‘ನಾನು ಭಯಸ್ತ ಅಲ್ಲ, ಮಾಗಡಿ ರೋಡ್​ನಲ್ಲಿ ಪೋಲಿ ಆಟಗಳನ್ನ ಆಡಿ ಬಂದವನು’; ಹಂಸಲೇಖ

ಸಾಹಿತಿ ಎಸ್​.ಜಿ.ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೂಡ ಭಾಗವಹಿಸಿದ್ದರು.

TV9kannada Web Team

| Edited By: Rajesh Duggumane

Dec 26, 2021 | 4:27 PM

ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ ಹಂಸಲೇಖ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಈ ಹೇಳಿಕೆಗೆ ಅನೇಕರು ಆಕ್ರೋಶ ಹೊರ ಹಾಕಿದ್ದರು. ಕೆಲವರು ಹಂಸಲೇಖ ಅವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಈ ಕಾರಣಕ್ಕೆ ಅವರ ಮನೆಗೆ ಪೊಲೀಸ್​ ಭದ್ರತೆ ಒದಗಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಹಂಸಲೇಖ ಮೌನ ವಹಿಸಿದ್ದೇ ಹೆಚ್ಚು. ತಾವು ಭಯ ಪಟ್ಟುಕೊಂಡು ಬದುಕುವವರಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ‘ನಾನು ಭಯಸ್ತ ಅಲ್ಲ. ಮಾಗಡಿ ರೋಡ್​ನಲ್ಲಿ ಪೋಲಿ ಆಟಗಳನ್ನ ಆಡಿ ಬಂದವನು ನಾನು. ಅದೊಂದು ದೊಡ್ಡ ಚರಿತ್ರೆಯೇ ಇದೆ’ ಎಂದಿದ್ದಾರೆ ಹಂಸಲೇಖ. ಸಾಹಿತಿ ಎಸ್​.ಜಿ.ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: Hamsalekha: ‘ಧರ್ಮೋಕ್ರಸಿ ತೊಲಗಲಿ, ಡೆಮಾಕ್ರಸಿ ಜಯಿಸಲಿ, ಸಿದ್ದರಾಮಯ್ಯ ಸಿಎಂ ಆಗಲಿ’: ಸಂಗೀತ ನಿರ್ದೇಶಕ ಹಂಸಲೇಖ ಆಶಯ

Follow us on

Click on your DTH Provider to Add TV9 Kannada