ಪುತ್ರ ಆರ್ಯನ್​ ವಿವಾದದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ ಶಾರುಖ್​: ಫೋಟೋ ವೈರಲ್​

ಪುತ್ರ ಆರ್ಯನ್​ ವಿವಾದದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ ಶಾರುಖ್​: ಫೋಟೋ ವೈರಲ್​
ಶಾರುಖ್​ ಖಾನ್

Shah Rukh Khan: ಮಗ ಆರ್ಯನ್​ ಖಾನ್​ನ ವಿವಾದದಿಂದ ಬೇಸತ್ತಿದ್ದ ಶಾರುಖ್​ ಖಾನ್​ ಅವರು ಹಲವು ದಿನಗಳ ಬಳಿಕ ಕ್ಯಾಮೆರಾ ಎದುರಿಸಿದ್ದಾರೆ. ಹಾಗಂತ ಅವರು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿಲ್ಲ.

TV9kannada Web Team

| Edited By: Madan Kumar

Dec 23, 2021 | 11:31 AM

ನಟ ಶಾರುಖ್​ ಖಾನ್ (Shah Rukh Khan)​ ಅವರು ಬಹುಬೇಡಿಕೆಯ ಕಲಾವಿದ. ಅವರು ಒಂದು ದಿನ ಶೂಟಿಂಗ್​ಗೆ ಬಂದರೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತವೆ. ಅಂಥ ಸ್ಟಾರ್​ ಕಲಾವಿದ ತಿಂಗಳುಗಟ್ಟಲೆ ಮನೆಯಲ್ಲಿ ಕೂರುವಂತಾಗಿದ್ದು ವಿಪರ್ಯಾಸ. ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ (Aryan Khan Drugs Case) ವಿವಾದದಲ್ಲಿ ಸಿಲುಕಿಕೊಂಡ ಬಳಿಕ ಶಾರುಖ್​ ಚಾರ್ಮ್​ ಮಂಕಾಯಿತು. ಅವರು ಒಪ್ಪಿಕೊಂಡಿದ್ದ ಹಲವು ಕೆಲಸಗಳು ಅರ್ಧಕ್ಕೆ ನಿಂತಿದ್ದವು. ಆದರೆ ಈಗ ಆ ಎಲ್ಲ ಕಹಿ ಘಟನೆಗಳನ್ನು ಬದಿಗಿರಿಸಿ ಅವರು ಮತ್ತೆ ಕೆಲಸದತ್ತ ಗಮನ ಹರಿಸಲು ಆರಂಭಿಸಿದ್ದಾರೆ. ಬಹುದಿನಗಳ ಬಳಿಕ ಅವರು ಶೂಟಿಂಗ್​ಗೆ ಮರಳಿದ್ದಾರೆ. ಚಿತ್ರೀಕರಣದ ಸೆಟ್​ನಲ್ಲಿ ಅವರು ಕಾಣಿಸಿಕೊಂಡ ಫೋಟೋ ವೈರಲ್​ ಆಗುತ್ತಿದೆ. ಹೊಸ ಗೆಟಪ್​ನಲ್ಲಿ ಶಾರುಖ್​ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಮಗನ ವಿವಾದದಿಂದ ಬೇಸತ್ತಿದ್ದ ಶಾರುಖ್​ ಖಾನ್​ ಅವರು ಹಲವು ದಿನಗಳ ಬಳಿಕ ಕ್ಯಾಮೆರಾ ಎದುರಿಸಿದ್ದಾರೆ. ಹಾಗಂತ ಅವರು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿಲ್ಲ. ಬದಲಿಗೆ ಜಾಹೀರಾತೊಂದರ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಉದ್ದ ಕೂದಲು ಬಿಟ್ಟು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂವರೆ ತಿಂಗಳ ಗ್ಯಾಪ್​ ಬಳಿಕ ಶಾರುಖ್​ ಶೂಟಿಂಗ್​ಗೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಸೆಕ್ಯುರಿಟಿ ಒದಗಿಸಲಾಗಿತ್ತು.

ಬಹುನಿರೀಕ್ಷಿತ ‘ಪಠಾಣ್’​ ಸಿನಿಮಾದಲ್ಲೂ ಶಾರುಖ್​ ಖಾನ್​ ನಟಿಸುತ್ತಿದ್ದಾರೆ. ಈ ರೀತಿ ಉದ್ದ ಕೂದಲು ಬಿಟ್ಟಿರುವುದು ಆ ಚಿತ್ರಕ್ಕಾಗಿಯೇ ಇರಬಹುದಾ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸದ್ಯ ಈ ಫೋಟೋಗಳು ವೈರಲ್​ ಆಗಿವೆ. ಅನೇಕ ದಿನಗಳ ಬಳಿಕ ತಮ್ಮ ನೆಚ್ಚಿನ ನಟ ಕೆಲಸಕ್ಕೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾದ ಸೋಲಿನ ಬಳಿಕ ಶಾರುಖ್​ ಖಾನ್​ ಅವರು ಸಂಪೂರ್ಣ ಉತ್ಸಾಹ ಕಳೆದುಕೊಂಡಿದ್ದರು. ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ತುಂಬ ತಡ ಮಾಡಿದ್ದರು. ಇನ್ನೇನು ಅವರು ‘ಪಠಾಣ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು ಎಂಬಷ್ಟರಲ್ಲಿ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಶುರುವಾಗಿತ್ತು. ಅಂತೂ ಆ ಎಲ್ಲ ತಾಪತ್ರಯಗಳನ್ನು ಬದಿಗಿಟ್ಟು ಈಗ ಶಾರುಖ್​ ಖಾನ್​ ಮತ್ತೆ ಟ್ರ್ಯಾಕ್​ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​

Follow us on

Related Stories

Most Read Stories

Click on your DTH Provider to Add TV9 Kannada