ಬೆಂಗಳೂರು: ಪ್ಯಾಲೇಸ್ ರಸ್ತೆಗೆ ಇಳಿಯುವ ಮುನ್ನ ಎಚ್ಚರ: ದಿಢೀರ್ ಎಂದು ವರ್ಕ್ ಇನ್ ಪ್ರೋಸೆಸ್ ಬೋರ್ಡ್ ಪ್ರತ್ಯಕ್ಷ
ನಿನ್ನೆ ಮೊನ್ನೆ ಇಲ್ಲದ ಬೋರ್ಡ್ ಅನ್ನು ಮಾಹಿತಿಯೇ ಇಲ್ಲದಂತೆ ತಂದು ಹಾಕಲಾಗುತ್ತಿದೆ. ಇದು ಜನರನ್ನು ಸಂಕಷ್ಟೀಕ್ಕೀಡು ಮಾಡಿದೆ.
ಬೆಂಗಳೂರಿನಲ್ಲಿರುವ ರಸ್ತೆ ಮಧ್ಯೆಗುಂಡಿಗಳಿಂದಲೇ ಜನ ಸಂಚರಿಸಲು ಪರದಾಡುತ್ತಿದ್ದರೆ. ಈ ನಡುವೆ ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ BWSSB(Benagaluru Water Supply and Sewerage Board) ವರ್ಕ್ ಇನ್ ಪ್ರೋಸೆಸ್ ಎನ್ನುವ ಬೋರ್ಡ್ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ಮೊನ್ನೆ ಇಲ್ಲದ ಬೋರ್ಡ್ ಅನ್ನು ಮಾಹಿತಿಯೇ ಇಲ್ಲದಂತೆ ತಂದು ಹಾಕಲಾಗುತ್ತಿದೆ. ಇದು ಜನರನ್ನು ಸಂಕಷ್ಟೀಕ್ಕೀಡು ಮಾಡಿದೆ. ಸದ್ಯ ಪ್ಯಾಲೇಸ್ ರಸ್ತೆಯಲ್ಲಿ, ವಿಕ್ರಮ್ ಹಾಸ್ಪಿಟಲ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ BWSSB ವರ್ಕ್ ಇನ್ ಪ್ರೋಸೆಸ್ ಎನ್ನುವ ಬೋರ್ಡ್ ಅನ್ನು ಹಾಕಲಾಗಿದ
ಕಾಮಗಾರಿ ನಡೆಯುತ್ತಿರುವ ಕುರಿತು ಬೋರ್ಡ್ ಹಾಕಿ, ರಸ್ತೆ ಬಂದ್ ಮಾಡಿರುವುದರಿಂದ ಮೇಕ್ರಿ ಸರ್ಕಲ್ ನಿಂದ ಹಿಡಿದು ಚಾಳುಕ್ಯ ಸರ್ಕಲ್ ತನಕ ಹಾಗೂ ಮಿಲ್ಲರ್ಸ್ ರಸ್ತೆ, ಆಲಿ ಆಸ್ಕರ್ ರಸ್ತೆ, ಹೈ ಗ್ರೌಂಡ್ ಪೋಲಿಸ್ ಠಾಣೆಯ ಸುತ್ತ ಮುತ್ತ ಜನ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸಂಚರಿಸಲು ಸರಿಯಾದ ರಸ್ತೆಯಿಲ್ಲದೆ ವಾಹನ ಸವಾರರು ಸುತ್ತು ಬಳಸಿಕೊಂಡು ಹೋಗಬೇಕಾದ ಸ್ಥಿತಿ ಎದುರಾಗಿದೆ. ಯಾವುದೇ ಮಾಹಿತಿ ನೀಡದೆ ರಸ್ತೆ ಬ್ಲಾಕ್ ಮಾಡಿರುವ BWSSB ಹಾಗೂ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. BWSSBನಿಂದ ರಸ್ತೆ ಕಾಮಗಾರಿ ಇನ್ನೂ ಹದಿನೈದು ದಿನಗಳಿಂದ ಇಪ್ಪತ್ತು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಇನ್ನೂ ಒಂದಷ್ಟು ದಿನ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹೀಗಾಗಿ ಜನ ಪರ್ಯಾಯ ದಾರಿ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ರಸ್ತೆ ಮಧ್ಯೆ ಗುಂಡಿಗಳಿಂದ ಬೇಸತ್ತಿರುವ ಬೆಂಗಳೂರಿನ ಜನ ರಸ್ತೆ ಕಾಮಗಾರಿ ಎಂದು ದಾರಿಯನ್ನು ಬಂದ್ ಮಾಡುತ್ತಿರುವುದರಿಂದ ಇನ್ನಷ್ಟು ಕಿರಿಕಿರಗೆ ಒಳಗಾಗಿದ್ದಾರೆ. ಆದ್ದರಿಂದ ಜನರು ಪ್ಯಾಲೇಸ್ ರಸ್ತೆಗೆ ಇಳಿಯುವ ಮೊದಲು ಜನರು ಎಚ್ಚರವಹಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ:
ಕರ್ನಾಟಕದಲ್ಲಿ ಇಂದು ಒಂದೇ ದಿನ 12 ಒಮಿಕ್ರಾನ್ ಕೇಸ್ ಪತ್ತೆ; ಬೆಂಗಳೂರಿನಲ್ಲೇ ಅತಿ ಹೆಚ್ಚು ಸೋಂಕಿತರು
Published On - 4:31 pm, Thu, 23 December 21