ದೇವನಗೊಂದಿ ಗ್ರಾಮದ ಮಹಿಳೆ ಜಿಲ್ಲಾಧಿಕಾರಿಯ ಕಾರನ್ನು ನಡು ರಸ್ತೆಯಲ್ಲೇ ತಡೆದರು! ಯಾಕೆ?
ಹೊಸಕೋಟೆ ತಾಲೂಕಿನ ದೇವನಗೊಂದಿ ಬಳಿ ಡಿಸಿ ಕಾರು ನಿಲ್ಲಿಸಿದ ಮಹಿಳೆ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಇಂಧನ ಪೂರೈಸುವ ಘಟಕವಿರುವ ದೇವನಗೊಂದಿ ಗ್ರಾಮದಲ್ಲಿ ಪ್ರತಿದಿನ ಸಾವಿರಾರು ಪೆಟ್ರೋಲ್, ಡೀಸೆಲ್, ಗ್ಯಾಸ್ ತುಂಬಿದ ಲಾರಿಗಳು ಒಡಾಡುತ್ತವೆ. ಇದರಿಂದಾಗಿ ರಸ್ತೆ ಹಾಳಾಗುತ್ತಿದೆ ಎಂದು ಡಿಸಿಗೆ ತಿಳಿಸಿದ್ದಾರೆ.
ಬೆಂಗಳೂರು: ಗುಂಡಿಗಳಿರುವ ರಸ್ತೆಯಿಂದಾಗ ಭಾರೀ ಧೂಳು ಎದ್ದು ಸಮಸ್ಯೆಯಾಗುತ್ತಿದ್ದು, ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ದೇವನಗೊಂದಿ ಗ್ರಾಮಸ್ಥರು ಹೈರಾಣಾಗಿದ್ದಾರೆ. ಈ ಸಮಸ್ಯೆಯಿಂದ ಬೇಸತ್ತ ಮಹಿಳೆಯೊಬ್ಬರು ಇಂದು (ಡಿಸೆಂಬರ್ 25) ರಸ್ತೆ ಮಧ್ಯೆ ಡಿಸಿ ಕಾರು (DC Car) ನಿಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ. ಡಿಸಿ ಕಾರು ತಡೆದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ ಮಹಿಳೆ(Woman), ಹಾಳಾದ ರಸ್ತೆ ದುರಸ್ತಿ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಹೊಸಕೋಟೆ ತಾಲೂಕಿನ ದೇವನಗೊಂದಿ ಬಳಿ ಡಿಸಿ ಕಾರು ನಿಲ್ಲಿಸಿದ ಮಹಿಳೆ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಇಂಧನ ಪೂರೈಸುವ ಘಟಕವಿರುವ ದೇವನಗೊಂದಿ ಗ್ರಾಮದಲ್ಲಿ ಪ್ರತಿದಿನ ಸಾವಿರಾರು ಪೆಟ್ರೋಲ್, ಡೀಸೆಲ್, ಗ್ಯಾಸ್ ತುಂಬಿದ ಲಾರಿಗಳು ಒಡಾಡುತ್ತವೆ. ಇದರಿಂದಾಗಿ ರಸ್ತೆ ಹಾಳಾಗುತ್ತಿದೆ ಎಂದು ಡಿಸಿಗೆ ತಿಳಿಸಿದ್ದಾರೆ.
ರಸ್ತೆಯಿಂದ ಬರುತ್ತಿರುವ ಧೂಳಿನಿಂದಾಗಿ ಪ್ರತಿನಿತ್ಯ ಸ್ಥಳಿಯ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಹಾಳಾಗಿ ತಿಂಗಳುಗಳೇ ಕಳೆದರೂ ದುರಸ್ತಿ ಮಾಡುತ್ತಿಲ್ಲ ಎಂದು ದೇವನಗುಂದಿ ಮೂಲಕ ಹೋಗುತ್ತಿದ್ದ ಡಿಸಿ ಕಾರು ನೋಡಿ ನಿಲ್ಲಿಸಿ ಮಹಿಳೆ ದೂರು ಸಲ್ಲಿಸಿದ್ದಾರೆ. ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ಡಿಸಿ ಶ್ರೀನಿವಾಸ್ ಅಲ್ಲಿಂದ ಹೊರಟಿದ್ದಾರೆ.
ಇದನ್ನೂ ಓದಿ:
ಬೆಂಗಳೂರು: ಪ್ಯಾಲೇಸ್ ರಸ್ತೆಗೆ ಇಳಿಯುವ ಮುನ್ನ ಎಚ್ಚರ: ದಿಢೀರ್ ಎಂದು ವರ್ಕ್ ಇನ್ ಪ್ರೋಸೆಸ್ ಬೋರ್ಡ್ ಪ್ರತ್ಯಕ್ಷ
ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ್ದಕ್ಕೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟಿಲ್