‘ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನಮ್ಮ ಕ್ರಿಕೆಟ್ ಲೋಕ ಶುರುವಾಯ್ತು’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಆ ಮಾತು ಕೇಳಿ ಹಂಸಲೇಖ ಥ್ರಿಲ್ ಆದರು. ‘ನೀವು ಮನಸ್ಸಿಗೆ ಇಳಿದರೆ ಕಮಿಟ್ಟು. ಕಣಕ್ಕೆ ಇಳಿದರೆ ವಿಕೆಟ್ಟು’ ಎಂದು ಹಂಸಲೇಖ ಹೇಳಿರುವುದು ಪ್ರೋಮೋದಲ್ಲಿ ಹೈಲೈಟ್ ಆಗಿದೆ. ಎಲ್ಲರೂ ಕೂಡ ಅನಿಲ್ ಕುಂಬ್ಳೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.
ಅನಿಲ್ ಕುಂಬ್ಳೆ ಕೇವಲ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಉತ್ತಮ ಹಾಡುಗಾರ ಕೂಡ ಹೌದು. ಅವರು ಹಾಡು ಹೇಳಿದ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದುಂಟು. ಈಗ ಅವರು ಸರಿಗಮಪ ವೇದಿಕೆಯಲ್ಲೂ ಮೈಕ್ ಹಿಡಿದಿದ್ದಾರೆ. ‘ದೇವರ ಗುಡಿ’ ಚಿತ್ರದ ಚಿತ್ರದ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ..’ ಗೀತೆಯನ್ನು ಅವರು ವೇದಿಕೆ ಮೇಲೆ ಹಾಡಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಅನಿಲ್ ಕುಂಬ್ಳೆ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಸುದೀಪ್ ಕೂಡ ಸಂಭ್ರಮಿಸಿದ್ದಾರೆ. ವಿಡಿಯೋ ಕಾಲ್ ಮೂಲಕ ಅವರು ಮಾತನಾಡಿದ್ದಾರೆ. ‘ಅವರು ಬೌಲಿಂಗ್ ಮಾಡಬೇಕು, ನಾನು ವಿಕೆಟ್ ಕೀಪಿಂಗ್ ಮಾಡಬೇಕು ಅಂತ ನನಗೆ ಬಹಳ ಆಸೆ ಇದೆ’ ಎಂದು ಸುದೀಪ್ ಹೇಳಿದ್ದಾರೆ.
ಪ್ರೇಕ್ಷಕರಿಗೆ ಇದೆ ಇನ್ನೊಂದು ಆಸೆ:
‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದ ಸಾಧಕರ ಸೀಟ್‌ನಲ್ಲಿ ಅನಿಲ್ ಕುಂಬ್ಳೆ ಅವರನ್ನು ನೋಡಬೇಕು ಎಂಬುದು ಎಲ್ಲ ಅಭಿಮಾನಿಗಳು ಬಯಕೆ. ಮೊದಲನೇ ಸೀಸನ್ ಶುರುವಾದಾಗಿನಿಂದಲೂ ಈ ಆಸೆಯನ್ನು ಪ್ರೇಕ್ಷಕರು ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಈವರೆಗೆ ಅದು ನೆರವೇರಿಲ್ಲ. ಈಗ ಅನಿಲ್ ಕುಂಬ್ಳೆ ಅವರು ಜೀ ಕನ್ನಡ ವಾಹಿನಿ ಜೊತೆ ಒಡನಾಟ ಹೆಚ್ಚಿಸಿಕೊಂಡಿರುವುದರಿಂದ ಮುಂಬರುವ ಸೀಸನ್‌ನಲ್ಲಾದರೂ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬಂದು, ಸಾಧಕರ ಸೀಟ್‌ನಲ್ಲಿ ಕುಳಿತುಕೊಳ್ಳಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ.
ಇದನ್ನೂ ಓದಿ:
ಜೀ ಕನ್ನಡದಲ್ಲಿ ‘ಕರುನಾಡ ರತ್ನ’ ಕಾರ್ಯಕ್ರಮ; ಪುನೀತ್ ರಾಜ್ಕುಮಾರ್ಗೆ ವಿಶೇಷ ನಮನ
ಕ್ರಿಕೆಟ್, ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್; ‘83’ ಟೀಮ್ ಜತೆ ಸೇರಿಕೊಂಡ ಕಿಚ್ಚ ಸುದೀಪ್