ಬರಿದಾದ ಕೋಟೆನಾಡಿನಲ್ಲಿ 8 ವರ್ಷ ಬಳಿಕ 100 ಅಡಿ ದಾಟಿತು ವಾಣಿವಿಲಾಸ ಜಲಾಶಯ
ಚಿತ್ರದುರ್ಗ: ಸಾವಿರಾರು ಮಂದಿಗೆ ಕುಡಿಯೋ ನೀರಿನ ಮೂಲ.. ಹತ್ತಾರು ಹಳ್ಳಿಗಳ ರೈತರಿಗೆ ಜೀವಜಲ.. ಇಂಥಾ ಜಲಾಶಯ ಹಲವು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತುಂಬಿರಲಿಲ್ಲ. ಇದ್ರಿಂದ ಸ್ಥಳೀಯರು ಮಾತ್ರವಲ್ದೇ ಅಧಿಕಾರಿಗಳು ಭಯ ಬಿದ್ದಿದ್ರು. ಆದ್ರೀಗ ಮಳೆಯಿಂದ ಜಲಾಶಯ ತುಂಬಿದ್ದು, ಎಲ್ಲರಿಗೂ ಸಂತಸ ಮೂಡಿಸಿದೆ. ಸುತ್ತ ಮುತ್ತ ಗುಡ್ಡ. ನಡುವೆ ತುಂಬಿದ ಜಲಾಶಯ. ಎತ್ತ ನೋಡಿದ್ರೂ ಹಸಿರೇ ಹಾಸಿಗೆಯಂತೆ ಕಾಣ್ತಿದೆ. ಹಾಗಂತ ಈ ಜಲಾಶಯ ಪ್ರವಾಸಿಗರನ್ನ ಮಾತ್ರ ಸೆಳೀತಿಲ್ಲ. ಸುತ್ತ ಮುತ್ತಲ ರೈತರ ಪಾಲಿಗೂ ಸಂತಸ ಮೂಡಿಸಿದೆ. 8 ವರ್ಷಗಳ […]
ಚಿತ್ರದುರ್ಗ: ಸಾವಿರಾರು ಮಂದಿಗೆ ಕುಡಿಯೋ ನೀರಿನ ಮೂಲ.. ಹತ್ತಾರು ಹಳ್ಳಿಗಳ ರೈತರಿಗೆ ಜೀವಜಲ.. ಇಂಥಾ ಜಲಾಶಯ ಹಲವು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತುಂಬಿರಲಿಲ್ಲ. ಇದ್ರಿಂದ ಸ್ಥಳೀಯರು ಮಾತ್ರವಲ್ದೇ ಅಧಿಕಾರಿಗಳು ಭಯ ಬಿದ್ದಿದ್ರು. ಆದ್ರೀಗ ಮಳೆಯಿಂದ ಜಲಾಶಯ ತುಂಬಿದ್ದು, ಎಲ್ಲರಿಗೂ ಸಂತಸ ಮೂಡಿಸಿದೆ.
ಸುತ್ತ ಮುತ್ತ ಗುಡ್ಡ. ನಡುವೆ ತುಂಬಿದ ಜಲಾಶಯ. ಎತ್ತ ನೋಡಿದ್ರೂ ಹಸಿರೇ ಹಾಸಿಗೆಯಂತೆ ಕಾಣ್ತಿದೆ. ಹಾಗಂತ ಈ ಜಲಾಶಯ ಪ್ರವಾಸಿಗರನ್ನ ಮಾತ್ರ ಸೆಳೀತಿಲ್ಲ. ಸುತ್ತ ಮುತ್ತಲ ರೈತರ ಪಾಲಿಗೂ ಸಂತಸ ಮೂಡಿಸಿದೆ.
8 ವರ್ಷಗಳ ಬಳಿಕ 100 ಅಡಿ ದಾಟಿತು ನೀರಿನ ಮಟ್ಟ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಬಳಿಯ ವಾಣಿವಿಲಾಸ ಸಾಗರ ಜಲಾಶಯ ಈಗ ಪ್ರವಾಸಿಗರ ಪಾಲಿಗೆ ಆಕರ್ಷಣೆಯ ಕೇಂದ್ರವಾಗಿದೆ. ಮಾತ್ರವಲ್ದೇ ರೈತರ ಮೊಗದಲ್ಲೂ ಮಂದಹಾಸ ಮೂಡಿಸಿದೆ. ನಿರಂತರ ಬರಗಾಲದಿಂದಾಗಿ ಈ ಜಲಾಶಯ ಡೆಡ್ ಸ್ಟೋರೇಜ್ ಹಂತ ತಲುಪಿತ್ತು.
ಹೀಗಾಗಿ ಪೂರ್ಣ ನೀರು ಖಾಲಿಯಾಗುತ್ತೇನೋ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಆದ್ರೆ ಕಳೆದ ಕೆಲ ತಿಂಗಳ ಹಿಂದೆ ಉತ್ತಮ ಮಳೆಯಾಗಿದ್ರಿಂದ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ಹಾಗೇ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಹೀಗಾಗಿ, ಸುಮಾರು 8ವರ್ಷಗಳ ಬಳಿಕ ಜಲಾಶಯದಲ್ಲಿ ನೂರು ಅಡಿ ನೀರು ದಾಟಿದ್ದು ಬಯಲುಸೀಮೆಯ ಜನರಲ್ಲಿ ಖುಷಿ ತಂದಿದೆ.
ಇನ್ನು ಜಲಾಶಯ ಭರ್ತಿ ಆಗಿರುವುದರಿಂದ ಒಣಗಿ ಹೋಗಿದ್ದ ತೋಟ ಗದ್ದೆಗಳು ಸದ್ಯ ಹಸಿರಾಗಿ ಕಂಗೊಳಿಸುತ್ತಿವೆ. ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿದ್ದು, ಕೊಳವೆಬಾವಿಗಳಲ್ಲೂ ನೀರು ಬರ್ತಿದೆ. ಜಿಲ್ಲೆಯ ಜನರಿಗೂ ಕುಡಿಯುವ ನೀರಿಗಿನ್ನು ಸಮಸ್ಯೆ ಇಲ್ಲ ಎಂಬ ಭಾವನೆ ಮೂಡಿದೆ.
Published On - 7:55 am, Tue, 24 December 19