ದಶಕದ ಬಳಿಕ ಮರಳಿದ ಮಾಜಿ ವಿಶ್ವಸುಂದರಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸುಷ್ಮಿತಾ
ಬಾಲಿವುಡ್ನ ಪ್ರತಿಭಾನ್ವಿತಾ ನಟಿ ಸುಷ್ಮಿತಾ ಸೇನ್. ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಗ್ಲ್ಯಾಮರಸ್ ಗೊಂಬೆ ಅಂತಲೇ ಕರೆಸಿಕೊಳ್ತಿದ್ದ ಸುಷ್ಮಿತಾ ಸೇನ್ ಇದ್ದಕ್ಕಿದ್ದ ಹಾಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದನ್ನ ಕಡಿಮೆ ಮಾಡಿ ಬಿಟ್ರು. ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಳ್ಳಿ ತೆರೆ ಮೇಲೆ ಸುಷ್ಮಿತಾರನ್ನ ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಸುಷ್ಮಿತಾ. ಅದುವೇ ಸುಷ್ಮಿತಾ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸ್ತಾರೆ ಅನ್ನೋದು. ಹೌದು, ಸುಷ್ಮಿತಾ ಸೇನ್ ಸಿನಿಮಾರಂಗದಲ್ಲಿ ತಮ್ಮ ಎರಡನೇ ಇನ್ನಿಂಗ್ ಶುರುಮಾಡೋಕೆ ಸಜ್ಜಾಗಿದ್ದಾರೆ. ತಾವು ಸಿನಿಮಾರಂಗಕ್ಕೆ ಮರಳುತ್ತಿರೋ […]
ಬಾಲಿವುಡ್ನ ಪ್ರತಿಭಾನ್ವಿತಾ ನಟಿ ಸುಷ್ಮಿತಾ ಸೇನ್. ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಗ್ಲ್ಯಾಮರಸ್ ಗೊಂಬೆ ಅಂತಲೇ ಕರೆಸಿಕೊಳ್ತಿದ್ದ ಸುಷ್ಮಿತಾ ಸೇನ್ ಇದ್ದಕ್ಕಿದ್ದ ಹಾಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದನ್ನ ಕಡಿಮೆ ಮಾಡಿ ಬಿಟ್ರು.
ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಳ್ಳಿ ತೆರೆ ಮೇಲೆ ಸುಷ್ಮಿತಾರನ್ನ ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಸುಷ್ಮಿತಾ. ಅದುವೇ ಸುಷ್ಮಿತಾ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸ್ತಾರೆ ಅನ್ನೋದು. ಹೌದು, ಸುಷ್ಮಿತಾ ಸೇನ್ ಸಿನಿಮಾರಂಗದಲ್ಲಿ ತಮ್ಮ ಎರಡನೇ ಇನ್ನಿಂಗ್ ಶುರುಮಾಡೋಕೆ ಸಜ್ಜಾಗಿದ್ದಾರೆ. ತಾವು ಸಿನಿಮಾರಂಗಕ್ಕೆ ಮರಳುತ್ತಿರೋ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೊಟೋವೊಂದನ್ನ ಅಪ್ಲೋಡ್ ಮಾಡಿರೋ ನಟಿ ಸುಷ್ಮಿತಾ, ತಾನು ಅಭಿನಯಕ್ಕೆ ಮರಳುತ್ತಿರೋ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಸಿನಿಮಾರಂಗಕ್ಕೆ ಕಮ್ಬ್ಯಾಕ್ ಮಾಡ್ತಿರೋದು ಕೇವಲ ಅಭಿಮಾನಿಗಳಿಗಾಗಿ ಅಂತಲೂ ಬರೆದುಕೊಂಡಿದ್ದಾರೆ.
ವಿಶ್ವಸುಂದರಿ ಕಿರೀಟವನ್ನ ಮುಡಿಗೇರಿಸಿಕೊಂಡ ಬಳಿಕ, ಬಾಲಿವುಡ್ನಲ್ಲಿ ಬಿವಿ ನಂಬರ್1, ಮೈ ಹೂನಾ, ಮೈನೇ ಪ್ಯಾರ್ ಕಿಯಾದಂತಹ ಸಾಲು ಸಾಲು ಹಿಟ್ ಸಿನಿಮಾಗಳನ್ನ ಸುಷ್ಮಿತಾ ಸೇನ್ ಕೊಟ್ಟಿದ್ದರು. ಆದ್ರೆ, 2010ರಲ್ಲಿ ತೆರೆಕಂಡ ನೋ ಪ್ರಾಬ್ಲಂ ಸಿನಿಮಾದ ನಂತ್ರ, ಸುಷ್ಮಿತಾ ಮತ್ತೆ ನಾಯಕಿ ಆಗಿ ಬಿಟೌನ್ನಲ್ಲಿ ಕಾಣಿಸಿಕೊಳ್ಳಲಿಲ್ಲ.
10 ವರ್ಷಗಳ ಬಳಿಕ ಸುಷ್ಮಿತಾ ಸೆನ್ ಕಮ್ಬ್ಯಾಕ್: ಈಗ ಮತ್ತೆ ಸಿನಿಮಾರಂಗಕ್ಕೆ ರೀಎಂಟ್ರಿ ಕೊಡ್ತಿರೋ ವಿಚಾರವನ್ನ ಹಂಚಿಕೊಂಡಿದ್ದಾರೆ. ಇದ್ರೊಂದಿಗೆ ಸುಷ್ಮಿತಾ ಕಮ್ಬ್ಯಾಕ್ ಸಿನಿಮಾ ಯಾವುದು. ಸುಷ್ಮಿತಾ ಪಾತ್ರ ಹೇಗಿರಲಿದೆ. ಸಿನಿಮಾ ಯಾವ ಜಾನರ್ಗೆ ಸೇರುತ್ತೇ ಅನ್ನೋ ಬಗ್ಗೆ ಬಾಲಿವುಡ್ನಲ್ಲಿ ಚರ್ಚೆ ಆಗ್ತಿದೆ. 10 ವರ್ಷಗಳ ಬಳಿಕ ಮತ್ತೇ ಸಿನಿಮಾ ಮಾಡ್ತಿರೊದ್ರಿಂದ ಸುಷ್ಮಿತಾ ಸೆನ್ ಕಮ್ಬ್ಯಾಕ್ ಚಿತ್ರದ ಮೆಲೆ ನಿರೀಕ್ಷೆ ಹೆಚ್ಚಿಸಿದೆ.
Published On - 11:58 am, Tue, 10 December 19