ಅಕ್ಕಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಮತ್ತು ಬೇರೆ ಬೇರೆ ಕ್ಷೇತ್ರದ ಗಣ್ಯರ ಜೊತೆಗೆ ಪುನೀತ್ ರಾಜ್ಕುಮಾರ್ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ತಮಿಳುನಾಡಿನ ವಿಧಾನಸಭೆ ಅಧಿವೇಷನ ಬುಧವಾರ (ಜ.5) ಆರಂಭ ಆಯಿತು. ಇತ್ತೀಚೆಗೆ ಅಗಲಿದ ಗಣ್ಯರಿಗೆ ಅಧಿವೇಷದಲ್ಲಿ ಗೌರವ ಸಲ್ಲಿಸಲಾಯಿತು. ಅಧಿವೇಷನದ ಮೊದಲ ದಿನವೇ ಪುನೀತ್ ಬಗ್ಗೆ ಮಾತನಾಡಲಾಗಿದ್ದು, ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಪತ್ರ ಬರೆದಿದ್ದ ಸ್ಟಾಲಿನ್:
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶಿವರಾಜ್ಕುಮಾರ್ಗೆ ಸಂತಾಪ ಪತ್ರ ಬರೆದಿದ್ದರು. ‘ಸಹೋದರ ಪುನೀತ್ ಅವರ ದಿಢೀರ್ ಸಾವು ನನಗೆ ಭರಿಸಲಾಗದ ನೋವುಂಟು ಮಾಡಿದೆ. ಸಂತಾಪ ಸೂಚಿಸಲು ನನಗೆ ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿವೆ. ನನಗೆ ಪುನೀತ್ ಅಗಲಿಕೆ ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡಿದೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.
‘ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್ ಅವರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯಬಿಟ್ಟು ನನ್ನ ಸಂತಾಪವನ್ನು ನಿಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ. ಕರ್ನಾಟಕವು ಅಮೂಲ್ಯವಾದ ರತ್ನವನ್ನು, ಮಾನವತಾವಾದಿಯನ್ನು ಕಳೆದುಕೊಂಡಿದೆ. ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ದಿ. ರಾಜ್ಕುಮಾರ್ ಹಿರಿಯ ಮಗನಾದ ನೀವು ಈ ಕಹಿ ಗಳಿಗೆಯಲ್ಲಿ ಆತ್ಮಸ್ಥರ್ಯ ತುಂಬಿಕೊಂಡು ಕುಟುಂಬಸ್ಥರೊಂದಿಗೆ ನಿಲ್ಲುತ್ತೀರಿ ಅಂತ ಭಾವಿಸುತ್ತೇನೆ’ ಎಂದು ಎಂ.ಕೆ. ಸ್ಟಾಲಿನ್ ಪತ್ರ ಬರೆದಿದ್ದರು.
ಡಿ.13ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲೂ ಪುನೀತ್ ರಾಜ್ಕುಮಾರ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದರು. ಅಪ್ಪು ನಿಧನರಾದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದರು. ‘ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಜನರ ಹೃದಯದಲ್ಲಿ ಸ್ಥಾನ ಗಳಿಸಬಲ್ಲ ಎಂಬುದು ಪುನೀತ್ ರಾಜ್ಕುಮಾರ್ ಅವರ ನಿಧನದ ಬಳಿಕ ತಿಳಿಯಿತು. ಅವರು ಕೇವಲ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿ ಆಗಿರಲಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.
ಇದನ್ನೂ ಓದಿ:
‘ಪುನೀತ್ ಇಲ್ಲದೇ ‘ಜೇಮ್ಸ್’ ಶೂಟಿಂಗ್ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್ ಭಾವುಕ ನುಡಿ
ಪುನೀತ್ ರಾಜ್ಕುಮಾರ್ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ