ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಟೆಕ್ಕಿ; ECMO ಚಿಕಿತ್ಸೆ ಪಡೆದು ಬದುಕುಳಿದ ಸೋಂಕಿತ
ಆಸ್ಪತ್ರೆಯ ವೈದ್ಯಕೀಯ ಐಸಿಯು ಮತ್ತು ಕೊವಿಡ್ ಐಸಿಯು ಮುಖ್ಯಸ್ಥ ಡಾ.ಗೌರಿಶಂಕರ್ ರೆಡ್ಡಿ ಮಾನೆ ಮಾತನಾಡಿ, ಆಸ್ಪತ್ರೆಗೆ ದಾಖಲಿಸಿದಾಗ ರೋಗಿ ಅರೋಗ್ಯ ಸ್ಥಿತಿ ಕ್ಷೀಣಿಸುತಿತ್ತು. ಪರೀಕ್ಷೆ ನಡೆಸಿದಾಗ ಜೀವ ಉಳಿಯುವ ಬಗ್ಗೆ ಅನುಮಾನ ಮೂಡಿತ್ತು.
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರೆವೆಂದರೆ ಅದು ಲಸಿಕೆ. ಎರಡೂ ಡೋಸ್ ಲಸಿಕೆ ಪಡೆದವರು ಕೊರೊನಾ ಸೋಂಕಿನಿಂದ ದೂರವಿರಬಹುದು. ಹೀಗಿದ್ದೂ, ಬೆಂಗಳೂರಿನಲ್ಲಿ 39 ವರ್ಷದ ಟೆಕ್ಕಿಯೊಬ್ಬರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ನವೆಂಬರ್ 22 ಕ್ಕೆ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 27 ರಂದು ಅವರ ಸ್ಥಿತಿ ಗಂಭೀರವಾದಾಗ ತಕ್ಷಣ ವೆಂಟಿಲೇಟರ್ನಿಂದ ECMOಗೆ ಸ್ಥಳಾಂತರಿಸಲಾಯಿತು. ECMOನಲ್ಲಿ ಸುಮಾರು ಎರಡು ವಾರಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಜಾರ್ಜ್ ಕೂಡಾ ಆಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರಜ್ಞರಾದ ಡಾ.ಸಂದೀಪ್ ಎಚ್ಎಸ್, ರೋಗಿ ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ರೋಗಿ ಸ್ಥಿತಿ ಗಂಭೀರವಾಗಿತ್ತು. ಶ್ವಾಸಕೋಶ ಶೇ.90 ರಷ್ಟು ಹಾನಿಯಾಗಿತ್ತು ಅಂತ ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಐಸಿಯು ಮತ್ತು ಕೊವಿಡ್ ಐಸಿಯು ಮುಖ್ಯಸ್ಥ ಡಾ.ಗೌರಿಶಂಕರ್ ರೆಡ್ಡಿ ಮಾನೆ ಮಾತನಾಡಿ, ಆಸ್ಪತ್ರೆಗೆ ದಾಖಲಿಸಿದಾಗ ರೋಗಿ ಅರೋಗ್ಯ ಸ್ಥಿತಿ ಕ್ಷೀಣಿಸುತಿತ್ತು. ಪರೀಕ್ಷೆ ನಡೆಸಿದಾಗ ಜೀವ ಉಳಿಯುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ರೋಗಿಯ ವಯಸ್ಸು ಚಿಕ್ಕದಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂಬ ಭರವಸೆ ಇತ್ತು. ಆದಾಗ್ಯೂ ಏಳು ದಿನಗಳ ಕಾಲ ವ್ಯಕ್ತಿಯ ಆರೋಗ್ಯ ಹದಗೆಡುತ್ತಲೇ ಇತ್ತು. ಮಾತ್ರವಲ್ಲದೇ ಜಠರಗರುಳಿನ ರಕ್ತಸ್ರಾವವೂ ಆಗಿತ್ತು. ಜ್ವರ ಕಾಣಿಸಿಕೊಂಡಾಗ ರೋಗಿ ಕುಟುಂಬ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ನವೆಂಬರ್ 22 ರಂದು ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಹೋಗಿ ಅಲ್ಲಿ ಕೊವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಅದೇ ದಿನ ಅವರನ್ನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ತಿಳಿಸಿದ್ದಾರೆ.
ECMO ಎಂದರೇನು? ECMO ಎನ್ನುವುದು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಬಳಸಲಾಗುವ ಯಂತ್ರವಾಗಿದೆ. ಹೃದಯ ಮತ್ತು ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಇಸಿಎಂಒ ರಕ್ತವು ಶ್ವಾಸಕೋಶವನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ. ದೇಹದ ಹೊರಗಿನಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ಪಂಪ್ ಮಾಡುತ್ತದೆ. ಇದು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ. ಜೊತೆಗೆ ಆಮ್ಲಜನಕದಿಂದ ತುಂಬಿದ ರಕ್ತವನ್ನು ದೇಹದ ಅಂಗಾಂಶಗಳಿಗೆ ಕಳುಹಿಸುತ್ತದೆ.
ಇದನ್ನೂ ಓದಿ
Fact Check 1999ರಲ್ಲಿ ಒಮಿಕ್ರಾನ್ ವಿಡಿಯೊ ಗೇಮ್ ತಯಾರಿಸಿದ್ದರೇ ಬಿಲ್ ಗೇಟ್ಸ್?
ಪುತ್ರ ಆರ್ಯನ್ ವಿವಾದದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ ಶಾರುಖ್: ಫೋಟೋ ವೈರಲ್
Published On - 12:21 pm, Thu, 23 December 21