‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್​ ರಾವ್​-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು

‘ಪ್ರತಿ ವಿಚಾರವೂ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಇದು ಪಬ್ಲಿಸಿಟಿ ಗಿಮಿಕ್​ ಅಲ್ಲ. ಇದು ವೈಯಕ್ತಿಕ ವಿಚಾರ’ ಎಂದಿದ್ದಾರೆ ರಚಿತಾ.

TV9kannada Web Team

| Edited By: Rajesh Duggumane

Dec 23, 2021 | 5:47 PM

‘ಲವ್​ ಯೂ ರಚ್ಚು’ ಚಿತ್ರದಲ್ಲಿ ರಚಿತಾ ರಾಮ್​ ಮತ್ತು ಅಜಯ್​ ರಾವ್​ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಜತೆ ಅಜಯ್​ ರಾವ್​ ಮನಸ್ತಾಪ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿತ್ತು. ಇದನ್ನು ಅಜಯ್​ ರಾವ್​ ಅವರೇ ಒಪ್ಪಿಕೊಂಡಿದ್ದರು. ಇದಾದ ಬೆನ್ನಲ್ಲೇ ಅವರು ಪ್ರಚಾರಕ್ಕೆ ಇಳಿದಿದ್ದರು. ಇದನ್ನು ನೋಡಿದ ಅನೇಕರು ಇದೊಂದು ಪ್ರಚಾರದ ಗಿಮಿಕ್​ ಎಂದು ಮಾತನಾಡಿದ್ದರು. ಇದಕ್ಕೆ ರಚಿತಾ ಉತ್ತರಿಸಿದ್ದಾರೆ. ‘ಪ್ರತಿ ವಿಚಾರವೂ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಇದು ಪಬ್ಲಿಸಿಟಿ ಗಿಮಿಕ್​ ಅಲ್ಲ. ಇದು ವೈಯಕ್ತಿಕ ವಿಚಾರ. ಋಣಾತ್ಮಕ ವಿಚಾರದ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ’ ಎಂದಿದ್ದಾರೆ ರಚಿತಾ.

ಇದನ್ನೂ ಓದಿ: ‘ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’; ನಟ ಅಜಯ್​ ರಾವ್​ ಬಗ್ಗೆ ಗುರು ದೇಶಪಾಂಡೆ ಗರಂ

‘ಲವ್ ಯೂ ರಚ್ಚು ತಂಡದ ಜತೆ ನಾನು ಕಾಣಿಸಿಕೊಳ್ಳಲ್ಲ, ನಿರ್ಮಾಪಕರಿಂದ ಅವಮಾನ ಆಗಿದೆ’; ಅಜಯ್ ರಾವ್

Follow us on

Click on your DTH Provider to Add TV9 Kannada