ತಾನೆ. ಇಂದು ಚಿರು ಬಗ್ಗೆ ಯೋಚಿಸಿದರೆ ಯಾವಾಗಲೂ ಒಂದು ನಗು ಇರುತ್ತದೆ. ಅವರು ಯಾವಾಗಲೂ ಖುಷಿಯಾಗಿ ಇರುತ್ತಿದ್ದರು, ಖುಷಿ ಹಂಚುತ್ತಿದ್ದರು. ಅದನ್ನೇ ಎಲ್ಲರೂ ನೆನಪಿಸಿಕೊಳ್ಳುತ್ತಾರೆ’ ಎಂದಿದ್ದಾರೆ ಮೇಘನಾ.

‘ಜೀವನದಲ್ಲಿ ಚಿರು ನನಗೆ ಹೇಳಿಕೊಟ್ಟಿದ್ದು ಒಂದೇ. ಮುಂದೆ ಏನಾಗತ್ತೋ ಆಗಲಿ, ಹಿಂದೆ ಏನಾಗಿದೆ ಎಂಬುದು ನಮಗೆ ಬೇಕಾಗಿಲ್ಲ. ಇವತ್ತು ನಾವು ಇಲ್ಲಿ ಇರುವುದು ಮುಖ್ಯ. ನಾನು ಈ ಕ್ಷಣವನ್ನು ಎಂಜಾಯ್​ ಮಾಡಬೇಕು. ಚಿರು ಕೂಡ ಇದನ್ನೇ ಮಾಡುತ್ತಿದ್ದರು’ ಎಂದು ಹೃದಯಸ್ಪರ್ಶಿಯಾಗಿ ಮೇಘನಾ ಮಾತನಾಡಿದ್ದಾರೆ.

ಈ ಎಲ್ಲ ಕಾರಣದಿಂದ ‘ಡಾನ್ಸಿಂಗ್​ ಚಾಂಪಿಯನ್’ ಕಾರ್ಯಕ್ರಮದ ಮೇಲೆ ನಿರೀಕ್ಷೆ ಮೂಡಿದೆ. ಮೇಘನಾ ಅವರು ಗಟ್ಟಿ ಮಹಿಳೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ನೋವನ್ನು ಮರೆಯಲು ಅವರಿಗೆ ಇದು ಸೂಕ್ತ ವೇದಿಕೆ ಎಂದು ಸಹ ಕೆಲವರು ಹೇಳುತ್ತಿದ್ದಾರೆ. ಈ ಶೋ ಬಗ್ಗೆ ಮೇಘನಾ ಕೂಡ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಕ್ರಿಸ್​ಮಸ್​ ಆಚರಿಸಿದ ಚಿರು ಪುತ್ರ ರಾಯನ್​; ಮೇಘನಾ ರಾಜ್​ ಹಂಚಿಕೊಂಡ ಫೋಟೋಗಳು ಇಲ್ಲಿವೆ

ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್​ ಆದ ಮೇಘನಾ ರಾಜ್ ಸರ್ಜಾ​; ಯಾವುದು ಆ ಚಿತ್ರ?

Follow us on

Related Stories

Most Read Stories

Click on your DTH Provider to Add TV9 Kannada