Yash: ಯಶ್- ನರ್ತನ್ ಕಾಂಬಿನೇಷನ್​ನಲ್ಲಿ ಚಿತ್ರ ಬರೋದು ಯಾವಾಗ? ರಾಕಿಂಗ್ ಸ್ಟಾರ್ ಉತ್ತರಿಸಿದ್ದು ಹೀಗೆ

Narthan: ನಟ ಯಶ್ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಷನ್​ನಲ್ಲಿ ಚಿತ್ರ ಯಾವಾಗ ಎಂಬುದು ಬಹಳಷ್ಟು ಅಭಿಮಾನಿಗಳ ಪ್ರಶ್ನೆ. ಈ ಕುರಿತು ಯಶ್ ಪ್ರತಿಕ್ರಿಯಿಸಿದ್ದಾರೆ.

TV9kannada Web Team

| Edited By: shivaprasad.hs

Dec 25, 2021 | 4:46 PM

ಇತ್ತೀಚೆಗೆ ನಟ ಯಶ್ (Yash) ಅವರು ತಮ್ಮ ಸ್ನೇಹಿತ ಪಾನಿಪುರಿ ಕಿಟ್ಟಿ ಅವರ ಹೊಸ ಪ್ರಯತ್ನಕ್ಕೆ ಶುಭಕೋರಿದ್ದರು. ಯಶ್ ಸೇರಿದಂತೆ ಖ್ಯಾತ ತಾರೆಯರ ಜಿಮ್‌ ಟ್ರೈನರ್ ಆಗಿದ್ದ ಪಾನಿಪುರಿ ಕಿಟ್ಟಿ ಅವರ ಮಹಾಲಕ್ಷ್ಮಿ ಲೇಔಟ್​ನ ಹೋಟೆಲ್ ‘ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್’ಗೆ ಭೇಟಿ ನೀಡಿ ಯಶ್ ಶುಭಕೋರಿದ್ದರು. ಈ ವೇಳೆ ಅವರು ಮಾಧ್ಯಮದವರೊಂದಿಗೆ ಹಲವು ವಿಚಾರಗಳನ್ನು ಮಾತನಾಡಿದರು.

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್​ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್ 2’ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಯಶ್ ಈ ಚಿತ್ರದ ನಂತರ ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ‘ಮಫ್ತಿ’ ಖ್ಯಾತಿಯ ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ. ಆದರೆ ಈ ಕುರಿತು ಯಾವ ಮಾಹಿತಿಯೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಕುರಿತು ಪ್ರಶ್ನಿಸಿದಾಗ ಯಶ್ ಉತ್ತರಿಸಿದ್ದು ಹೀಗೆ.

‘‘ಚಿತ್ರಗಳನ್ನು ದೊಡ್ಡದಾಗಿ ಪ್ಲಾನ್ ಮಾಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಆ ಕುರಿತು ಮಾತನಾಡುವುದು ಒಳ್ಳೆಯದು. ಈಗ ಅದರ ಬಗ್ಗೆ ಮಾತನಾಡುವುದು ಸರಿಯಾಗುವುದಿಲ್ಲ. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಂಡರು ಎಂದಾಗುವುದು ಬೇಡ. ಅದನ್ನೆಲ್ಲಾ ದೊಡ್ಡ ಮಟ್ಟದಲ್ಲಿಯೇ ಕಾರ್ಯಕ್ರಮ ಮಾಡಿ ಹೇಳೋಣ’’ ಎಂದು ನಗುತ್ತಾ ನುಡಿದಿದ್ದಾರೆ ಯಶ್.

ಇದೇ ವೇಳೆ ಯಶ್ ಕರ್ನಾಟಕ ಬಂದ್ ಕುರಿತಂತೆಯೂ ಯಶ್ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ:

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ

ರಮೋಲಾ ‘ಕನ್ನಡತಿ’ ಧಾರಾವಾಹಿ ತೊರೆದಿದ್ದೇಕೆ? ಸಾನಿಯಾ ಪಾತ್ರ ಮಾಡೋರು ಯಾರು? ಇಲ್ಲಿದೆ ಉತ್ತರ

Follow us on

Click on your DTH Provider to Add TV9 Kannada