ಯಾರೂ ಕಲ್ಲು ತೂರಿಲ್ಲ, ಬೆಂಕಿ ಕೂಡ ಹಾಕಿಲ್ಲ, ಆದ್ರೂ ಗೋಲಿಬಾರ್ ಹೇಗೆ ಮಾಡಿದಿರಿ? ಸಿದ್ದು ಪ್ರಶ್ನೆ
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಅಂದು ಸಿದ್ದರಾಮಯ್ಯ ಮಂಗಳೂರು ಭೇಟಿಗೆ ಪೊಲೀಸ್ ಕಮಿಷನರ್ ನಿರಾಕರಿಸಿದ್ದರು. ಹೀಗಾಗಿ ಇಂದು ಮಂಗಳೂರಿಗೆ ತೆರಳಿ ಮೃತಪಟ್ಟವರ ಕುಟುಂಬಸ್ಥರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಮೃತರ ಕುಟುಂಬದವರಿಗೆ ಚೆಕ್ ನೀಡಿದ ಸಿದ್ದರಾಮಯ್ಯ ಇದೇ ವೇಳೆ ಮೃತರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ವತಿಯಿಂದ ಪರಿಹಾರದ ಚೆಕ್ […]
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಅಂದು ಸಿದ್ದರಾಮಯ್ಯ ಮಂಗಳೂರು ಭೇಟಿಗೆ ಪೊಲೀಸ್ ಕಮಿಷನರ್ ನಿರಾಕರಿಸಿದ್ದರು. ಹೀಗಾಗಿ ಇಂದು ಮಂಗಳೂರಿಗೆ ತೆರಳಿ ಮೃತಪಟ್ಟವರ ಕುಟುಂಬಸ್ಥರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.
ಮೃತರ ಕುಟುಂಬದವರಿಗೆ ಚೆಕ್ ನೀಡಿದ ಸಿದ್ದರಾಮಯ್ಯ ಇದೇ ವೇಳೆ ಮೃತರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ವತಿಯಿಂದ ಪರಿಹಾರದ ಚೆಕ್ ವಿತರಿಸಿದ್ದಾರೆ. ನೌಶೀನ್, ಜಲೀಲ್ ಕುಟುಂಬಕ್ಕೆ ಸಿದ್ದರಾಮಯ್ಯ ತಲಾ 7.5 ಲಕ್ಷದ ಚೆಕ್ ನೀಡಿ ಸಾಂತ್ವನ ಹೇಳಿದ್ದಾರೆ. ವೈಯಕ್ತಿಕವಾಗಿ ತಲಾ 5 ಲಕ್ಷ ರೂ ಮತ್ತು ಜಿಲ್ಲಾ ಕಾಂಗ್ರೆಸ್ ನಿಂದ 2.5 ಲಕ್ಷ ರೂ ಪರಿಹಾರ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ಯಾರೊಬ್ಬರೂ ಒಂದು ಅಂಗಡಿಗೆ ಕಲ್ಲು ಹೊಡೆದಿಲ್ಲ. ಬೆಂಕಿ ಕೂಡ ಹಾಕಿಲ್ಲ: ನಾನು ಹೋಗಿ ನೋಡಿಕೊಂಡು ಬಂದೆ. ಯಾರೊಬ್ಬರೂ ಒಂದು ಅಂಗಡಿಗೆ ಕಲ್ಲು ಹೊಡೆದಿಲ್ಲ. ಒಂದು ಕಡೆ ಬೆಂಕಿ ಕೂಡ ಹಾಕಿಲ್ಲ. ಆಸ್ಪತ್ರೆ ಐಸಿಯುಗೆ ಹೋಗಿ ಒದ್ದು ಟೀಯರ್ ಗ್ಯಾಸ್ ಹಾಕಿದ್ದಾರೆ. ನಾವು ಪೊಲೀಸ್ ರಾಜ್ಯದಲ್ಲಿದ್ದೀವಾ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ನಾನು ಸ್ಟ್ರಾಂಗ್ ಆಗಿ ಡಿಮ್ಯಾಂಡ್ ಮಾಡುತ್ತಿದ್ದೇನೆ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ನ್ಯಾಯಾಂಗ ತನಿಖೆ ಮಾಡಬೇಕು ಅಂತಾ ಒತ್ತಾಯಿಸುತ್ತಿದ್ದೇನೆ ಎಂದು ಅವರು ಸುದ್ದಿಗೊಷ್ಟಿಯಲ್ಲಿ ಹೇಳಿದರು.
ಮಂಗಳೂರು ಗೋಲಿಬಾರ್ನಲ್ಲಿ ಮೃತರಾದ ಜಲೀಲ್ ಹಾಗೂ ನೌಸೀನ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ ಹಾಗೂ ಪಕ್ಷದ ವತಿಯಿಂದ ಪರಿಹಾರದ ಚೆಕ್ ವಿತರಿಸಿದೆ. ಈ ವೇಳೆ ಮಾಜಿ ಸಚಿವರಾದ ರಮಾನಾಥ ರೈ, @utkhader, @MBPatil, @BZZameerAhmedK ಅವರು ಹಾಜರಿದ್ದರು.#Mangaluru pic.twitter.com/DqRR93WvIP
— Siddaramaiah (@siddaramaiah) December 23, 2019
Published On - 2:51 pm, Mon, 23 December 19