ರೈತ ದಿನ: ಜಮೀನಿನಲ್ಲಿ ಕೆಲ್ಸ ಮಾಡ್ತಿದ್ದ ಅನ್ನದಾತನ ಸನ್ಮಾನಿಸಿ, ಕಾಲಿಗೆ ನಮಿಸಿದ ಸಚಿವ
ಹಾವೇರಿ: ಇಂದು ರೈತ ದಿನಾಚರಣೆ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸನ್ಮಾನಿಸಿದ್ದಾರೆ. ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ ಶಾಲೆಗೆ ಬರುವಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನ ಕಂಡಿದ್ದಾರೆ. ಆಗ ಸಚಿವ ಸುರೇಶ್ ಕುಮಾರ್ ಅನ್ನದಾತನಿಗೆ ಶಾಲು ಹೊದಿಸಿ ಸನ್ಮಾನಿಸಿ ಕಾಲಿಗೆ ನಮಿಸಿದ್ದಾರೆ. ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಹೊಲದಲ್ಲಿ ತನ್ನ ಕಾಯಕದಲ್ಲಿ ತೊಡಗಿದ್ದ ಈ ಅನ್ನದಾತ ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ […]
ಹಾವೇರಿ: ಇಂದು ರೈತ ದಿನಾಚರಣೆ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸನ್ಮಾನಿಸಿದ್ದಾರೆ. ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ ಶಾಲೆಗೆ ಬರುವಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನ ಕಂಡಿದ್ದಾರೆ. ಆಗ ಸಚಿವ ಸುರೇಶ್ ಕುಮಾರ್ ಅನ್ನದಾತನಿಗೆ ಶಾಲು ಹೊದಿಸಿ ಸನ್ಮಾನಿಸಿ ಕಾಲಿಗೆ ನಮಿಸಿದ್ದಾರೆ.
ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಹೊಲದಲ್ಲಿ ತನ್ನ ಕಾಯಕದಲ್ಲಿ ತೊಡಗಿದ್ದ ಈ ಅನ್ನದಾತ ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿಯವರಿಗೆ ರೈತರ ದಿನದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ ಎಂದು ಫೇಸ್ಬುಕ್ನಲ್ಲಿ ಸಚಿವರು ಬರೆದುಕೊಂಡಿದ್ದಾರೆ. ಅನ್ನದಾತರನ್ನ ಶಾಲು ಹೊದಿಸಿ ಸನ್ಮಾನಿಸಿ ಕಾಲಿಗೆ ನಮಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.facebook.com/nimmasuresh/posts/3129515223742468
Published On - 1:30 pm, Mon, 23 December 19