ಹುಟ್ಟೂರಿಗೆ ಬಂದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್​ವಿ ರಮಣ ಅವರಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

ಹುಟ್ಟೂರಿಗೆ ಬಂದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್​ವಿ ರಮಣ ಅವರಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

TV9 Web
| Updated By: preethi shettigar

Updated on:Dec 25, 2021 | 1:10 PM

ಸಿಜೆಐ ಎನ್.ವಿ.ರಮಣ ಸುಮಾರು 4 ತಾಸುಗಳ ಕಾಲ ತಮ್ಮ ಹುಟ್ಟೂರಲ್ಲಿ ಕಾಲ ಕಳೆದು ನಂತರ ವಿಜಯವಾಡಕ್ಕೆ ತೆರಳಿದ್ದಾರೆ. ಇಂದು (ಡಿಸೆಂಬರ್​ 25) ಬೆಳಗ್ಗೆ ವಿಜಯವಾಡದ ಕನಕದುರ್ಗಾ ದೇವಾಲಯಕ್ಕೆ ಅವರು ಭೇಟಿ ನೀಡಲಿದ್ದಾರೆ. ಹಾಗೇ, ಇಂದು ಸಂಜೆ ರಾಜ್ಯ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.  

ಬಹಳ ದಿನಗಳ ನಂತರ ತಮ್ಮನೀಡಿದ್ದಾರೆ. ಏಪ್ರಿಲ್​ ತಿಂಗಳಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ  ಹುದ್ದೆಗೆ ಏರಿದ ಬಳಿಕ ಎನ್​.ವಿ.ರಮಣ ನಿನ್ನೆ ಮೊದಲ ಬಾರಿಗೆ ತಮ್ಮ ಹುಟ್ಟೂರಾದ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿರುವ ಪೊನ್ನಾವರಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಭೇಟಿ ನೀಡಿದ ಸಿಜೆಐ ಎನ್​.ವಿ.ರಮಣ ಅವರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಹೊರವಲಯದಿಂದ ಗ್ರಾಮದೊಳಗೆ ಹೋಗಲು ಅವರು ಎತ್ತಿನಗಾಡಿಯನ್ನು ಬಳಸಿದ್ದು ವಿಶೇಷ.  ಗ್ರಾಮದ ಹೊರವಲಯಕ್ಕೆ ಸಿಜೆಐ ದಂಪತಿ ತಲುಪುತ್ತಿದ್ದಂತೆ ಅಲ್ಲಿ, ಗ್ರಾಮಸ್ಥರು ಮತ್ತು ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ಅವರನ್ನು ಸ್ವಾಗತಿಸಿದರು. ಬಳಿಕ ಸಿಜೆಐ ಮತ್ತು ಅವರ ಪತ್ನಿ ಸ್ಥಳೀಯ ದೇಗುಲವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹೂವುಗಳಿಂದ ಶೃಂಗರಿಸಲಾದ ಎತ್ತಿನಗಾಡಿಯಲ್ಲಿ ಅವರನ್ನು ಹಳ್ಳಿಯೊಳಕ್ಕೆ ಕರೆದೊಯ್ಯಲಾಯಿತು. ಅದರ ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ. 

ಸಿಜೆಐ ಎನ್.ವಿ.ರಮಣ ಸುಮಾರು 4 ತಾಸುಗಳ ಕಾಲ ತಮ್ಮ ಹುಟ್ಟೂರಲ್ಲಿ ಕಾಲ ಕಳೆದು ನಂತರ ವಿಜಯವಾಡಕ್ಕೆ ತೆರಳಿದ್ದಾರೆ. ಇಂದು (ಡಿಸೆಂಬರ್​ 25) ಬೆಳಗ್ಗೆ ವಿಜಯವಾಡದ ಕನಕದುರ್ಗಾ ದೇವಾಲಯಕ್ಕೆ ಅವರು ಭೇಟಿ ನೀಡಲಿದ್ದಾರೆ. ಹಾಗೇ, ಇಂದು ಸಂಜೆ ರಾಜ್ಯ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ:
ನಂದಿಗಿರಿಧಾಮದಲ್ಲಿ ಕ್ರಿಸ್​ಮಸ್​ ಆಚರಣೆಗೆ ಬ್ರೇಕ್​; ವೀಕೆಂಡ್​ನಲ್ಲಿ ಗಿರಿಧಾಮ ಬಂದ್ ಮಾಡಿದ ಹಿನ್ನಲೆ ಪ್ರವಾಸಿಗರ ಪರದಾಟ

Viral Video: ಕಿಟ್​ಕ್ಯಾಟ್​ ಚಾಕೋಲೇಟ್​ನಿಂದ ಟೊಮ್ಯಾಟೋ ಕಟ್​ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!

Published on: Dec 25, 2021 01:05 PM