‘ಜನಸಾಮಾನ್ಯರಿಗೆ ತೊಂದರೆ ಆಗುವಂತೆ ಬಂದ್ ಮಾಡಬಾರದು’: ನಟ ಯಶ್
Yash: ಡಿ.31ರಂದು ಕರ್ನಾಟಕ ಬಂದ್ ಮಾಡುವ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ. ಈ ಕುರಿತು ನಟ ಯಶ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ (MES) ಪುಂಡಾಟಿಕೆ ವಿರೋಧಿಸಿ ಡಿ.31ರಂದು ಕರ್ನಾಟಕ ಬಂದ್ (Karnataka Bandh) ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 31ರಂದು ಶುಕ್ರವಾರ ಆಗಿರುವುದರಿಂದ ಅನೇಕ ಸಿನಿಮಾಗಳು ತೆರೆಕಾಣುತ್ತವೆ. ಆ ದಿನ ಬಂದ್ ಮಾಡಿದರೆ ಚಿತ್ರೋದ್ಯಮಕ್ಕೆ ತುಂಬ ನಷ್ಟ ಆಗುತ್ತದೆ ಎಂಬ ಮಾತನ್ನು ಹಲವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಟ ಯಶ್ (Yash) ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಬಂದ್ ಬಗ್ಗೆ ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ ಮಾಡಲಿ. ಜನ ಸಾಮಾನ್ಯರಿಗೆ ತೊಂದರೆ ಆಗುವಂತೆ, ನಮಗೆ ನಾವು ನಷ್ಟ ಮಾಡಿಕೊಂಡು ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ನಂಬಿಕೆ. ನಾನು ಏನೇ ಮಾತನಾಡಿದರೂ ಅದು ಬೇರೆ ರೀತಿಯಲ್ಲಿ ಅರ್ಥೈಸಲ್ಪಡಬಹುದು. ಎಲ್ಲರ ಅಭಿಪ್ರಾಯ ಬೇರೆ ಬೇರೆ ರೀತಿ ಇರುತ್ತದೆ’ ಎಂದು ಯಶ್ ಹೇಳಿದ್ದಾರೆ. ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಯಶ್ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ:
‘ಬರ್ತ್ಡೇಗೆ ‘ಕೆಜಿಎಫ್ 2’ ಟೀಸರ್ ಬರಲ್ಲ, ಸ್ವಲ್ಪ ದಿನ ಕಾಯಿರಿ ಟ್ರೇಲರ್ ಬಿಡ್ತೀವಿ’; ಯಶ್
ಯಶ್ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು