‘ಪ್ರೀತಿ ಹಾಗೆಯೇ ಉಳಿದಿದೆ’; ಬ್ರೇಕಪ್ ವಿಚಾರ ಅಧಿಕೃತ ಮಾಡಿದ ನಟಿ ಸುಷ್ಮಿತಾ ಸೇನ್
ಸುಷ್ಮಿತಾ ಅವರಿಗೆ ರೋಹ್ಮನ್ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದರು. ಈ ಮೆಸೇಜ್ ನೋಡಿದ್ದ ಸುಷ್ಮಿತಾ ಅದನ್ನು ಓಪನ್ ಮಾಡಿ ಓದಿದ್ದರು. ಅಲ್ಲದೆ, ಅದಕ್ಕೆ ಉತ್ತರಿಸಿದ್ದರು. ಹೀಗೆ ಇವರ ಫ್ರೆಂಡ್ಶಿಪ್ ಫ್ರಾರಂಭವಾಯಿತು.
ನಟಿ ಸುಷ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಇವೆಂಟ್ಗಳಲ್ಲಿ ಇಬ್ಬರೂ ಮಿಂಚಿದ್ದರು. ಈ ಜೋಡಿಯನ್ನು ಕಂಡು ಖುಷಿಪಟ್ಟವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಇಬ್ಬರೂ ಬೇರೆಯಾಗಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದನ್ನು ಸುಷ್ಮಿತಾ ಅವರು ಖಚಿತಪಡಿಸಿದ್ದಾರೆ. ತಾವಿಬ್ಬರೂ ಬೇರೆಯಾಗಿರುವ ಬಗ್ಗೆ ಅವರು ಪೋಸ್ಟ್ ಹಾಕಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಸುಷ್ಮಿತಾ ಸೇನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬ್ರೇಕಪ್ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ರೋಹ್ಮನ್ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, ‘ನಾವು ಸ್ನೇಹಿತರಾಗಿ ಪರಿಚಯರಾದೆವು. ಈಗ ಮತ್ತೆ ಸ್ನೇಹಿತರಾಗಿದ್ದೇವೆ. ಈ ಸಂಬಂಧವು ದೀರ್ಘವಾಗಿತ್ತು. ಪ್ರೀತಿ ಹಾಗೆಯೇ ಉಳಿದಿದೆ’ ಎಂದು ಬರೆದುಕೊಂಡಿದ್ದಾರೆ ಸುಷ್ಮಿತಾ. ಈ ಮೂಲಕ ಇಬ್ಬರ ನಡುವಣ ಸಂಬಂಧ ಮುರಿದು ಬಿದ್ದಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
View this post on Instagram
ಸುಷ್ಮಿತಾ ಅವರಿಗೆ ರೋಹ್ಮನ್ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದರು. ಈ ಮೆಸೇಜ್ ನೋಡಿದ್ದ ಸುಷ್ಮಿತಾ ಅದನ್ನು ಓಪನ್ ಮಾಡಿ ಓದಿದ್ದರು. ಅಲ್ಲದೆ, ಅದಕ್ಕೆ ಉತ್ತರಿಸಿದ್ದರು. ಹೀಗೆ ಇವರ ಫ್ರೆಂಡ್ಶಿಪ್ ಫ್ರಾರಂಭವಾಯಿತು. ನಂತರ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಸುಷ್ಮಿತಾ ಅವರ ಮಕ್ಕಳಾದ ರೆನೀ ಮತ್ತು ಅಲಿಸಾ ಅವರು ರೋಹ್ಮನ್ ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ರೆನೀ ಮತ್ತು ಅಲಿಸಾ ಇಬ್ಬರೂ ಸುಷ್ಮಿತಾ ಅವರು ದತ್ತು ಪಡೆದ ಮಕ್ಕಳಾಗಿದ್ದಾರೆ. ಅಚ್ಚರಿ ಎಂದರೆ ಸುಷ್ಮಿತಾ ವಯಸ್ಸು 46 ಹಾಗೂ ರೋಹ್ಮನ್ ವಯಸ್ಸು ಕೇವಲ 30.
1996ರಲ್ಲಿ ತೆರೆಗೆ ಬಂದ ‘ದಸ್ತಕ್’ ಚಿತ್ರದ ಮೂಲಕ ಸುಷ್ಮಿತಾ ಅವರು ಬಣ್ಣದ ಬದುಕು ಆರಂಭಿಸಿದರು. ತಮ್ಮ ವೃತ್ತಿ ಜೀವನದ ಬಹುತೇಕ ಸಮಯವನ್ನು ಅವರು ಹಿಂದಿ ಚಿತ್ರರಂಗದಲ್ಲೇ ಕಳೆದಿದ್ದಾರೆ. 2015ರ ನಂತರದಲ್ಲಿ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲ. 2020ರಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ‘ಆರ್ಯ’ ವೆಬ್ ಸೀರಿಸ್ ಮೂಲಕ ಮತ್ತೆ ಕಂಬ್ಯಾಕ್ ಮಾಡಿದರು. ಈ ವರ್ಷ ಅವರ ನಟನೆಯ ‘ಆರ್ಯ 2’ ವೆಬ್ ಸರಣಿ ರಿಲೀಸ್ ಆಗಿದೆ.
ಇದನ್ನೂ ಓದಿ: 48ರ ಪ್ರಾಯದಲ್ಲೂ ಗ್ಲಾಮರ್ನಿಂದ ಸೆಳೆಯುವ ಸುಂದರಿ ಮಲೈಕಾ ಅರೋರಾ ಫಿಟ್ನೆಸ್ಗೆ ಮನಸೋಲದವರಿಲ್ಲ
ದಶಕದ ಬಳಿಕ ಮರಳಿದ ಮಾಜಿ ವಿಶ್ವಸುಂದರಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸುಷ್ಮಿತಾ