Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​

Aryan Khan Birthday: ಆರ್ಯನ್​ ಖಾನ್​ ಅವರು ಶುಕ್ರವಾರ (ನ.12) ಬೆಳಗ್ಗೆ ಎನ್​ಸಿಬಿ ಕಚೇರಿಗೆ ಭೇಟಿ ನೀಡಿ ಸಹಿ ಹಾಕಿದ್ದಾರೆ. ಬಾಂಬೆ ಹೈಕೋರ್ಟ್​ನ ಆದೇಶದಂತೆ ಅವರು ಈ ರೀತಿ ಸಹಿ ಮಾಡುವುದು ಕಡ್ಡಾಯ. ಬಳಿಕ ಅವರು ವಿಶೇಷ ತನಿಖಾ ತಂಡದ ಎದುರು ಹಾಜರಾದರು.

Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​
ಆರ್ಯನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 13, 2021 | 9:57 AM

ಶಾರುಖ್​ ಖಾನ್​ (Shah Rukh Khan) ಪುತ್ರ ಆರ್ಯನ್​ ಖಾನ್​ (Aryan Khan) ಅವರಿಗೆ ಇಂದು (ನ.13) ಜನ್ಮದಿನದ ಸಂಭ್ರಮ. 24ನೇ ವರ್ಷಕ್ಕೆ ಅವರು ಕಾಲಿಟ್ಟಿದ್ದು ಆಪ್ತರೆಲ್ಲ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಪ್ರತಿ ವರ್ಷ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಅದ್ದೂರಿಯಾಗಿ ಆರ್ಯನ್​ ಖಾನ್​ ಬರ್ತ್​ಡೇ (Aryan Khan Birthday) ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಬದಲಾಗಿದೆ. ಡ್ರಗ್ಸ್​ ಕೇಸ್​ನಲ್ಲಿ ಅವರು ಸಿಕ್ಕಿಹಾಕಿಕೊಂಡಿದ್ದು, ಎನ್​ಸಿಬಿ (NCB) ಅಧಿಕಾರಿಗಳಿಂದ ವಿಚಾರಣೆಗೆ ಒಳಪಡುತ್ತಿದ್ದಾರೆ. ಅಲ್ಲದೇ, ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಹೆಚ್ಚಾಗಿ ಯಾರನ್ನೂ ಅವರು ಭೇಟಿ ಮಾಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಈ ವರ್ಷದ ಬರ್ತ್​ಡೇ ಅವರಿಗೆ ವಿಶೇಷವಾಗಿಲ್ಲ. ಅಚ್ಚರಿ ಎಂದರೆ ಹುಟ್ಟುಹಬ್ಬದ ದಿನ ಕೂಡ ಅವರು ಎನ್​ಸಿಬಿ ಕಚೇರಿಯಲ್ಲಿ ಕಾಲ ಕಳೆಯುವಂತಾಗಿದೆ.

ಶುಕ್ರವಾರ (ನ.12) ಬೆಳಗ್ಗೆ ಆರ್ಯನ್​ ಖಾನ್​ ಅವರು ಎನ್​ಸಿಬಿ ಕಚೇರಿಗೆ ಭೇಟಿ ನೀಡಿ ಸಹಿ ಹಾಕಿದ್ದಾರೆ. ಬಾಂಬೆ ಹೈಕೋರ್ಟ್​ನ ಆದೇಶದಂತೆ ಅವರು ಈ ರೀತಿ ಸಹಿ ಮಾಡುವುದು ಕಡ್ಡಾಯ. ಬಳಿಕ ಅವರು ವಿಶೇಷ ತನಿಖಾ ತಂಡದ ಎದುರು ಹಾಜರಾದರು. ಎನ್​ಸಿಬಿ ಡೆಪ್ಯೂಟಿ ಡೈರೆಕ್ಟರ್​ ಜನರಲ್​ ಸಂಜಯ್​ ಕುಮಾರ್​ ಸಿಂಗ್​ ಅವರು ಆರ್ಯನ್​ ಖಾನ್​ರನ್ನು ವಿಚಾರಣೆಗೆ ಒಳಪಡಿಸಿದರು. ಶುಕ್ರವಾರ ಮಧ್ಯರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು. ಅಂದರೆ, ಮನೆಯಲ್ಲಿ ಆಪ್ತರ ಜೊತೆ ಬರ್ತ್​ಡೇ ಸೆಲೆಬ್ರೇಟ್​ ಮಾಡಿಕೊಳ್ಳಬೇಕಾದ ಹೊತ್ತಿನಲ್ಲಿ ಆರ್ಯನ್​ ಖಾನ್​ ಅವರು ಎನ್​ಸಿಬಿ ಅಧಿಕಾರಿಗಳ ಜೊತೆ ಕಾಲ ಕಳೆಯುವಂತಾಯಿತು ಎಂದು ವರದಿ ಆಗಿದೆ.

ಕಳೆದ 10 ವರ್ಷಗಳಿಂದಲೂ ಶಾರುಖ್​ ಖಾನ್​ಗೆ ಬಾಡಿಗಾರ್ಡ್​ ಆಗಿ ರವಿ ಸಿಂಗ್​ ಕೆಲಸ ಮಾಡುತ್ತಿದ್ದಾರೆ. ಶಾರುಖ್​ ಎಲ್ಲಿಯೇ ಹೋದರು ಅವರ ಜತೆ ರವಿ ಇರುತ್ತಾರೆ. ಎಷ್ಟೇ ದೊಡ್ಡ ಗುಂಪಿದ್ದರೂ ಶಾರುಖ್​ ಖಾನ್​ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ರವಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈಗ ಆರ್ಯನ್​ ಜತೆ ರವಿ ಸಿಂಗ್​ ಅವರನ್ನು ಬಿಟ್ಟು, ತಾವು ಹೊಸ ಬಾಡಿಗಾರ್ಡ್ ಹುಡುಕಲು ಶಾರುಖ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಶಾರುಖ್​ ಖಾನ್ ಅವರು ರವಿಗೆ​ ವರ್ಷಕ್ಕೆ 2.7 ಕೋಟಿ ರೂ. ಸಂಬಳ ನೀಡುತ್ತಾರೆ.

ಇದನ್ನೂ ಓದಿ:

‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ

Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

Published On - 9:55 am, Sat, 13 November 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ