ಬೆಂಗಳೂರಿನಲ್ಲಿ ಕೋಟಿ ಕೋಟಿ ರೂ. ಹವಾಲಾ ದಂಧೆ ಬೆಳಕಿಗೆ! ಕೆಲ ಸ್ಫೋಟಕ ಮಾಹಿತಿ ಇಲ್ಲಿದೆ
ಕಿಂಗ್ ಪಿನ್ ಸೇರಿದಂತೆ ಬಂಧಿತರ ಜೊತೆಗೆ 150 ಜನ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ದೇಶದಲ್ಲಿರುವ ಬೇರೆ ಬೇರೆ ರಾಜ್ಯದಲ್ಲೂ ಈ ದಂಧೆ ನಡೆಸುವ ಗ್ಯಾಂಗ್ ತಲೆ ಎತ್ತಿದೆ. ಹವಾಲಾ ದಂಧೆಯಿಂದ ವಿದೇಶಿ ವಿನಿಮಯಕ್ಕೆ ಭಾರೀ ಪೆಟ್ಟು ನೀಡುತ್ತೆ.
ಬೆಂಗಳೂರು: ಶ್ರೀಕಿಯ ಬಿಟ್ ಕಾಯಿನ್ ಪ್ರಕರಣವನ್ನೇ ಮೀರಿಸುವಂತಹ ಸ್ಟೋರಿ ಇದ್ದಾಗಿದ್ದು, ಬರೋಬ್ಬರಿ 3,000 ಕೋಟಿಯ ಹವಾಲಾ ಕಹಾನಿ ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ ವೇಳೆ ಬಂಧಿತರು ಸಾವಿರಾರು ಕೋಟಿ ಹವಾಲಾ ದಂಧೆ ನಡೆಸಿರುವುದು ಪತ್ತೆಯಾಗಿದೆ. ಪೊಲೀಸರ ಕೈಗೆ ಸಿಕ್ಕ 4 ಜನರು 3 ತಿಂಗಳಲ್ಲಿ ಸುಮಾರು 3,000 ಕೋಟಿ ಹವಾಲಾ ವ್ಯವಹಾರ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ರಾಜ್ಯದಲ್ಲಿ ಇನ್ನೂ 150 ಜನರಿಂದ ಹವಾಲಾ ದಂಧೆ ನಡೆಯುತ್ತಿದೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ.
ಕಿಂಗ್ ಪಿನ್ ಸೇರಿದಂತೆ ಬಂಧಿತರ ಜೊತೆಗೆ 150 ಜನ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ದೇಶದಲ್ಲಿರುವ ಬೇರೆ ಬೇರೆ ರಾಜ್ಯದಲ್ಲೂ ಈ ದಂಧೆ ನಡೆಸುವ ಗ್ಯಾಂಗ್ ತಲೆ ಎತ್ತಿದೆ. ಹವಾಲಾ ದಂಧೆಯಿಂದ ವಿದೇಶಿ ವಿನಿಮಯಕ್ಕೆ ಭಾರೀ ಪೆಟ್ಟು ನೀಡುತ್ತೆ. ಮಾತ್ರವಲ್ಲದೇ ರಾಜ್ಯ ಸರ್ಕಾರಕ್ಕೂ ಸಾವಿರಾರು ಕೋಟಿ ನಷ್ಟವಾಗುತ್ತದೆ. ಪುಟ್ಟೇನಹಳ್ಳಿ ಪೊಲೀಸರು ಆರೋಪಿಗಳಾದ ಫೈಸಲ್, ಫಜಲ್, ಸಾಹಿಲ್, ಮನಾಫ್ ಬಂಧಿಸಿ ವಿಚಾರಣೆ ನಡೆಸಿದಾಗ ಆರ್ಥಿಕತೆಗೆ ಪೆಟ್ಟು ಕೊಡುವ ಭಯಾನಕ ಸತ್ಯ ಬಹಿರಂಗವಾಗಿದೆ.
ನಾಲ್ವರಿಂದ 3 ಸಾವಿರ ಕೋಟಿ ರೂ. ಹಣ 2,886 ಅಕೌಂಟ್ಗೆ ವರ್ಗಾವಣೆ ಆಗಿದೆ. 25 ವಿವಿಧ ಬ್ಯಾಂಕ್ ಖಾತೆಗೆ ಹಣ ಹಾಕಿ ಅವ್ಯವಹಾರ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ 17 ಜನರಿಂದ ಹಣ ಪಡೆದು ದೇಶದ ಬೇರೆ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾರೆ. ಆದರೆ ಆ ಹಣ ಎಲ್ಲಿ ಹೋಗುತ್ತಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ.
ಇದುವರೆಗೆ ಆರೋಪಿಗಳು ಆರೇಳು ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಬಗ್ಗೆ ಅನುಮಾನ ಮೂಡಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪ್ರತಿಯೊಂದು ಬ್ಯಾಂಕ್ ಸ್ಟೇಟ್ ಮೆಂಟ್ ಪಡೆದುಕೊಳ್ಳುತ್ತಿದ್ದಾರೆ.
ಸೌದಿಗೆ ಪರಾರಿ ಈ ಹವಾಲಾ ದಂಧೆಯ ಕಿಂಗ್ ಪಿನ್ ಕೇರಳ ಮೂಲದ ರಿಯಾಜ್ ಮತ್ತು ಮನಸ್ ಸಹೋದರರು. ರಿಯಾಜ್ ಕೇರಳದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾನೆ. ಕೇರಳಗೆ ತೆರಳಿ ಮನೆ ಪರಿಶೀಲಿಸಿದ ಪೊಲೀಸರಿಗೆ ಆತನಿಗೆ ಸಂಬಂಧಿಸಿ ಆಧಾರ್ ಕಾರ್ಡ್ ಕೂಡ ಸಿಕ್ಕಿಲ್ಲ. ನಾಲ್ವರು ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆ ಸಹೋದರರು ಸೌದಿಗೆ ಪರಾರಿಯಾಗಿದ್ದಾರೆ. ರಿಯಾಜ್ ಮತ್ತು ಮನಸ್ ಬೆಂಗಳೂರಲ್ಲಿದ್ದ ನಾಲ್ವರನ್ನ ಆಪರೇಟ್ ಮಾಡುತ್ತಿದ್ದರು. ವಾಟ್ಸ್ ಆ್ಯಪ್ನಲ್ಲಿ ಅಕೌಂಟ್ ನಂಬರ್ ಕಳಿಸಿ ಹಣ ಹಾಕಿಸುತ್ತಿದ್ದರು. ಬೆಂಗಳೂರಲ್ಲಿ ನಗದು ಹಣ ಯಾರಿಂದ ಪಡೆಯಬೇಕು ಅಂತಲೂ ಹೇಳುತ್ತಿದ್ದರು. ಆರೋಪಿಗಳು ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಹಣ ಪಡೆದು ಬರುತ್ತಿದ್ದರು. ನಂತರ ಅದನ್ನು ಡೆಪಾಸಿಟ್ ಮಷಿನ್ ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಆದರೆ ಯಾವತ್ತು ಬ್ಯಾಂಕ್ನಲ್ಲಿ ಹೋಗಿ ವ್ಯವಹರಿಸುತ್ತಿರಲಿಲ್ಲ.
ಎರಡು ವಾಟ್ಸ್ಆ್ಯಪ್ ಗ್ರೂಪ್ ಆರೋಪಿಗಳು ಸಿಕೆ ಮತ್ತು ಎಫ್ಎಂಎಫ್ ಎರಡು ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದರು. ಅದರಲ್ಲಿ ರಿಯಾಜ್ ಯಾರಿಂದ ಹಣ ಪಡೆದುಕೊಳ್ಳಬೇಕು. ಯಾವ ಖಾತೆಗೆ ಹಣ ಡೆಪಾಸಿಟ್ ಮಾಡಬೇಕು ಎಲ್ಲವನ್ನು ಹೇಳುತ್ತಿದ್ದ. ಡೆಪಾಸಿಟ್ ಮಾಡಿದ ರಶೀದಿಗಳನ್ನೂ ಅಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಒಬ್ಬೊಬ್ಬರು ಒಂದು ದಿನಕ್ಕೆ 30 ರಿಂದ 35 ಲಕ್ಷ ಹಣ ಡೆಪಾಸಿಟ್ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.
ಇಡಿ ಮತ್ತು ಐಟಿಗೆ ಪತ್ರ ರಿಯಾಜ್ ವಿಳಾಸದ ಜೊತೆಗೆ ಒಂದು ಕೋಡ್ ವರ್ಡ್ ಕೂಡ ಹೇಳುತ್ತಿದ್ದ. ಬೆಂಗಳೂರಲ್ಲಿದ್ದವರು ಕೋಡ್ ವರ್ಡ್ ಹೇಳಿದರೆ ಸಾಕು ಬಾಕ್ಸ್ನಲ್ಲಿದ್ದ ಕಂತೆ ಕಂತೆ ಹಣ ಕೈ ಸೇರುತ್ತಿತ್ತು. ಆ ಹಣವನ್ನು ತಂದು ಡೆಪಾಸಿಟ್ ಮಷಿನ್ ಮೂಲಕ ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಸದ್ಯ ಈ ಪ್ರಕರಣದ ತನಿಖೆ ನಡೆಸುವಂತೆ ಇಡಿ ಮತ್ತು ಐಟಿಗೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತ್ರ ಬರೆದಿದ್ದಾರೆ.
ಇಲ್ಲಿ ಇಷ್ಟೊಂದು ಹಣದ ವ್ಯವಹಾರ ಯಾಕಾಗಿ ನಡೀತಾ ಇತ್ತು? ಇಲ್ಲಿರುವವರು ಇಷ್ಟು ನಗದು ಹಣ ಕೊಡ್ತಾ ಇದ್ದಿದ್ದು ಯಾಕೆ? ನಗದು ಹಣ ಕೊಡೋರಿಗೆ ಯಾರಿಂದ ಸೂಚನೆ ಬರುತ್ತಾ ಇತ್ತು? ಜಮೆ ಮಾಡಿದ ಹಣವನ್ನು ಖಾತೆಯಿಂದ ಯಾರು ಪಡೆದುಕೊಳ್ಳುತ್ತಿದ್ದರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಇದನ್ನೂ ಓದಿ
ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್ ಆನಂದ್ ಪುತ್ರಿಯ ಮಸ್ತ್ ಮಾತುಕತೆ
Published On - 9:45 am, Thu, 23 December 21