AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

Master Anand Daughter Vanshika: ಚಿಟಪಟನೆ ಮಾತನಾಡುವ ವಂಶಿಕಾಳನ್ನು ಕಂಡರೆ ಎಲ್ಲರಿಗೂ ಇಷ್ಟ. ಆಕೆಯ ಮಾತುಗಳಿಗೆ ಈಗಾಗಲೇ ಎಲ್ಲರೂ ಮರುಳಾಗಿದ್ದಾರೆ. ನಟನೆಯಲ್ಲೂ ವಂಶಿಕಾ ಸೂಪರ್​.

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ
ನನ್ನಮ್ಮ ಸೂಪರ್ ಸ್ಟಾರ್ ವಿಶೇಷ ಸಂಚಿಕೆ
TV9 Web
| Edited By: |

Updated on: Dec 23, 2021 | 9:26 AM

Share

ಈ ವಾರಾಂತ್ಯದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆ ಸಿಗಲಿದೆ. ‘ಕಲರ್ಸ್​ ಕನ್ನಡ’ (Colors Kannada) ವಾಹಿನಿ ಒಂದು ವಿಶೇಷ ಸಂಚಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಸೂಪರ್​ ಹಿಟ್​ ಆಗಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ ಮತ್ತು ಕಿರುತೆರೆ ಸೆಲೆಬ್ರಿಟಿಗಳ ‘ರಾಜಾ ರಾಣಿ’ ಕಾರ್ಯಕ್ರಮಗಳ ಸಂಗಮ ಆಗುತ್ತಿದೆ. ಈ ಎರಡೂ ಕಾರ್ಯಕ್ರಮದ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಪ್ರೋಮೋ ಈಗ ಗಮನ ಸೆಳೆಯುತ್ತಿದೆ. ‘ರಾಜಾ ರಾಣಿ’ ಕಾರ್ಯಕ್ರಮದ ನಿವೇದಿತಾ ಗೌಡ (Niveditha Gowda) ಮತ್ತು ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Superstar) ಶೋನ ವಂಶಿಕಾ (Vanshika) ನಡುವೆ ನಡೆದ ಮಸ್ತ್​ ಮಾತುಕತೆಗೆ ಈ ವೇದಿಕೆ ಸಾಕ್ಷಿ ಆಗಿದೆ. ಶನಿವಾರ (ಡಿ.25) ಮತ್ತು ಭಾನುವಾರ (ಡಿ.26) ಈ ಎಪಿಸೋಡ್​ ಪ್ರಸಾರ ಆಗಲಿದೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್​ ಆನಂದ್​ ಅವರ ಪುತ್ರಿ ವಂಶಿಕಾ ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈ ಪುಟಾಣಿಯ ಮಾತುಗಳನ್ನು ಕೇಳಿ ಬೆರಗಾಗದವರೇ ಇಲ್ಲ. ಈಗ ‘ನನ್ನಮ್ಮ ಸೂಪರ್​ ಸ್ಟಾರ್​’ ಮತ್ತು ‘ರಾಜಾ ರಾಣಿ’ ಶೋಗಳ ಸಂಗಮದಲ್ಲಿ ನಿವೇದಿತಾ ಗೌಡ ಮತ್ತು ವಂಶಿಕಾ ಮಾತಿನ ಚಕಮಕಿ ನಡೆಸಿದ್ದಾರೆ. ಅದರ ಒಂದು ಸಣ್ಣ ಝಲಕ್​ ಈ ಪ್ರೋಮೋದಲ್ಲಿ ಇದೆ.

ಚಿಟಪಟನೆ ಮಾತನಾಡುವ ವಂಶಿಕಾಳನ್ನು ಕಂಡರೆ ಎಲ್ಲರಿಗೂ ಇಷ್ಟ. ಆಕೆಯ ಮಾತುಗಳಿಗೆ ಈಗಾಗಲೇ ಎಲ್ಲರೂ ಮರುಳಾಗಿದ್ದಾರೆ. ನಟನೆಯಲ್ಲೂ ವಂಶಿಕಾ ಸೂಪರ್​. ಅನೇಕರು ಆಕೆಯ ಪ್ರತಿಭೆಗೆ ಫಿದಾ ಆಗಿದ್ದಾರೆ. ವಂಶಿಕಾಗೆ ಅಭಿಮಾನಿ ಬಳಗವೂ ಹೆಚ್ಚುತ್ತಿದೆ. ಈ ವಾರಾಂತ್ಯದ ಎಪಿಸೋಡ್​ನಲ್ಲಿ ವಂಶಿಕಾ ವರ್ಸಸ್​ ವಿವೇದಿತಾ ಗೌಡ ಅವರ ಮುಖಾಮುಖಿ ನೋಡಲು ವೀಕ್ಷಕರು ಕಾದಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮಕ್ಕೆ ವೀಕ್ಷಕರು ಮನ ಸೋತಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಖ್ಯಾತ ನಿರೂಪಕ ಸೃಜನ್​ ಲೋಕೇಶ್​, ನಟಿಯರಾದ ಅನುಪ್ರಭಾಕರ್​ ಮತ್ತು ತಾರಾ ಅನುರಾಧಾ ಅವರು ಈ ಕಾರ್ಯಕ್ರಮದ ಜಡ್ಜ್​ ಆಗಿದ್ದಾರೆ. ಪುಟಾಣಿಗಳ ಕಲರವದಿಂದ ವೀಕ್ಷಕರಿಗೆ ಮಸ್ತ್​ ಮನರಂಜನೆ ಸಿಗುತ್ತಿದೆ. ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್​; ಕಮೆಂಟ್​ ಮೂಲಕ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​

ನಿವೇದಿತಾ ಗೌಡ ಫೋಟೋಗಳಿಗೆ ಫ್ಯಾನ್ಸ್​ ಫಿದಾ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!