‘ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’; ನಟ ಅಜಯ್​ ರಾವ್​ ಬಗ್ಗೆ ಗುರು ದೇಶಪಾಂಡೆ ಗರಂ

‘ನನಗೆ ನಿರ್ಮಾಪಕರಿಂದ ಅವಮಾನ ಆಗಿದೆ. ನಾನು ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ತಂಡದ ಜತೆ ತೆರಳುವುದಿಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ’ ಎಂದಿದ್ದರು ಅಜಯ್​ ರಾವ್ . ಈ ವಿಚಾರಕ್ಕೆ ಸಂಬಂಧಿಸಿ ಗುರು ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

TV9kannada Web Team

| Edited By: Rajesh Duggumane

Dec 23, 2021 | 3:08 PM

‘ಲವ್​ ಯೂ ರಚ್ಚು’ ಸಿನಿಮಾ ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಹಲವು ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡದಲ್ಲಿ ವೈಮನಸ್ಸು ಮೂಡಿದೆ. ನಟ ಅಜಯ್​ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ. ಈ ವಿಚಾರವನ್ನು ಅಜಯ್​ ರಾವ್​ ಅವರು ಟಿವಿ9 ಕನ್ನಡದ ಎದುರು ಹೇಳಿಕೊಂಡಿದ್ದರು. ‘ನನಗೆ ನಿರ್ಮಾಪಕರಿಂದ ಅವಮಾನ ಆಗಿದೆ. ನಾನು ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ತಂಡದ ಜತೆ ತೆರಳುವುದಿಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ’ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಗುರು ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ. ‘ನಾನು ಕೋಟಿಕೋಟಿ ಹಾಕಿ ಸಿನಿಮಾ ಮಾಡಿದ್ದೇನೆ. ಅಜಯ್​ ರಾವ್​ ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಆದರೆ, ಇಲ್ಲಿವರೆಗೆ ಸಿನಿಮಾ ಬಗ್ಗೆ ಒಂದೇ ಒಂದು ಪೋಸ್ಟ್ ಹಾಕಿಲ್ಲ. ಹಾಕಿದ ದುಡ್ಡು ಬರದಿದ್ದರೆ ಮನೆ ಮುಂದೆ ಹೋಗಿ ಕೂರುತ್ತೇನೆ. ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್​ ರಾವ್​

Follow us on

Click on your DTH Provider to Add TV9 Kannada