‘ತುಂಬ ಕಷ್ಟ ಆಗುತ್ತಿದೆ. ಅಪ್ಪು ಇಲ್ಲದೇ ಶೂಟಿಂಗ್ ಮಾಡುವಾಗ ಬಹಳ ನೆನಪುಗಳು ಕಾಡುತ್ತವೆ. ಕೊನೆ ಬಾರಿ ಶೂಟಿಂಗ್ ಮಾಡಿದಾಗ ರಾತ್ರಿಯೆಲ್ಲ ಜೊತೆಯಾಗಿ ಕಳೆದಿದ್ದೆವು. ಅವರು ದಿಢೀರ್ ಅಂತ ಹೀಗೆ ಹೋಗಿಬಿಡುತ್ತಾರೆ ಎಂದು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ತುಂಬ ಬೇಜಾರಾಗುತ್ತದೆ. ಆದರೂ ಕೆಲಸ ಮುಗಿಸಲೇಬೇಕು. ಅದಕ್ಕಾಗಿ ಶೂಟಿಂಗ್ ಮಾಡುತ್ತಿದ್ದೇವೆ’ ಎಂದಿದ್ದಾರೆ ಅವಿನಾಶ್.
‘ಜೇಮ್ಸ್’ ಸಿನಿಮಾದಲ್ಲಿ ತಮ್ಮ ಪಾಲಿನ ಬಹುತೇಕ ದೃಶ್ಯಗಳ ಚಿತ್ರೀಕರಣವನ್ನು ಪುನೀತ್ ಮುಗಿಸಿದ್ದರು. ಈಗ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ಯಾರು ಎಂಬ ಕೌತುಕ ಕೂಡ ಇದೆ. ಸಹೋದರನ ಪಾತ್ರಕ್ಕೆ ಧ್ವನಿ ನೀಡಲು ತಾವು ರೆಡಿ ಎಂದು ಶಿವರಾಜ್ಕುಮಾರ್ ಈ ಹಿಂದೆಯೇ ಹೇಳಿದ್ದರು. ಆ ಕಾರಣದಿಂದಲೂ ‘ಜೇಮ್ಸ್’ ಚಿತ್ರದ ಮೇಲೆ ನಿರೀಕ್ಷೆ ಇದೆ.
ಅವಿನಾಶ್ ಬಗ್ಗೆ ಹರಡಿತ್ತು ವದಂತಿ:
ಯಾರೋ ಕಿಡಿಗೇಡಿಗಳು ಅವಿನಾಶ್ ಇನ್ನಿಲ್ಲ ಎಂಬ ಸುದ್ದಿ ಹರಡಿಸಿದ್ದರು. ಇದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ನಟ ಅವಿನಾಶ್ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಅವಿನಾಶ್ ಸುಳ್ಳು ಸುದ್ದಿಯ ಕುರಿತು ಪ್ರತಿಕ್ರಿಯಿಸಿದ್ದು, ‘ಆರಾಮವಾಗಿದ್ದೇನೆ. ಬೆಳಗ್ಗೆ ವರ್ಕೌಟ್ ಮಾಡಿದ್ದೇನೆ’ ಎಂದಿದ್ದಾರೆ. ಅಲ್ಲದೇ ಇಂತಹ ಸುದ್ದಿ ಹರಿದಾಡಿದ್ದರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ
ಪುನೀತ್ಗೆ ದೇವರ ಸ್ಥಾನ ನೀಡಿದ ಫ್ಯಾನ್ಸ್; ಅಪ್ಪು ಮೇಲಿನ ಅಪಾರ ಅಭಿಮಾನಕ್ಕೆ ಇನ್ನೊಂದು ಸಾಕ್ಷಿ