ಮೈಸೂರಿನ ಕಲಾಮಂದಿರದಲ್ಲಿ ರೈತ ದಿನಾಚರಣೆಯ ಸಂಭ್ರಮ; ಸಿಎಂ ಬೊಮ್ಮಾಯಿಗೆ ಹಸುವಿನ ಕಲಾಕೃತಿ ಕೊಟ್ಟ ರೈತರು
ರೈತರಿಗೆ ಮಳೆ ಬೆಳೆ ಬೆಲೆ ಬಗ್ಗೆ ಯೋಚಿಸುವ ಬದುಕು ಇದೆ. ಇದರ ನಡುವೆ ಸ್ಥಿರತೆ ಕೊಡುವ ಕೆಲಸ ಆಗಬೇಕು. ನಮ್ಮ ಯೋಜನೆ, ಯೋಚನೆ ರೈತನ ಕಡೆಗೇ ಇರಬೇಕು. ರೈತನ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಕೆಲಸವಾಗಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರು: ಕರ್ನಾಟಕ ರಾಜ್ಯದಲ್ಲಿ ಕೃಷಿಗೆ ಹೊಸ ನಿರ್ದೇಶನಾಲಯ ಮಾಡುವ ಚಿಂತನೆ ಇದೆ ಎಂದು ಮೈಸೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರೈತರ ಮಕ್ಕಳ ಯೋಜನೆ ಪ್ರಸ್ತಾಪ ಮಾಡಿದ ಬೊಮ್ಮಾಯಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ವಿಸ್ತರಣೆ ಮಾಡ್ತೇವೆ ಎಂದು ಪ್ರೌಢಶಾಲೆ ಹೆಣ್ಣು ಮಕ್ಕಳಿಗೆ ವಿಸ್ತರಣೆ ಮಾಡುವ ಭರವಸೆ ನೀಡಿದ್ದಾರೆ. ರೈತರ ಮಾತ ನ್ನು ಗೌರವದಿಂದ ಕೇಳುವ ಸರ್ಕಾರ ಇದಾಗಿದೆ. ರೈತರಿಗೆ 2 ಪಟ್ಟು ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಒಂದು ತಿಂಗಳಲ್ಲಿ ರೈತರ ಖಾತೆಗೆ ನೇರವಾಗಿ ನೀಡಲಾಗುತ್ತಿದೆ. ಸರ್ಕಾರ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೆ. ರೈತರ ಧ್ವನಿಗೆ ಬಲ ಕೊಡಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಹಾಯ ಸಹಕಾರ ಸದಾ ಇರಲಿ ಎಂದು ರೈತ ಸಮಾವೇಶದಲ್ಲಿ ಸಿಎಂ ಬಸವಾರಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ರಾಜಕೀಯ ಪಕ್ಷಗಳು ಒಂದು ಕಟು ಸತ್ಯ ತಿಳಿದುಕೊಳ್ಳಬೇಕು. ಎಲ್ಲ ಪಕ್ಷಗಳು ರೈತರ ಪರವಾಗಿವೆ ಅನ್ನೋದನ್ನ ಅರಿಯಬೇಕು. ಆಹಾರ ಉತ್ಪಾದನೆ ಮಾಡಿದ ರೈತನ ಬಗ್ಗೆ ಗಮನವೇ ಇಲ್ಲ. ಆಹಾರ ಉತ್ಪಾದನೆ ಮಾಡಿದವನ ಜೇಬು ಖಾಲಿಯಾಗಿದೆ. ರೈತನದ್ದು ಒಂದು ಕಡೆ ಅನಿಶ್ಚಿತತೆಯ ಬದುಕು. ರೈತರಿಗೆ ಮಳೆ ಬೆಳೆ ಬೆಲೆ ಬಗ್ಗೆ ಯೋಚಿಸುವ ಬದುಕು ಇದೆ. ಇದರ ನಡುವೆ ಸ್ಥಿರತೆ ಕೊಡುವ ಕೆಲಸ ಆಗಬೇಕು. ನಮ್ಮ ಯೋಜನೆ, ಯೋಚನೆ ರೈತನ ಕಡೆಗೇ ಇರಬೇಕು. ರೈತನ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಕೆಲಸವಾಗಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ:
ರೈತ ದಿನದಂದು ಅನ್ನದಾತನಿಗೊಂದು ಸಲಾಂ; ಕೋಲಾರದಲ್ಲಿ ಹಬ್ಬದ ವಾತಾವರಣ, ನೇಗಿಲ ಯೋಗಿಯ ಪರಿಶ್ರಮ ಕೊಂಡಾಡಿದ ಜನ
ರೈತ ದಿನ: ಜಮೀನಿನಲ್ಲಿ ಕೆಲ್ಸ ಮಾಡ್ತಿದ್ದ ಅನ್ನದಾತನ ಸನ್ಮಾನಿಸಿ, ಕಾಲಿಗೆ ನಮಿಸಿದ ಸಚಿವ