ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್​; ಕಮೆಂಟ್​ ಮೂಲಕ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​

Niveditha Gowda: ‘ಮೂರು ತಲೆಮಾರಿನ ಡ್ಯಾನ್ಸ್​. ನಾನು, ಅಮ್ಮ ಮತ್ತು ಅಜ್ಜಿ’ ಎಂದು ಈ ವಿಡಿಯೋಗೆ ನಿವೇದಿತಾ ಕ್ಯಾಪ್ಷನ್​ ನೀಡಿದ್ದಾರೆ. 49 ಸಾವಿರಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ.

ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್​; ಕಮೆಂಟ್​ ಮೂಲಕ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​
ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Dec 17, 2021 | 9:37 AM

ಮಾಜಿ ಬಿಗ್​ ಬಾಸ್​ ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರು ಕಿರುತೆರೆಯ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್​ ಶೆಟ್ಟಿ (Chandan Shetty) ಜತೆ ಅವರು ‘ರಾಜಾ ರಾಣಿ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ರೀಲ್ಸ್​ (Niveditha Gowda Instagram Reels)) ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ. ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 13 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್​ ಮೂಲಕವೂ ನಿವೇದಿತಾ ಗೌಡ ಗಮನ ಸೆಳೆಯುತ್ತಾರೆ. ಈಗ ಅವರು ಮಾಡಿರುವ ಹೊಸ ರೀಲ್ಸ್​ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಕಮೆಂಟ್​ಗಳ ಮೂಲಕ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಕೆಲವೊಂದು ರೀಲ್ಸ್​ನಲ್ಲಿ ನಿವೇದಿತಾ ಗೌಡ ಅವರು ತಾಯಿಯ ಜತೆ ಕಾಣಿಸಿಕೊಳ್ಳುತ್ತಾರೆ. ಅಮ್ಮ-ಮಗಳ ಡ್ಯಾನ್ಸ್​ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದುಂಟು. ಈ ಬಾರಿ ಅಮ್ಮ-ಮಗಳ ಜತೆಗೆ ಅಜ್ಜಿಯೂ ಸೇರಿಕೊಂಡಿದ್ದಾರೆ! ಹೌದು, ನಿವೇದಿತಾ ಗೌಡ ಕುಟುಂಬದ ಮೂರು ತಲೆಮಾರಿನವರು ಜತೆಯಾಗಿ ಈ ರೀಲ್ಸ್​ ಮಾಡಿದ್ದಾರೆ. ಅದನ್ನು ಕಂಡು ಅವರ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

‘ಮೂರು ತಲೆಮಾರಿನ ಡ್ಯಾನ್ಸ್​. ನಾನು, ಅಮ್ಮ ಮತ್ತು ಅಜ್ಜಿ’ ಎಂದು ಈ ವಿಡಿಯೋಗೆ ನಿವೇದಿತಾ ಕ್ಯಾಪ್ಷನ್​ ನೀಡಿದ್ದಾರೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ 49 ಸಾವಿರಕ್ಕೂ ಅಧಿಕ ಜನರು ಇದಕ್ಕೆ ಲೈಕ್​ ಬಟನ್​ ಒತ್ತಿದ್ದಾರೆ. ‘ನಿಮ್ಮ ವಂಶದಲ್ಲಿ ಯಾರಿಗೂ ವಯಸ್ಸು ಆಗುವುದಿಲ್ಲವಾ’ ಎಂದು ಕೆಲವು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಸ್ನೇಹ ಚಿಗುರಿತ್ತು. ನಂತರ ಅದು ಪ್ರೀತಿಯಾಗಿ ಬೆಳೆಯಿತು. ಎರಡೂ ಕುಟುಂಬದ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಯಿತು. ಅನೇಕ ಸಿನಿಮಾಗಳಿಗೆ ಚಂದನ್​ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗಾಯಕನಾಗಿಯೂ ಅವರಿಗೆ ತುಂಬ ಬೇಡಿಕೆ ಇದೆ. ಈಗ ಅವರು ರಚಿತಾ ರಾಮ್​ ಜತೆ ಸೇರಿ ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡು ಮಾಡಿದ್ದಾರೆ. ಅದರ ಪೋಸ್ಟರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿ ನಿರೀಕ್ಷೆ ಮೂಡಿಸಿದೆ. ಸಾಂಗ್​ ಬಿಡುಗಡೆಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ:

Niveditha Gowda: ವೈರಲ್​ ಆಯ್ತು ನಿವೇದಿತಾ ಗೌಡ ಮಸ್ತ್ ಫೋಟೋಗಳು; ಫ್ಯಾನ್ಸ್ ಫಿದಾ

ನಿವೇದಿತಾ ಗೌಡ ಫೋಟೋಗಳಿಗೆ ಫ್ಯಾನ್ಸ್​ ಫಿದಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ