AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಶ್​ ಬರ್ತ್​ಡೇ ಮಾಡಲು ರಜೆ ಕೊಡಿ’; ಪತ್ರ ಬರೆದು ಪ್ರಾಂಶುಪಾಲರಿಗೆ ಮನವಿ ಮಾಡಿದ ವಿದ್ಯಾರ್ಥಿ

‘ನಾನು ಯಶ್​ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಪ್ರಾಂಶುಪಾಲರಿಗೆ ನಾನು ಲೆಟರ್​ ಬರೆದಿದ್ದೆ. ಅವರು ರಜೆ ಕೊಟ್ಟರೆ ಮನೆಯಲ್ಲೇ ಯಶ್​ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ’ ಎಂದು ಬಿ.ಕಾಂ 3ನೇ ಸೆಮ್​ ವಿದ್ಯಾರ್ಥಿ ಶಿವಕುಮಾರ್​ ಹೇಳಿದ್ದಾನೆ.

‘ಯಶ್​ ಬರ್ತ್​ಡೇ ಮಾಡಲು ರಜೆ ಕೊಡಿ’; ಪತ್ರ ಬರೆದು ಪ್ರಾಂಶುಪಾಲರಿಗೆ ಮನವಿ ಮಾಡಿದ ವಿದ್ಯಾರ್ಥಿ
ಯಶ್​ ಜನ್ಮದಿನಕ್ಕೆ ರಜೆ ಕೋರಿ ಅಭಿಮಾನಿ ಬರೆದ ಪತ್ರ ವೈರಲ್​
TV9 Web
| Edited By: |

Updated on: Jan 06, 2022 | 12:53 PM

Share

ನಟ ಯಶ್​ (Yash) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಚಿತ್ರದ ಬಿಡುಗಡೆಗಾಗಿ ಎಲ್ಲರೂ ಕಾದಿದ್ದಾರೆ. ಕೊವಿಡ್​ ಕಾರಣದಿಂದ ಅಭಿಮಾನಿಗಳ ಜೊತೆ ಬೆರೆಯಲು ಯಶ್​ಗೆ ಸಾಧ್ಯವಾಗುತ್ತಿಲ್ಲ. ಕಳೆದೆರಡು ವರ್ಷದಿಂದ ಅವರು ಬರ್ತ್​ಡೇ  (Yash Birthday) ಆಚರಿಸಿಕೊಂಡಿಲ್ಲ. ಈ ವರ್ಷ ಕೂಡ ಯಶ್​ ಹುಟ್ಟುಹಬ್ಬವನ್ನು (ಜ.8) ಅಭಿಮಾನಿಗಳ ಜತೆ ಸೇರಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ‘ರಾಕಿಂಗ್​ ಸ್ಟಾರ್​’ ಜನ್ಮದಿನದ ಬಗ್ಗೆ ಫ್ಯಾನ್ಸ್​ ತುಂಬ ಎಗ್ಸೈಟ್​ ಆಗಿದ್ದಾರೆ. ಎಷ್ಟರಮಟ್ಟಿಗೆಂದರೆ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ರಜೆ ಬೇಕು ಎಂದು ಬಳ್ಳಾರಿಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಆ ಲೆಟರ್​ ಈಗ ವೈರಲ್​ ಆಗಿದೆ.

ಬಿ.ಕಾಂ ಮೂರನೇ ಸೆಮ್​ನಲ್ಲಿ ಓದುತ್ತಿರುವ ಕೆ. ಶಿವಕುಮಾರ್​ ಎಂಬ ವಿದ್ಯಾರ್ಥಿ ಈ ರೀತಿ ಪತ್ರ ಬರೆದಿದ್ದಾನೆ. ‘ಯಶ್​ ಬಾಸ್​ ಹುಟ್ಟುಹಬ್ಬದ ಪ್ರಯುಕ್ತ ಜ.7ರಂದು ಟ್ವಿಟರ್​ನಲ್ಲಿ ಎಲ್ಲ ಅಭಿಮಾನಿಗಳು 24 ಗಂಟೆಗಳ ಟ್ರೆಂಡ್​ನಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕೂಡ ಭಾಗವಹಿಸಿ ಯಶ್​ ಅಣ್ಣನ ಜನ್ಮದಿನದ ಶುಭಾಶಯಗಳನ್ನು ತಿಳಿಸಬೇಕೆಂದು ನಿರ್ಧಾರ ಮಾಡಾಗಿದೆ. ಆದ ಕಾರಣ ನನಗೆ ಇದೇ ಜ.7ರಂದು ರಜಾ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಆತ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ.

‘ನನ್ನ ಇತರೆ ಸ್ನೇಹಿತರಿಗೂ ರಜೆ ಕೊಡಿ. ಅವರು ಕೂಡ ಯಶ್​ ಬಾಸ್​ಗೆ ವಿಶ್​ ಮಾಡಲಿದ್ದಾರೆ. ಜ.7ರ ಸಂಜೆ 7 ಗಂಟೆಯಿಂದ ಜ.8ರ ಸಂಜೆ 7 ಗಂಟೆವರೆಗೆ ನಿರಂತರ ಹುಟ್ಟುಹಬ್ಬದ ವಿಶ್​ ಮಾಡ್ತಾಯಿರಿ’ ಎಂದು ಯಶ್​ ಅಭಿಮಾನಿ ಬರೆದ ಪತ್ರ ಈಗ ವೈರಲ್​ ಆಗಿದೆ.

‘ನಾನು ಯಶ್​ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಪ್ರಾಂಶುಪಾಲರಿಗೆ ನಾನು ಲೆಟರ್​ ಬರೆದಿದ್ದೆ. ಅವರು ರಜೆ ಕೊಟ್ಟರೆ ಮನೆಯಲ್ಲೇ ಯಶ್​ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ. ನನ್ನ ಸ್ನೇಹಿತರೆಲ್ಲ ಇದನ್ನು ತಮಾಷೆ ಎಂದುಕೊಂಡಿದ್ರು. ಇದು ಇಷ್ಟು ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಯಶ್​ ಅವರ ಎಲ್ಲ ಸಿನಿಮಾವನ್ನು ನಾನು ನೋಡಿದ್ದೇನೆ. ಗೂಗ್ಲಿ ಸಿನಿಮಾದಿಂದ ಅವರಿಗೆ ಫ್ಯಾನ್​ ಆಗಿದ್ದೇನೆ. ಪ್ರತಿ ದಿನ ನಾನು ವಾಟ್ಸಪ್​ ಸ್ಟೇಟಸ್​ ಹಾಕುತ್ತೇನೆ. ಅವರು ನನ್ನ ಆರಾಧ್ಯ ದೈವ. ನಮ್ಮ ತಾಯಿಯನ್ನು ಬಿಟ್ಟರೆ ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಯಶ್​ ಅವರನ್ನು. ನನ್ನ ರಕ್ತದ ಕಣ ಕಣದಲ್ಲೂ ಯಶ್​ ಬಾಸ್​ ಹೆಸರು ಕೂಗಿ ಹೇಳುತ್ತೇನೆ’ ಎಂದು ಶಿವಕುಮಾರ್​ ಹೇಳಿರುವ ವಿಡಿಯೋ ಇಲ್ಲಿದೆ..

ಇದನ್ನೂ ಓದಿ:

ಯಶ್​ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು

‘ಕೆಜಿಎಫ್​ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ​ ಸಿನಿಮಾ; ಗೆಲ್ಲೋದು ಯಶ್​ ಎಂದ ಫ್ಯಾನ್ಸ್​

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?