ಯುಕೆಯಲ್ಲಿ ಕೋಟಿ ಕೋಟಿ ಸಂಪಾದಿಸುವ ಕನಸು ಕಂಡಿದ್ದ ಯುವಕ ಬೆಂಗಳೂರು ಏರ್​​​ಪೋರ್ಟ್​​ನಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?

ಯುಕೆಯಲ್ಲಿ ಕೋಟಿ ಕೋಟಿ ಸಂಪಾದಿಸುವ ಕನಸು ಕಂಡಿದ್ದ ಯುವಕ ಬೆಂಗಳೂರು ಏರ್​​​ಪೋರ್ಟ್​​ನಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?
ಪ್ರಾತಿನಿಧಿಕ ಚಿತ್ರ

ಬ್ರಿಟಿಷ್ ಏರ್ ವೇಸ್ನಲ್ಲಿ ಯುಎಸ್ಗೆ ಹೋಗಲು ಸಜ್ಜಾಗಿದ್ದ ಕೇರಳಾ ವೈನಾಡು ಮೂಲದ ಸೊಜು ತಜತುವೀಟಿಲ್ ಶಾಜಿ ಎಂಬ ಸೇಲ್ಸ್ ಮ್ಯಾನ್ ನಕಲಿ ಅಂಕಪಟ್ಟಿ ಪಡೆದು ಸ್ಟೂಡೆಂಟ್ ವೀಸಾ ಪಡೆದಿದ್ದ.

TV9kannada Web Team

| Edited By: Ayesha Banu

Dec 23, 2021 | 1:11 PM

ಬೆಂಗಳೂರು: ಸೇಲ್ಸ್ ಮ್ಯಾನ್ ಆಗಿರುವ ಯುವಕ ಕೆಲಸಕ್ಕಾಗಿ ಲಂಡನ್ಗೆ ಹೋಗಲು ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾವಿರ ಸುಳ್ಳು ಹೇಳಿ, ನಕಲಿ ದಾಖಲೆ ಸೃಷ್ಟಿಸಿ ಇಂಡಿಯಾ ಟು ಯುಕೆಗೆ ಹೋಗಲು ಮಾಸ್ಟರ್ ಪ್ಲ್ಯಾನ್ ಹಾಕಿದ್ದ ಯುವಕನ ಅಸಲಿಯತ್ತನ್ನು ನೋಡಿ ಏರ್‌ಪೋರ್ಟ್ ಇಮಿಗ್ರೇಷನ್ ಆಫೀಸರ್ಗಳೇ ಶಾಕ್ ಆಗಿದ್ದಾರೆ.

ಬ್ರಿಟಿಷ್ ಏರ್ ವೇಸ್ನಲ್ಲಿ ಯುಎಸ್ಗೆ ಹೋಗಲು ಸಜ್ಜಾಗಿದ್ದ ಕೇರಳಾ ವೈನಾಡು ಮೂಲದ ಸೊಜು ತಜತುವೀಟಿಲ್ ಶಾಜಿ ಎಂಬ ಸೇಲ್ಸ್ ಮ್ಯಾನ್ ನಕಲಿ ಅಂಕಪಟ್ಟಿ ಪಡೆದು ಸ್ಟೂಡೆಂಟ್ ವೀಸಾ ಪಡೆದಿದ್ದ. ಸ್ಟೂಡೆಂಟ್ ವೀಸಾದ ಸಹಾಯದಿಂದ ಲಂಡನ್‌ಗೆ ತೆರಳಲು ಯತ್ನಿಸಿದ್ದ. ಶಾಜಿಯ ದಾಖಲೆಗಳನ್ನು ನೋಡಿ ಅನುಮಾನಗೊಂಡಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಆಫೀಸರ್ ಬಿಬಿಎ ವ್ಯಾಸಂಗ ಮಾಡಿದ್ದು ಎಲ್ಲಿ? ಪಾಸ್ ಆಗಿದ್ದು ಯಾವಾಗ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇಮಿಗ್ರೇಷನ್ ಸಿಬ್ಬಂದಿಯ ಪ್ರಶ್ನೆಗೆ ಶಾಜಿ ಕಕ್ಕಾಬಿಕ್ಕಿಯಾಗಿದ್ದಾನೆ. ಇದಕ್ಕೆ ಉತ್ತರಿಸಲಾಗದೆ ಸಿಬ್ಬಂದಿ ಬಳಿ ಸಿಕ್ಕಿಬಿದ್ದಿದ್ದಾನೆ.

ಯುಕೆಯಲ್ಲಿ ಕೋಟಿ ಕೋಟಿ ಸಂಪಾದಿಸುವ ಕನಸು ಕಂಡಿದ್ದ ಯುವಕ ಸೇಲ್ಸ್ ಮ್ಯಾನ್ ಶಾಜಿ ಯುಕೆಗೆ ಹೋಗಿ ಕೋಟಿ ಕೋಟಿ ಹಣ ಸಂಪಾದಿಸುವ ಕನಸು ಕಂಡಿದ್ದ. ಆ ಕನಸಿನಿಂದಲೇ ಸ್ಟೂಡೆಂಟ್ ವೀಸಾ ಪಡೆದಿದ್ದ. ಎಜೆನ್ಸಿ ಸಹಾಯದಿಂದ ಗುಲ್ಬರ್ಗಾ ವಿವಿಯ ಎನ್.ವಿ ಡಿಗ್ರಿ ಕಾಲೇಜ್ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಪಡೆದಿದ್ದ. ಸದ್ಯ ಯುವಕನ ಅಸಲಿಯತ್ತು ಬಯಲಾಗಿದ್ದು ಸೋಜಿ ತಜುತುವಿಟೀಲ್‌ ಶಾಜಿ ಯನ್ನು ಏರ್ಪೋರ್ಟ್ ಪೊಲೀಸ್ರು ಬಂಧಿಸಿದ್ದಾರೆ. ಹಾಗೂ ಆತನ ಮಾಹಿತಿಯನ್ವಯ ನಕಲಿ ಅಂಕಪಟ್ಟಿ ನೀಡಿದ್ದ ಅನುರಾಗ್ ಸಹ ಅರೆಸ್ಟ್ ಆಗಿದ್ದಾನೆ. ಎಜುಕೇಷನ್ ವೀಸಾ ನೀಡಿದ್ದ True way global education ಮೇಲೆ ಐಪಿಸಿ 465 (ಫೋರ್ಜರಿ) ಮತ್ತು 471 (ಅಸಲಿಯಂತೆ ನಕಲಿ ದಾಖಲೆ ಸೃಷ್ಟಿ) ಅಡಿ ಪ್ರಕರಣ ದಾಖಲಾಗಿದೆ.

ಇನ್ನು ಈ ಪ್ರಕರಣ ಸಂಬಂಧ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ. ಕೆಐಎಎಲ್ ಇಮಿಗ್ರೇಷನ್ ಅಥಾರಿಟಿಯ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಲಂಡನ್‌ಗೆ ತೆರಳಲು ಯತ್ನಿಸಿದ ಓರ್ವ ಯುವಕನನ್ನ ವಶಕ್ಕೆ ಪಡೆಯಲಾಗಿದೆ. ಆತನ‌ ಮಾಹಿತಿ ಮೇರೆಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿದ್ದವನನ್ನ ಸಹ ವಶಕ್ಕೆ ಪಡೆದಿದ್ದೇವೆ. True Way Global Education ಹೆಸರಿನ ಇನ್ಸ್ಟಿಟ್ಯೂಟ್ ಮಾರ್ಕ್ಸ್ ನೀಡಿದೆ. ಒನ್ ಟೈಮ್ ಸಿಟ್ಟಿಂಗ್ ನಲ್ಲಿ ವ್ಯವಹಾರ ಮುಗಿಸುವುದಾಗಿ ಆರೋಪಿಗಳು ಹೇಳ್ತಿದ್ರು. ಬೇಕಾದವರಿಂದ ಹಣ ಪಡೆದು, ಅವರ ಮಾಹಿತಿ‌ ಪಡೆದು ಬೇಕಾದ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ರು. ಮಾರ್ಕ್ಸ್ ಕಾರ್ಡ್ ಹಾಲೋಗ್ರಾಮ್ ಸಹ ಅಸಲಿ ಹಾಲೋಗ್ರಾಮ್ ಹೋಲುವಂತಿದೆ. ಒಂದು ದೊಡ್ಡ ನೆಟ್‌ವರ್ಕ್ ಇದೆ. ಈಗಾಗಲೇ ಈ ಆರೋಪಿಗಳಿಂದ ಮಾರ್ಕ್ಸ್ ಕಾರ್ಡ್ ಪಡೆದವರು ದೇಶ, ವಿದೇಶದಲ್ಲಿದ್ದಾರೆ‌. ಅಂಥವರನ್ನ ಸಹ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಕೇರಳಾಗೆ ಒಂದು ತಂಡವನ್ನ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ ರಾಮನಗರ: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ತುಮಕೂರು ‌ಜಿಲ್ಲೆ ಮಧುಗಿರಿ ತಾಲೂಕಿನ ಸುಣವಾಡಿ ಗ್ರಾಮದ ಆರೋಪಿ ನರಸಿಂಹಮೂರ್ತಿಯನ್ನು ಮಾಗಡಿ ಠಾಣೆ ಪೊಲೀಸರು ಬಂಧಿಸಿದ್ದು ಆತನಿಂದ 18 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ನಕಲಿ ಕೀ ಗಳನ್ನ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಇತ್ತೀಚೆಗೆ ಮಾಗಡಿ ಪಟ್ಟಣದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಒಂದೂವರೆ ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ ವಿಜಯನಗರ ಜಿಲ್ಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಬಂಧಿಸಿ ಒಂದೂವರೆ ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸರು, ಕೊಪ್ಪಳದ ವೆಂಕಟೇಶ್, ಅಬ್ದುಲ್ ವಹಾಬ್, ಮಹೇಶ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ವಿಜಯಪುರದ ಶ್ರೀಧರ್​ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸರಿಗಮಪ ವೇದಿಕೆಗೆ ಬಂದು ಹಾಡಿದ ಅನಿಲ್ ಕುಂಬ್ಳೆ; ವೀಕ್ಷಕರ ಇನ್ನೊಂದು ಆಸೆ ಈಡೇರೋದು ಯಾವಾಗ?​

Follow us on

Related Stories

Most Read Stories

Click on your DTH Provider to Add TV9 Kannada