ಮಂಗಳೂರು ಫೈರಿಂಗ್‌: ವಿದೇಶಗಳಿಂದ ಪೊಲೀಸರಿಗೆ ಬರ್ತಿವೆ ಬೆದರಿಕೆಯ ಕರೆ‌ಗಳು!

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಂತಹ ಪ್ರತಿಭಟನೆ ವೇಳೆ ಪೊಲೀಸರಿಂದ ಆದ ಫೈರಿಂಗ್‌ಗೆ ಇಬ್ಬರು ಮೃತಪಟ್ಟಿದ್ದರು. ಈ ಗೋಲಿಬಾರ್​ ಸಂಬಂಧ ವ್ಯಾಪಕ ಟೀಕೆ ಟಿಪ್ಪಣಿಗಳು ಬಂದಿದ್ದವು. ಈಗ ಈ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಂಗಳೂರು ಪೊಲೀಸರಿಗೆ ವಿದೇಶಗಳಿಂದ ಬೆದರಿಕೆಯ ಕರೆಗಳು ಬರುತ್ತಿವೆಯಂತೆ. ಪೊಲೀಸ್ ಫೈರಿಂಗ್‌ನಲ್ಲಿ ಪೊಲೀಸರೊಬ್ಬರು ಗುಂಡು ಹಾರಿಸಿ ನಂತರ ಒಂದು ಹೆಣಾನೂ ಬಿದ್ದಿಲ್ಲ ಎನ್ನುವ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಸಂಬಂಧಿಸಿ ಕದ್ರಿ ಠಾಣೆ ಇನ್ಸ್‌ಪೆಕ್ಟರ್ ಶಾಂತಾರಾಮ್​ಗೆ ವಿದೇಶಗಳಿಂದ ಬೆದರಿಕೆ […]

ಮಂಗಳೂರು ಫೈರಿಂಗ್‌: ವಿದೇಶಗಳಿಂದ ಪೊಲೀಸರಿಗೆ ಬರ್ತಿವೆ ಬೆದರಿಕೆಯ ಕರೆ‌ಗಳು!
Follow us
ಸಾಧು ಶ್ರೀನಾಥ್​
|

Updated on: Dec 24, 2019 | 11:26 AM

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಂತಹ ಪ್ರತಿಭಟನೆ ವೇಳೆ ಪೊಲೀಸರಿಂದ ಆದ ಫೈರಿಂಗ್‌ಗೆ ಇಬ್ಬರು ಮೃತಪಟ್ಟಿದ್ದರು. ಈ ಗೋಲಿಬಾರ್​ ಸಂಬಂಧ ವ್ಯಾಪಕ ಟೀಕೆ ಟಿಪ್ಪಣಿಗಳು ಬಂದಿದ್ದವು. ಈಗ ಈ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಂಗಳೂರು ಪೊಲೀಸರಿಗೆ ವಿದೇಶಗಳಿಂದ ಬೆದರಿಕೆಯ ಕರೆಗಳು ಬರುತ್ತಿವೆಯಂತೆ.

ಪೊಲೀಸ್ ಫೈರಿಂಗ್‌ನಲ್ಲಿ ಪೊಲೀಸರೊಬ್ಬರು ಗುಂಡು ಹಾರಿಸಿ ನಂತರ ಒಂದು ಹೆಣಾನೂ ಬಿದ್ದಿಲ್ಲ ಎನ್ನುವ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಸಂಬಂಧಿಸಿ ಕದ್ರಿ ಠಾಣೆ ಇನ್ಸ್‌ಪೆಕ್ಟರ್ ಶಾಂತಾರಾಮ್​ಗೆ ವಿದೇಶಗಳಿಂದ ಬೆದರಿಕೆ ಕರೆ‌ ಬಂದಿದೆಯಂತೆ. ನಿರಂತರವಾಗಿ ಹಿಂದಿ ಭಾಷೆಯಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇನ್ಸ್‌ಪೆಕ್ಟರ್ ಶಾಂತಾರಾಮ್ ಪಾಂಡೇಶ್ವರ ಪೊಲೀಸ್ ಠಾಣೆ, ಹಾಗೂ ಸೈಬರ್ ಕ್ರೈಂ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.