ರಾಜಧಾನಿ ಪಕ್ಕದಲ್ಲೇ ಇರುವ ಆನೇಕಲ್ನಲ್ಲಿ ಅದ್ಧೂರಿ ರೈತರ ಹಬ್ಬ
ಬೆಂಗಳೂರು ಗ್ರಾಮಾಂತರ: ಡಿಸೆಂಬರ್ 23ರಂದು ದೇಶಾದ್ಯಂತ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತೆ. ಭಾರತೀಯ ರೈತರ ಅಭಿವೃದ್ಧಿಗಾಗಿ ದೇಶದ 5ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಹಲವು ನೀತಿಗಳನ್ನು ಜಾರಿಗೆ ತಂದಿದ್ದರು. ಹೀಗಾಗಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟು ಹಬ್ಬದ ಸ್ಮರಣಾರ್ಥ ಡಿ.23ರಂದು ರೈತ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತೆ. ರಾಜಧಾನಿ ಪಕ್ಕದಲ್ಲೇ ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ತಾಲೂಕಿನ ಮಾಯಸಂದ್ರದಲ್ಲೂ ಸಹ ಅದ್ಧೂರಿಯಾಗಿ ರೈತ ದಿನಾಚರಣೆ ಮಾಡಲಾಯಿತು. ರಂಗೋಲಿ, ಎತ್ತಿನಗಾಡಿ ಎಳೆಯುವ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು […]
ಬೆಂಗಳೂರು ಗ್ರಾಮಾಂತರ: ಡಿಸೆಂಬರ್ 23ರಂದು ದೇಶಾದ್ಯಂತ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತೆ. ಭಾರತೀಯ ರೈತರ ಅಭಿವೃದ್ಧಿಗಾಗಿ ದೇಶದ 5ನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಹಲವು ನೀತಿಗಳನ್ನು ಜಾರಿಗೆ ತಂದಿದ್ದರು. ಹೀಗಾಗಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟು ಹಬ್ಬದ ಸ್ಮರಣಾರ್ಥ ಡಿ.23ರಂದು ರೈತ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತೆ.
ರಾಜಧಾನಿ ಪಕ್ಕದಲ್ಲೇ ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ತಾಲೂಕಿನ ಮಾಯಸಂದ್ರದಲ್ಲೂ ಸಹ ಅದ್ಧೂರಿಯಾಗಿ ರೈತ ದಿನಾಚರಣೆ ಮಾಡಲಾಯಿತು. ರಂಗೋಲಿ, ಎತ್ತಿನಗಾಡಿ ಎಳೆಯುವ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗೂ ಸಹ ಕೃಷಿ ಬಗ್ಗೆ ರೈತರು ಮಾಹಿತಿ ನೀಡಿದರು.