Daily Devotional: ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
"ಏಕಬಿಲ್ವಂ ಶಿವಾರ್ಪಣಂ" ಎಂಬಂತೆ, ಭಕ್ತಿಯಿಂದ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಶುದ್ಧವಾದ, ಹರಿದಿರದ ಮೂರು ಎಲೆಗಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಇದು ಕೇವಲ ನಂಬಿಕೆಯ ಆಧಾರವಾಗಿದ್ದು, ಶ್ರದ್ಧೆಯಿಂದ ಪೂಜಿಸುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 14: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವನ ಆರಾಧನೆಗೆ ಬಿಲ್ವಪತ್ರೆಯು ಅತ್ಯಂತ ಪ್ರಮುಖವಾಗಿದೆ. ಶಿವನಿಗೆ ಅತಿ ಪ್ರಿಯವಾದ ಪತ್ರೆಯಾಗಿರುವ ಬಿಲ್ವಪತ್ರೆಯನ್ನು ಹಿಂದೂ ಧರ್ಮದಲ್ಲಿ ಶ್ರೀವೃಕ್ಷ ಎಂದೂ ಕರೆಯಲಾಗುತ್ತದೆ. ಇದು ಮಹಾಲಕ್ಷ್ಮಿಗೂ ಪ್ರಿಯವಾಗಿದೆ. ಬಿಲ್ವಪತ್ರೆಯ ಮೂರು ದಳಗಳು ಸತ್ವ, ರಜೋ, ತಮೋಗುಣಗಳ ಪ್ರತೀಕ ಹಾಗೂ ಶಿವನ ತ್ರಿನೇತ್ರಗಳ ಸಂಕೇತವಾಗಿವೆ.
“ಏಕಬಿಲ್ವಂ ಶಿವಾರ್ಪಣಂ” ಎಂಬಂತೆ, ಭಕ್ತಿಯಿಂದ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಶುದ್ಧವಾದ, ಹರಿದಿರದ ಮೂರು ಎಲೆಗಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಇದು ಕೇವಲ ನಂಬಿಕೆಯ ಆಧಾರವಾಗಿದ್ದು, ಶ್ರದ್ಧೆಯಿಂದ ಪೂಜಿಸುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ

