‘ತಂಡದಲ್ಲಿ ಒಬ್ಬರು ಬಂದಿಲ್ಲಾ ಅನ್ನೋ ವಿಚಾರವನ್ನು ಇಲ್ಲಿಗೆ ಬಿಡೋಣ’; ಅಜಯ್​ ಬಗ್ಗೆ ಗುರು ದೇಶಪಾಂಡೆ ಮಾತು

ನಟ ಅಜಯ್​ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇಂದು (ಡಿಸೆಂಬರ್ 25) ಸಿನಿಮಾದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಗುರು ದೇಶಪಾಂಡೆ ಅವರು ಈ ಬಗ್ಗೆ ಮಾತನಾಡಿದರು.

TV9kannada Web Team

| Edited By: Rajesh Duggumane

Dec 25, 2021 | 7:41 PM

‘ಲವ್​ ಯೂ ರಚ್ಚು’ ಸಿನಿಮಾ ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಹಲವು ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡದಲ್ಲಿ ವೈಮನಸ್ಸು ಮೂಡಿದೆ. ನಟ ಅಜಯ್​ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇಂದು (ಡಿಸೆಂಬರ್ 25) ಸಿನಿಮಾದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಗುರು ದೇಶಪಾಂಡೆ ಅವರು ಈ ಬಗ್ಗೆ ಮಾತನಾಡಿದರು. ‘ನಾನು ಮತ್ತು ಅಜಯ್​ ರಾವ್​ ಕಿತ್ತಾಡೋದೇ ಸಿನಿಮಾ ಅಲ್ಲ. ಇದು ಪ್ರಮೋಷನ್​ ಗಿಮಿಕ್​ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಇದು ಆ ರೀತಿ ಅಲ್ಲ. ಸಿನಿಮಾ ಬಗ್ಗೆ ಜನರಿಗೆ ಹೆಚ್ಚು ತಲುಪಿಸಬೇಕಿದೆ ತಂಡದಲ್ಲಿ ಒಬ್ಬರು ಬಂದಿಲ್ಲಾ ಅನ್ನೋ ವಿಚಾರವನ್ನು ಇಲ್ಲಿಗೆ ಬಿಡೋಣ’ ಎಂದಿದ್ದಾರೆ.

ಇದನ್ನೂ ಓದಿ: ‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್​ ರಾವ್​-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು

‘ಲವ್​ ಯೂ ರಚ್ಚು’ ಕೇಸ್​; ಬಿಡದಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಎದುರಿಸಿದ ನಟ ಅಜಯ್​ ರಾವ್​

Follow us on

Click on your DTH Provider to Add TV9 Kannada