AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ​ ಸಿನಿಮಾ; ಗೆಲ್ಲೋದು ಯಶ್​ ಎಂದ ಫ್ಯಾನ್ಸ್​

ಸ್ಟಾರ್​ ನಟರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದರ ಎದುರು ಒಂದಷ್ಟು ಚಿತ್ರಗಳು ರಿಲೀಸ್​ಗೆ ಸಿದ್ಧವಾಗುತ್ತದೆ. ಈಗ ‘ಕೆಜಿಎಫ್​ 2’ ಎದುರು ದೊಡ್ಡದೊಡ್ಡ ಚಿತ್ರಗಳು ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿವೆ.

‘ಕೆಜಿಎಫ್​ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ​ ಸಿನಿಮಾ; ಗೆಲ್ಲೋದು ಯಶ್​ ಎಂದ ಫ್ಯಾನ್ಸ್​
ಕೆಜಿಎಫ್​-ವಿಜಯ್​
TV9 Web
| Edited By: |

Updated on: Jan 01, 2022 | 9:12 AM

Share

ಯಶ್​ ನಟನೆಯ ‘ಕೆಜಿಎಫ್​ 2’ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ‘ಕೆಜಿಎಫ್​’ ಸಿನಿಮಾ ತೆರೆಗೆ ಬಂದ ನಂತರ ‘ಕೆಜಿಎಫ್​ 2’ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿತ್ತು. ಈಗ ಟೀಸರ್​ ಹಾಗೂ ಪೋಸ್ಟರ್​ ಮೂಲಕ ಸಿನಿಮಾದ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇತ್ತೀಚೆಗೆ ‘ಕೆಜಿಎಫ್​ 2’ ಎದುರು ಸ್ಪರ್ಧಿಸುವುದಾಗಿ ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತಂಡ ಘೋಷಣೆ ಮಾಡಿತ್ತು. ಈಗ ಮತ್ತೊಂದು ಚಿತ್ರ ‘ಕೆಜಿಎಫ್​ 2’ ಜತೆ ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿದೆ.

ಸ್ಟಾರ್​ ನಟರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದರ ಎದುರು ಒಂದಷ್ಟು ಚಿತ್ರಗಳು ರಿಲೀಸ್​ಗೆ ಸಿದ್ಧವಾಗುತ್ತದೆ. ಈಗ ‘ಕೆಜಿಎಫ್​ 2’ ಎದುರು ದೊಡ್ಡದೊಡ್ಡ ಚಿತ್ರಗಳು ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿವೆ. ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್​’ ಸಿನಿಮಾ ತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿದೆ. ಈ ಪೋಸ್ಟರ್​ನಲ್ಲಿ ಏಪ್ರಿಲ್​ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಘೋಷಣೆ ಮಾಡಿದೆ. ಅದು ‘ಕೆಜಿಎಫ್​ 2’ ಎದುರೇ ಆಗಿರಲಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

‘ಕೆಜಿಎಫ್​ 2’ ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್​ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್​ನಿಂದ ‘ಬೀಸ್ಟ್​’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಈ ಮೊದಲು ಶಾರುಖ್​ ಖಾನ್​ ನಟನೆಯ ‘ಜೀರೋ’ ಚಿತ್ರ ‘ಕೆಜಿಎಫ್​’ ಎದುರು ಬಿಡುಗಡೆ ಆಗಿತ್ತು. ಯಶ್​ ಸಿನಿಮಾ ಅಬ್ಬರದ ಎದುರು ಶಾರುಖ್​ ಚಿತ್ರ ಮಕಾಡೆ ಮಲಗಿತ್ತು. ಈಗ ‘ಕೆಜಿಎಫ್​ 2’ ಜತೆ ಸ್ಪರ್ಧಿಸೋ ಸಿನಿಮಾಗಳಿಗೂ ಹೀಗೆಯೇ ಆಗಲಿದೆ ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ.

ಇದನ್ನೂ ಓದಿ: Yash: ಯಶ್- ನರ್ತನ್ ಕಾಂಬಿನೇಷನ್​ನಲ್ಲಿ ಚಿತ್ರ ಬರೋದು ಯಾವಾಗ? ರಾಕಿಂಗ್ ಸ್ಟಾರ್ ಉತ್ತರಿಸಿದ್ದು ಹೀಗೆ

2022ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಚಿತ್ರ ‘ಕೆಜಿಎಫ್​ 2’ 

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!